ನಿರೀಕ್ಷೆ ಮೂಡಿಸದ ಪೂರ್ವ ಮುಂಗಾರು
Team Udayavani, May 16, 2019, 12:07 PM IST
ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ದಿನಗಳು ಹತ್ತಿರ ಬರುತ್ತಿವೆ. ಪೂರ್ವ ಮುಂಗಾರು ಮಳೆಯಂತೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟಕ್ಕೆ ಬಂದಿಲ್ಲ. ಈ ಹಿಂದೆ ಬಿದ್ದಿರುವ ವಾಡಿಕೆ ಮಳೆಗಿಂತ ಕಡಿಮೆ ಮಳೆ ಜಿಲ್ಲೆಯಲ್ಲಾಗಿದೆ. ಮುಂದೆ ಜೂನ್‌ನಿಂದ ಮುಂಗಾರು ಮಳೆ ಆರಂಭವಾಗಲಿದೆ. ಗಾಳಿ, ಮಳೆಗೆ ಪ್ರತಿವರ್ಷ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಕೆಲವು ಪ್ರದೇಶಗಳು ಜಲಾವೃತ್ತವಾಗುತ್ತವೆ. ಮಳೆ ಗಾಳಿಗೆ ಮರಗಳು ವಿದ್ಯುತ್ ಕಂಬಗಳು ಬಿದ್ದು ನಷ್ಟ ಉಂಟಾಗುತ್ತದೆ. ಜನಸಾಮಾನ್ಯರಿಗೆ ಈ ರೀತಿ ನಷ್ಟ ಉಂಟಾಗದಂತೆ ಅಧಿಕಾರಿಗಳು ಈ ಬಾರಿಯಾದರೂ ಕ್ರಮ ಕೈಗೊಳ್ಳುವವರೇ?
ತುಮಕೂರು: ಮಳೆಗಾಲ ಸನಿಹ ಬರುತ್ತಿದೆ. ವಾಡಿಕೆ ಯಂತೆ ಏಪ್ರಿಲ್, ಮೇ ತಿಂಗಳಲ್ಲಿ ಕಲ್ಪತರು ನಾಡಿನಲ್ಲಿ ಹೆಚ್ಚು ಮಳೆ ಬಂದು ಬೆಳೆಗೆ ಆಶ್ರ ಯವಾಗುತ್ತಿತ್ತು. ಆದರೆ, ಈ ಬಾರಿ ಪೂರ್ವ ಮುಂಗಾರು ಮಳೆ ಕೈಕೊಟ್ಟಿದೆ. ಮುಂದೆ ಮುಂಗಾರು ಮಳೆ ಜೂನ್ ತಿಂಗಳಲ್ಲಿ ಆರಂಭವಾಗ ಲ್ಲಿದೆ. ಬಿದ್ದ ಮಳೆ ಸರಿಯಾದ ರೀತಿಯಲ್ಲಿ ಶೇಖರಣೆ ಯಾಗದೇ ಕೆರೆ ಕಟ್ಟೆಗಳಿಗೆ ಮಳೆ ನೀರು ಹೋಗದೆ ಹೆಚ್ಚು ವ್ಯಯವಾಗು ತ್ತಿದ್ದು, ಗಾಳಿ, ಮಳೆಯಿಂದ ಪ್ರತಿವರ್ಷ ಲಕ್ಷಾಂತರ ರೂ.ನಷ್ಟ ಸಂಬಂವಿಸಿದೆ. ಈ ಬಾರಿಯ ಗಾಳಿ, ಮಳೆಯಿಂದ ಅನಾಹುತಾ ತಪ್ಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆಯೇ?
ಕಲ್ಪತರು ನಾಡಿನಲ್ಲಿ ಈ ಹಿಂದೆ ಎಂದೂ ಕಂಡಿರ ದಷ್ಟು ಸುಡುಬಿಸಿಲಿದೆ. ಮಳೆಗಾಗಿ ಮುಗಿಲು ನೋಡು ತ್ತಿರುವ ರೈತರಿಗೆ ದಿನೇ ದಿನೆ ನಿರಾಸೆಯಾಗುತ್ತಿದೆ. ಜಿಲ್ಲೆಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಬೀಳಬೇಕಾಗಿದ್ದ ವಾಡಿಕೆ ಮಳೆ ಬಿದ್ದಿಲ್ಲ. ಶೇ.3.9 ಮಿ.ಮೀ ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಮಂದೆ ಮುಂಗಾರು ಮಳೆ ಜಿಲ್ಲೆಯಲ್ಲಿ ರಭಸವಾಗಿ ಬಿದ್ದರೆ, ಬಹುತೇಕ ಪ್ರದೇಶ ಗಳು, ಜಲಾವೃತ್ತವಾಗಿ ಜನ ಸಂಕಷ್ಟ ಪಡುವ ವಾತಾ ವರಣ ನಗರವೂ ಸೇರಿದಂತೆ ಜಿಲ್ಲೆಯಲ್ಲಿದೆ.
