ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ
ಮಾಜಿ ಪ್ರಧಾನಿಯಿಂದ ನಮ್ಮ ಜಿಲ್ಲೆಗೆ ಅನ್ಯಾಯ • ಮತದಾರರ ಋಣ ಎಂದೂ ಮರೆಯಲ್ಲ: ಜಿ.ಎಸ್.ಬಸವರಾಜ್
Team Udayavani, May 26, 2019, 3:23 PM IST
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಐದನೇ ಬಾರಿ ಸಂಸತ್‌ಗೆ ಪ್ರವೇಶ ಮಾಡುತ್ತಿರುವ ಸಂಸದ ಜಿ.ಎಸ್.ಬಸವರಾಜ್ ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಾನು ಈ ಹಿಂದಿ ನಿಂದಲೂ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಜನ ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ನನನ್ನು 17ನೇ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಬಗ್ಗೆ ನನಗೆ ತುಂಬಾ ಅಭಿಮಾನ ಮತ್ತು ಗೌರವವಿದೆ. ಅವರು ಹಿರಿಯರು ಅವರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಚುನಾವಣೆ ಅಂದರೆ, ಸೋಲು- ಗೆಲುವು ಇರುತ್ತದೆ. ಆದರೆ, ನನ್ನ ಗೆಲುವಿಗೆ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಜೊತೆಗೆ ಕೆಲವು ಮುಖಂಡರು ಇತರೆ ಮತದಾರರು ಪಕ್ಷಾತೀತವಾಗಿ ಮತಚಲಾಯಿಸಿದ್ದಾರೆ. ಅವರ ಈ ಸೇವೆಯನ್ನು ನಾನು ಎಂದೂ ಮರೆಯುವುದಿಲ್ಲ.
•ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಲು ಮೋದಿ ಅಲೆಯೇ ಕಾರಣವೇ?:
ನರೇಂದ್ರ ಮೋದಿ ಅಲೆ ಎಲ್ಲಾ ಕಡೆ ಇದೆ. ಅದರಂತೆ ಇಲ್ಲಿಯೂ ಇತ್ತು. ಎಲ್ಲರೂ ಪಕ್ಷಾತೀತವಾಗಿ ನನಗೆ ಮತ ನೀಡಿದ್ದಾರೆ. ಅದರಿಂದ ಗೆಲುವಿಗೆ ಹೆಚ್ಚು ನನಗೆ ಸಹಕಾರಿಯಾಗಿತು.
•ದೇವೇಗೌಡರ ಸೋಲಿಗೆ ಕಾರಣವೇನು? ಅವರ ಸೋಲಿಗೆ ನೀವು ಏನು ಹೇಳುತ್ತೀರಾ?:
ನಾನು ದೇವೇಗೌಡರ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರು ಹಿರಿಯರಿದ್ದಾರೆ. ಅವರ ಬಗ್ಗೆ ನನಗೆ ಗೌರವ ವಿದೆ. ಅವರು ಮಣ್ಣಿನ ಮಗ, ಅವರು ಹಾಸನಕ್ಕೆ ಒಳ್ಳೆ ಕೆಲಸ ಮಾಡಿದ್ದಾರೆ. ಆದರೆ, ಅವರು ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ನಮಗೆ ಹೇಮಾವತಿ ನೀರು ಕೊಡಲಿಲ್ಲ. ಇದನ್ನು ಜಿಲ್ಲೆಯ ಜನ ಮರೆತ್ತಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ.
•ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. ನೀವು ಜಿಲ್ಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ ಏನು?:
ನನ್ನ ಮೊದಲ ಆದ್ಯತೆ ಜಿಲ್ಲೆಗೆ ಕುಡಿಯಲು ನೀರು ಬೇಕು. ನೀರಾವರಿ ಯೋಜನೆ ಅನುಷ್ಠಾನ ಮಾಡು ವುದು ಜೊತೆಗೆ ಮೋದಿಯವರ ಕಾರ್ಯಕ್ರಮಗಳನ್ನು ಜಿಲ್ಲೆಯ ಜನರಿಗೆ ಹೆಚ್ಚು ತಲುಪಿಸುವುದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವುದು.
