ನಗರಕ್ಕೆ ನೀರು ಸರಬರಾಜು ಮಾಡಲು ಸಿದ್ಧತೆ
Team Udayavani, Feb 6, 2020, 3:00 AM IST
ತುಮಕೂರು: ನಗರಾದ್ಯಂತ 196 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲಾಗುತ್ತಿರುವ 24*7 ಕುಡಿಯುವ ನೀರು ಸರಬರಾಜು ಯೋಜನೆಯಿಂದ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಪ್ರಾಯೋಗಿಕವಾಗಿ ಅಶೋಕ ನಗರ ಹಾಗೂ ಜಯನಗರದಲ್ಲಿ ಚಾಲನೆ ನೀಡಲಾಗಿದೆ. ನಗರದಲ್ಲಿ 37 ಡಿಎಂಎ (ಡಿಸ್ಟ್ರಿಕ್ಟ್ ಮೀಟರಿಂಗ್ ಏರಿಯಾ) ರೂಪಿಸಲಾಗಿದೆ. ಈ ಮೂಲಕ 44 ಓವರ್ ಹೆಡ್‌ಟ್ಯಾಂಕ್‌ಗಳ ಮೂಲಕ ನಗರದಲ್ಲಿ ನೀರು ಸರಬರಾಜು ಮಾಡಲಾಗುವುದು. ಈಗಾಗಲೇ ನಗರದಲ್ಲಿ 37 ಓವರ್ ಹೆಡ್‌ಟ್ಯಾಂಕ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. 5 ಕಡೆ ನೂತನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನು ಒಂದು ಕಡೆ ಜಾಗ ದೊರೆತಿದ್ದು, ಪರಿಶೀಲನೆ ಮಾಡಲಾಗುತ್ತಿದೆ. ಇನ್ನೊಂದು ನಿರ್ಮಾಣಕ್ಕೆ ಸೂಕ್ತ ಸ್ಥಳ ದೊರೆಯುತ್ತಿಲ್ಲ ಎಂದು ಹೇಳಿದರು.
ಹೇಮಾವತಿ ನೀರು ಬುಗುಡನಹಳ್ಳಿಯಿಂದ ನೇರವಾಗಿ ಟ್ಯಾಂಕರ್‌ಗಳ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ ಇದಾಗಿದೆ. 7-8 ತಿಂಗಳಲ್ಲಿ ಶೇ.75ರಿಂದ 80ರಷ್ಟು ನಗರಕ್ಕೆ ನೀರು ಸರಬರಾಜಾಗಲಿದೆ. ಕೆಲ ಭಾಗಗಳಲ್ಲಿ ಜಾಗ ಒತ್ತುವರಿ ಸಮಸ್ಯೆಯಿಂದ ಪೈಪ್‌ಲೈನ್ ಅಳವಡಿಸಲು ಆಗಿಲ್ಲ. ಈ ಕಾರ್ಯ ಮುಂದುವರೆದಿದೆ. 24*7 ಯೋಜನೆಯಡಿ ಬಿಡುವ ನೀರಿಗೆ ಮೀಟರ್ ಅಳವಡಿಕೆ ಮಾಡಲಾಗಿದ್ದು, ರೆಸಿಡೆನ್ಸಿಯಲ್‌ಗೆ 1000 ಲೀಟರ್‌ಗೆ 8 ರೂ. ಸೆಮಿ ಕಮರ್ಷಿಯಲ್‌ಗೆ 16 ರೂ. ಹಾಗೂ ಇಂಡಸ್ಟ್ರಿಯಲ್‌ಗೆ 1:4ರ ಅನುಪಾತದಲ್ಲಿ ಹಣ ಪಾವತಿಸಬೇಕಾಗುತ್ತದೆ. ಈ ಹಣದ ಮೊತ್ತದಲ್ಲಿ ಬದಲಾವಣೆಗಳು ಸಾಧ್ಯತೆಗಳಿವೆ ಎಂದು ತಿಳಿಸಿದರು.
ಗಂಗಸಂದ್ರ ಕೆರೆಗೆ ಜಾಕ್‌ವೆಲ್ ನಿರ್ಮಾಣ: ನಗರದ ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಗೆ ನೀರು ತುಂಬಿಸಿಕೊಂಡರೆ ವರ್ಷ ಪೂರ್ತಿ ನೀರು ಸರಬರಾಜು ಮಾಡಬಹುದು. ಗಂಗಸಂದ್ರ ಕೆರೆಗೆ ಗುರುತ್ವಾಕರ್ಷಣೆ ಮೂಲಕ ನೀರು ಹರಿಯಲಿದ್ದು, ಇಲ್ಲಿ ಜಾಕ್‌ವೆಲ್ ನಿರ್ಮಿಸಿ ಇಲ್ಲಿಂದ ಮರಳೂರು ಕೆರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಇನ್ನೂ ಹೆಬ್ಟಾಕ ಕೆರೆಯು ಕೈಗಾರಿಕೆಗೆ ಮೀಸಲಿರಿಸಿದ್ದು, ಈ ಕೆರೆಯು ವರ್ಷಪೂರ್ತಿ ತುಂಬಿರುತ್ತದೆ. ಆದರೆ ಈ ನೀರನ್ನು ಕೈಗಾರಿಕೆಗಷ್ಟೇ ಉಪಯೋಗಿಸಲಾಗುತ್ತದೆ ಎಂದರು.