ಒತ್ತುವರಿಯಾಗಿವೆ ರಾಜಕಾಲುವೆಗಳು: ಮಳೆ ಬಂದರೆ ಮಳೆಯ ನೀರು ಸರಾಗವಾಗಿ ಕೆರೆ, ಕಟ್ಟೆಗಳಿಗೆ ಹರಿದು ಹೋಗಲು ಈ ಹಿಂದೆ ರಾಜಕಾಲುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಮಳೆ ಎಲ್ಲಿಯೇ ಬಿದ್ದರೂ ಅ ರಾಜಗಾಲುವೆ ಮೂಲಕ ಸಂಬಂಧಿಸಿದ ಕೆರೆ, ಕಟ್ಟೆಗಳಿಗೆ ಎಲ್ಲಿಯೂ ನೀರು ವ್ಯ¿ ುವಾಗದಂತೆ ಹರಿದು ಹೋಗುತ್ತಿತ್ತು. ಆದರೆ, ಇತೀಚಿನ ದಿನಗಳಲ್ಲಿ ರಾಜಕಾಲುವೆಗಳು ಭೂಗಳ್ಳರ ಪಾಲಾಗಿದೆ. ಬಹುತೇಕ ಕಡೆಗಳಲ್ಲಿ ಈ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದ ಬಿದ್ದ ಮಳೆ ನೀರು ಸರಾಗವಾಗಿ ಹರಿದು ಹೋಗದೇ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಗುತ್ತದೆ.
ಚರಂಡಿಗಳಲ್ಲಿ ತುಂಬಿದೆ ಕಸ ಕಡ್ಡಿ: ತುಮಕೂರು ಸೇರಿದಂತೆ ನಗರ ಪ್ರದೇಶದಲ್ಲಿ ರಸ್ತೆಯಲ್ಲಿ ಬಿದ್ದ ಮಳೆ ನೀರು ಚರಂಡಿಗಳ ಮೂಲಕ ಹೋಗಲು ಸ್ಥಳೀಯ ಸಂಸ್ಥೆಗಳಿಂದ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ಚರಂಡಿಗಳಲ್ಲಿ ಕಸ, ಕಡ್ಡಿ ತುಂಬಿ ನೀರು ಹರಿಯ ದಂತಾಗಿರುವುದರಿಂದ ಬಿದ್ದ ಮಳೆಯ ನೀರು ಚರಂಡಿ ಗಳಲ್ಲಿ ಸರಾಗವಾಗಿ ಹರಿದು ಹೋಗದೇ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುತ್ತದೆ. ನಗರದ ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ, ಬನಶಂಕರಿ, ಶಿರಾ ಗೇಟ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದು ಪಾದಚಾರಿಗಳಿಗೆ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
ಇದರ ಜೊತೆಗೆ ನಗರದಲ್ಲಿರುವ ಹಲವು ಪ್ರದೇಶ ಗಳು ಜಲಾವೃತವಾಗುತ್ತಿವೆ. 15ರಿಂದ 20 ಮಿ.ಮೀ ಮಳೆ ನಗರದಲ್ಲಿ ಬಿದ್ದರೆ ಸಾಕು ಎಸ್.ಎಸ್.ಪುರಂ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಇದಕ್ಕೆ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡದೇ ಇರುವುದು ಜೊತೆಗೆ ನೀರು ಹರಿಯಬೇಕಾಗಿರುವ ಜಾಗಗಳನ್ನು ಒತ್ತುವರಿ ಮಾಡಿಕೊಂಡು ನೀರು ಹರಿಯದಂತೆ ಮಾಡಿರುವುದು ಪ್ರಮುಖವಾಗಿದ್ದು, ಇದರಿಂದ ಮಳೆಗಾಲದಲ್ಲಿ ಜನ ತೊಂದರೆ ಪಡುವ ಸಾಧ್ಯತೆಗಳು ಹೆಚ್ಚು ಕಂಡುಬರುತ್ತಿದೆ.
