ಕೋಳಿ ಸಾರು ನೆಪ: ಮುಖ್ಯ ಪೇದೆ ಲೈಂಗಿಕ ದೌರ್ಜನ್ಯ
Team Udayavani, Jul 30, 2017, 6:05 AM IST
ತುಮಕೂರು: ನಗರದಲ್ಲಿ ಪೊಲೀಸರಿಂದಲೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ರಕ್ಷಣೆ ನೀಡಬೇಕಾಗಿರುವ ಪೊಲೀಸರೇ ಭಕ್ಷಕರಾಗುತ್ತಿದ್ದಾರೆ.
ಇತ್ತೀಚೆಗಷ್ಟೇ ಎಎಸ್ಸೆ„ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಮುಖ್ಯಪೇದೆಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ಇಲ್ಲಿಯ ಜಯನಗರ ಠಾಣೆ ಮುಖ್ಯಪೇದೆ ಮೋಹನ್ ಕುಮಾರ್ ನೀಚ ಕೃತ್ಯ ಎಸಗಿ ಈಗ ಸಹೋದ್ಯೋಗಿ ಪೊಲೀಸರ ಅತಿಥಿಯಾಗಿದ್ದಾರೆ. ಈ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೋಹನ್ ಕುಮಾರ್ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಬೇರೊಬ್ಬ ಮಹಿಳೆ ಮತ್ತು ಆಕೆಯ ಮಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು ಎನ್ನಲಾಗಿದೆ. ಮೊದಲಿಗೆ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ನಂತರ ಆಕೆಯ ಮಗಳ ಸೌಂದರ್ಯಕ್ಕೆ ಮಾರು ಹೋಗಿ ಆಕೆ ಮೇಲೂ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಅಧಿಕಾರಿಯೊಬ್ಬರು ನಾಟಿ ಕೋಳಿ ಸಾರು ತೆಗೆದುಕೊಂಡು ಬಾ ಎಂದು ಮುಖ್ಯಪೇದೆ ಮೋಹನ್ಗೆ ಹೇಳಿದ್ದಾರೆ. ಮೋಹನ್ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಬಳಿ “ನಾಟಿ ಕೋಳಿಸಾರು
ಎಲ್ಲಿ ಮಾಡಿಕೊಡುತ್ತಾರೆ’ ಎಂದು ಕೇಳಿದ್ದಾರೆ. ಅದಕ್ಕೆ ಹೋಂಗಾರ್ಡ್ ನಮ್ಮ ಮನೆಯಲ್ಲೇ ಮಾಡಿಸಿಕೊಂಡು ಬರೋಣ ಎಂದಿದ್ದಾರೆ. ಇಬ್ಬರೂ ಜೊತೆಯಲ್ಲಿ ಮನೆಗೆ ಹೋಗಿದ್ದಾರೆ. ಆಗ ಹೋಂಗಾರ್ಡ್ ಪತ್ನಿಯ ಸೌಂದರ್ಯಕ್ಕೆ ಮಾರುಹೋದ ಮೋಹನ್ಕುಮಾರ್, ಅಕ್ರಮ ಸಂಬಂಧ ಬೆಳೆಸಿದ್ದಾರೆ. ಬಳಿಕ ಆಕೆಯ ಮಗಳ ಮೇಲೂ ಕಾಮದೃಷ್ಟಿ ಬೀರಿದ್ದಾರೆ. “ಮಗಳಿಗೆ ಮದುವೆ ಮಾಡುತ್ತೇನೆ, ಅವಳ ಸಹವಾಸ ಬೇಡ’ ಎಂದು ಮಹಿಳೆ ಹೇಳಿದರೂ, ಮೋಹನ್ “ನೀನು ಬೇಡ ನಿನ್ನ ಮಗಳು ಬೇಕು’ ಎಂದಿದ್ದಾನೆ. ರೋಸಿದ ತಾಯಿ, ಮಗಳು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕುರಿತು ಎಸ್ಪಿ ಡಾ.ದಿವ್ಯಾಗೋಪಿನಾಥ್ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಪೇದೆಯಿಂದ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜ ಎಂದು ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.