ಅಮಾನಿಕೆರೆಗೆ ತುಂಬಿಸುವ ನೀರನ್ನು ಜಾಕ್‌ವೆಲ್ ಮೂಲಕ ಪಿಎನ್‌ಆರ್ ಪಾಳ್ಯದ ನೀರು ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಿಸಿ ನಗರಕ್ಕೆ ಸರಬರಾಜು ಮಾಡಲಾಗುವುದು. ಬುಗುಡನಹಳ್ಳಿಯ ಕುಬೇರ ಮೂಲೆಯಲ್ಲಿರುವ 5 ಎಂಎಲ್‌ಡಿ ಸಾಮರ್ಥ್ಯ ಸಂಸ್ಕರಣಾ ಘಟಕ ಹಾಗೂ ಪಿಎನ್‌ಆರ್ ಪಾಳ್ಯದಲ್ಲಿರುವ 50 ಎಂಎಲ್‌ಡಿ ಸಾಮರ್ಥ್ಯದ ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಿಸಲಾಗುವುದು. ಜಲಸಂಗ್ರಹಾಗಾರಗಳ ಮೂಲಕ ನೀರು ಸಂಗ್ರಹಿಸಲಾಗುವುದು. ಪಾಲಿಕೆ ಆವರಣದಲ್ಲಿರುವ ಜಲಸಂಗ್ರಹಾಗಾರದಲ್ಲಿ 22.5 ಲಕ್ಷ ಲೀಟರ್ ಹಾಗೂ ಸಂತೆ ಮೈದಾನದ ಬಳಿ 22.5 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಹಾಗಾರ ಮತ್ತು ವಿದ್ಯಾನಗರದಲ್ಲಿ 20 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಾಹಾಗಾರದಲ್ಲಿ ನೀರು ಸಂಗ್ರಹಿಸಿ ಸರಬರಾಜು ಮಾಡಲಾಗುವುದು ಎಂದು ಹೇಳಿದರು.
ಆರ್‌ಒ ಪ್ಲ್ಯಾಂಟ್‌ಗೆ ಬೀಗ: ನಗರದ 7-8 ವಾರ್ಡ್‌ಗಳಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೇರವಾಗಿ ನೀರು ಪಂಪ್ ಮಾಡಲಾಗುತ್ತದೆ. ಉಳಿದ ಇತರೆ ವಾರ್ಡ್‌ಗಳಲ್ಲಿರುವ ಟ್ಯಾಂಕ್‌ಗಳಿಗೆ ಜಲಸಂಗ್ರಹಾಗಾರ ಒಳಗೊಂಡ ನೀರು ಸರಬರಾಜು ಮಾಡಲಾಗುವುದು. ಇದೆಲ್ಲಾ ಸರಿಯಾಗಿ ಪ್ರಾರಂಭವಾದ ಮೇಲೆ ಆರ್‌ಒ ಪ್ಲ್ಯಾಂಟ್‌ಗಳು ಮುಚ್ಚುವ ಸಾಧ್ಯತೆಗಳಿವೆ. ಶುದ್ಧೀಕರಿಸಿದ ನೀರನ್ನೇ ನೇರವಾಗಿ ಮನೆಗೆ ತಲುಪಿಸವಾಗ ಆರ್‌ಒ ಪ್ಲ್ಯಾಂಟ್‌ಗಳ ಅವಶ್ಯಕತೆಯಿಲ್ಲ. ಈ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ಜನಪರ ಕಾರ್ಯಗಳು ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ಲ್ಯಾಂಟ್ ಮುಚ್ಚುವ ಸಂಭವವಿದೆ ಎಂದು ಹೇಳಿದರು. ಬಿಜೆಪಿ ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ವೇದಮೂರ್ತಿ ಉಪಸ್ಥಿತರಿದ್ದರು.
ಕಂದಾಯ ಹೆಚ್ಚಿಸಲು ಜಿಐಎಸ್ ಮ್ಯಾಪ್: ಡ್ರೋನ್ ಸರ್ವೆ ಹಾಗೂ ಜಿಐಎಸ್ ಬೇಸ್ಡ್ ಮ್ಯಾಪ್‌ನ ಬಳಕೆಯಿಂದ ಪಾಲಿಕೆಗೆ ಸಲ್ಲಬೇಕಾದ ತೆರಿಗೆ ಸರಿಯಾಗಿ ಬರುವಂತೆ ಮಾಡಲಾಗುತ್ತದೆ. ಒಂದು ಮನೆಗೆ ಇರುವ ತೆರಿಗೆ ಹಾಗೂ ಕಮರ್ಷಿಯಲ್ ಮಳಿಗೆಗಳಿಗೆ ತೆರಿಗೆ ಬೇರೆ ಇದೆ. ಹಾಗಾಗಿ ಸ್ವಯಂ ಆಗಿ ತಾವೇ ಮನೆಯ ಹಾಗೂ ಮಳಿಗೆಗಳ ಮಾಹಿತಿ ಸೂಕ್ತ ಫಾರಂನಲ್ಲಿ ನಮೂದಿಸಿ ತೆರಿಗೆ ಸಲ್ಲಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.