ಬಿರುಗಾಳಿಗೆ ಮರ, ಕಂಬಗಳು ಧರೆಗೆ: ಮಳೆ ಬಂದ ರಂತೂ ಬಿರುಗಾಳಿ ರಭಸಕ್ಕೆ ರಸ್ತೆ ಬದಿಯ ಮರಗಳು, ವಿದ್ಯುತ್ ಕಂಬಗಳು, ಮನೆಯ ಶೀಟುಗಳು ಹಾರಿ ಹೋಗುವುದು ಸಹಜವಾಗಿದೆ. ಪ್ರತಿವರ್ಷ ಮಳೆ ಗಾಲದಲ್ಲಿ ಮರ ಗಿಡಗಳು ಬೇರು ಸಮೇತ ಗಾಳಿಯ ರಭಸಕ್ಕೆ ಬಿದ್ದು, ತೊಂದರೆ ಉಂಟಾಗಿದೆ. ಕೆಲವು ಕಡೆಗಳಲ್ಲಿ ಮರದ ಕೊಂಬೆಗಳು ಜನರ, ವಾಹನಗಳ ಮೇಲೆ ಬಿದ್ದು ತೊಂದರೆ ಉಂಟಾಗಿದೆ. ವಿದ್ಯುತ್ ಕಂಬಗಳು ಕೂಡ ಗಾಳಿಯ ರಭಸಕ್ಕೆ ಬಿದ್ದು ಜನರಿಗೆ ತೊಂದರೆ ಉಂಟಾಗಿರುವುದೇ ಹೆಚ್ಚು ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಆದರೆ, ಈ ರೀತಿ ನಷ್ಟ ಆಗದಂತೆ ತಡೆಯಬೇಕಾಗಿರುವ ಅಧಿಕಾರಿಗಳು ಮೌನವಾಗಿದ್ದಾರೆ.
ಬಿದ್ದ ಮಳೆ ನೀರು ವ್ಯರ್ಥ: ಜಿಲ್ಲೆಯಲ್ಲಿ ಇರುವ ರಾಜಗಾಲುವೆಗಳನ್ನು ತೆರವು ಮಾಡಿ, ಮಳೆಯ ನೀರು ಸರಾಗವಾಗಿ ಹೋಗುವಂತೆ ಮಾಡಿದರೆ ಬೀಳುವ ಮಳೆಯಿಂದ ಕನಿಷ್ಠ ಕೆರೆ, ಕಟ್ಟೆಗಳಾದರೂ ತುಂಬುತ್ತವೆ. ಬಿದ್ದ ಮಳೆಯ ನೀರನ್ನು ಸಮರ್ಪಕವಾಗಿ ಉಪ ಯೋಗಿಸದೇ ನೀರು ವ್ಯಯವಾಗಲು ಬಿಡುವುದರಿಂದ ಕೆರೆ, ಕಟ್ಟೆಗಳು ತುಂಬದೇ ಮಳೆಯ ನೀರು ವ್ಯಯ ವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸ ಬೇಕಾಗಿದೆ. ಅದೇ ರೀತಿಯಲ್ಲಿ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಮಳೆನೀರು ಹರಿಯಂದೆ ಇರುತ್ತದೆ. ಮಳೆ ಪ್ರಾರಂಭವಾಗುವ ಮುನ್ನ ಈ ಚರಂಡಿಗಳನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಯನ್ನು ಮಾಡಬೇಕಾಗಿದೆ. ನಗರದ ರಸ್ತೆಯ ಬದಿಗಳಲ್ಲಿ ಒಣಗಿರುವ ಮರಗಿಡಗಳನ್ನು ತೆರವು ಗೊಳಿಸಲು ಅರಣ್ಯ ಇಲಾಖೆ ಮುಂದಾಗಬೇಕು. ಜೊತೆಗೆ ಬೀಳುವ ರೀತಿಯಲ್ಲಿರುವ ಕೊಂಬೆಗಳನ್ನು ಕಡಿದು ಜನರ ಮೇಲೆ, ವಾಹನಗಳ ಮೇಲೆ ಬೀಳದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ಮಳೆಗಾಲದಲ್ಲಿ ಜನ ಸಾಮಾನ್ಯ ರಿಗೆ ತೊಂದರೆ ಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಮಳೆಯಿಂದ ಆಗಿರುವ ತೊಂದರೆಗಳನ್ನು ತಪ್ಪಿಸಲು ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸುವುದು ಅಗತ್ಯವಾಗಿದೆ.
ಜೂನ್‌ನಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಮಳೆಗಾಲದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ
ಜಿಲ್ಲಾಡಳಿತದಿಂದ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ಮಳೆಯಿಂದ ಹಾನಿಯಾಗುವ ಬಗ್ಗೆ ಸ್ಥಳೀಯ ಅಧಿಕಾರಿ
ಗಳಿಂದ ಮಾಹಿತಿ ತರಿಸಲಾಗುವುದು, ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆಕಟ್ಟೆಗಳಿಗೆ ನೀರು ಹರಿಯುವ ರಾಜಗಾಲುವೆಗಳ ತೆರವು ಕಾರ್ಯಾಚರಣೆ, ಮಳೆಗಾಲದಲ್ಲಿ ಜನಗರಿಗೆ ತೊಂದರೆಯಾಗ ದಂತೆ ಕ್ರಮಗಳನ್ನು ಕೈಗೊಳ್ಳತ್ತೇವೆ.
● ಡಾ.ಕೆ.ರಾಕೇಶ್ ಕುಮಾರ್, ಜಿಲ್ಲಾಧಿಕಾರಿ
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.