•ನಿಮ್ಮ ಗೆಲುವಿಗೆ ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಹೆಚ್ಚು ಮತಗಳು ಬಂದಿವೆ. ಇದಕ್ಕೆ ಏನಂತ್ತೀರಾ?:
ಜಿಲ್ಲೆಯು ಸದಾ ಬರಗಾಲದಲ್ಲಿ ಇದೆ. ಮಳೆ ಸರಿಯಾಗಿ ಬರುತ್ತಿಲ್ಲ. ನೀರಿನ ಸಮಸ್ಯೆ ಇದೆ. ನಾನು ಮೊದಲಿನಿಂದಲೂ ನೀರಿಗಾಗಿ ಹೋರಾಟ ಮಾಡು ತ್ತಿದ್ದೇನೆ. ಜೊತೆಗೆ ಮಧುಗಿರಿಯಲ್ಲಿ ನೀರಿನ ಸಮಸ್ಯ ಇದೆ. ಇದನ್ನೆಲ್ಲಾ ನೋಡಿ, ಮತದಾರರು ಪಕ್ಷಾತೀತ ವಾಗಿ ನನಗೆ ಮತ ನೀಡಿದ್ದಾರೆ. ಜೊತೆಗೆ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ನೋಡಿದ್ದಾರೆ, ನಮ್ಮ ಪಕ್ಷದ ಕಾರ್ಯಕರ್ತರು ಬಹಳ ನಿಷ್ಠೆಯಿಂದ ಒಗ್ಗಾಟ್ಟಾಗಿ ಕೆಲಸ ಮಾಡಿದ್ದು, ನನ್ನ ಗೆಲುವಿಗೆ ಪ್ರಮುಖ ಕಾರಣ.
•ನಿಮ್ಮ ಶಾಸಕರು ಇರುವ ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ಕ್ಷೇತ್ರದಲ್ಲಿ ಲೀಡ್ ಬರದ ಬಗ್ಗೆ ಏನು ಹೇಳುತ್ತೀರಾ?:
ನಮ್ಮ ಶಾಸಕರು ಇರುವ ಕ್ಷೇತ್ರಗಳಲ್ಲಿ ಈ ಹಿಂದಿಗಿಂತ ಉತ್ತಮ ಮತಗಳು ಬಂದಿವೆ.
ಅಲ್ಲಿ ಎರಡೂ ಪಕ್ಷಗಳ ಮತಗಳು ಒಂದಾದವು ಹಾಗೇ ನೋಡಿದರೆ, ನಮ್ಮ ಮತ ಅಲ್ಲಿ ಇನ್ನೂ ಕಡಿಮೆ ಯಾಗಬೇಕಾಗಿತ್ತು. ಆದರೆ, ನಮ್ಮ ಮತಗಳು ಹೆಚ್ಚಿವೆ. ಅಲ್ಲಿಯೂ ನಮ್ಮ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಆದ್ದರಿಂದ ಗೆಲುವಿಗೆ ಕಾರಣವಾಗಿದೆ.
•ಮತದಾರರು, ಜನರಿಗೆ ನೀವು ಏನು ಹೇಳುತ್ತೀರಾ?:
ಕ್ಷೇತ್ರದ ಮತದಾರರು ನನಗೆ ಮತನೀಡಿ, ಗೆಲುವಿಗೆ ಕಾರಣರಾಗಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದ ಎಲ್ಲಾ ಮುಖಂಡರಿಗೆ ಕಾರ್ಯಕರ್ತರಿಗೆ ಮತ್ತು ನನಗೆ ಪ್ರತ್ಯೇಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ಅಭಿನಂದಿಸುತ್ತೇನೆ.
● ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.