ವಾರದಿಂದ ಹನಿ ನೀರಿಗಾಗಿ ಹಾಹಾಕಾರ
Team Udayavani, Mar 4, 2019, 11:02 AM IST
ಹುಳಿಯಾರು: ಶೆಟ್ಟಿಕೆರೆ ಹೋಬಳಿಯ ಜೆ.ಸಿ.ಗ್ರಾಪಂ ವ್ಯಾಪ್ತಿಯ ಸಾಸಲು, ಸಾಸಲು ಗೊಲ್ಲರಹಟ್ಟಿ, ಮಾಸ್ತಯ್ಯನಪಾಳ್ಯದಲ್ಲಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರದಿಂದ ಹನಿ ನೀರಿಗಾಗಿ ಹಾಹಾಕಾರ ನಿರ್ಮಾಣವಾಗಿದ್ದರೂ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೌನ ವಹಿಸಿದ್ದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಾಸಲು ಗ್ರಾಮವು ಸರಿಸುಮಾರು ಐನೂರಕ್ಕೂ ಹೆಚ್ಚು ಮನೆಗಳಿದ್ದು, ಈ ಗ್ರಾಮದ ನೀರಿನ ವ್ಯವಸ್ಥೆಗೆ 4 ಕೊಳವೆ ಬಾವಿ ಕೊರೆಸಿ ಎರಡು ಓವರ್ ಹೆಡ್ ಟ್ಯಾಂಕ್ 38 ಸಿಸ್ಟನ್‌ಗಳನ್ನು ಇಟ್ಟು ನೀರು ಪೂರೈಸಲಾಗುತ್ತಿತ್ತು. ಆದರೆ, ಕಳೆದ ಹತ್ತದಿನೈದು ದಿನಗಳ ಹಿಂದೆ 3 ಬೋರ್ ವೆಲ್‌ಗಳಲ್ಲಿ ಅಂತರ್ಜಲ ಬರಿದಾಗಿದ್ದು, ಇರುವ ಒಂದೇ ಬೋರ್‌ನಲ್ಲಿ 500 ಮನೆಗೆ ನೀರು ಸರಬರಾಜು ಮಾಡುವಂತಾಗಿದೆ. ಹಾಗಾಗಿ ಒಂದು ಬೀದಿಗೆ ನೀರು ಕೊಟ್ಟರೆ ಇನ್ನೊಂದು ಬೀದಿಗೆ ನೀರಿಲ್ಲದಾಗಿ ಅಕ್ಕಪಕ್ಕದ ತೋಟದ ಬೋರ್‌ಗಳಿಂದ ಜನ ನೀರು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.
ತೋಟದ ಮಾಲೀಕರಿಗೆ ದುಂಬಾಲು: ಇನ್ನು ಸಾಸಲು ಗೊಲ್ಲರಹಟ್ಟಿ 80 ಮನೆಗಳ ಗ್ರಾಮವಾಗಿದ್ದು , 2 ಕೊಳವೆ ಬಾವಿಯಿಂ 9 ಸಿಸ್ಟನ್ ತುಂಬಿಸಿ ಗ್ರಾಮದ ಜನರಿಗೆ ನೀರು ಕೊಡಲಾಗುತ್ತಿತ್ತು. ಈ ಎರಡೂ ಬೋರ್‌ಗಳಲ್ಲೂ ಹತ್ತದಿನೈದು ದಿನಗಳ ಹಿಂದೆ ಅಂತರ್ಜಲ ಬರಿದಾಗಿ ಹನಿ ನೀರು ಬಾರದಂತ್ತಾಗಿದೆ. ಪರಿಣಾಮ ಒಂದೆರಡು ಕಿ.ಮೀ ದೂರದಿಂದ ತೋಟದ ಮಾಲೀಕರನ್ನು ಕಾಡಿಬೇಡಿ ನೀರು ತರುವ ವಿಷಮ ಪರಿಸ್ಥಿತೆ ಇಲ್ಲಿನ ನಿವಾಸಿಗಳದ್ದಾಗಿದೆ. ಮೊದಲೇ ಕೂಲಿನಾಲಿ ಮಾಡುವ ಇಲ್ಲಿನ ಜನ ನೀರಿಗೊದರೆ ಕೂಲಿ ಇಲ್ಲ; ಕೂಲಿಗೋದರೆ ನೀರಿಲ್ಲ ಎನ್ನುವ ಸಂಕಷ್ಟ ಎದುರಿಸುತ್ತಿದ್ದಾರೆ.
ಗಂಭೀರ ಪರಿಸ್ಥಿತಿ: ಅಲ್ಲದೇ ಈ ಭಾಗದಲ್ಲಿ ದನಕರುಗಳು ಹಾಗೂ ಕುರಿಮೇಕೆಗಳು ಸಾಕಷ್ಟಿದ್ದು, ಈ ಜಾನುವಾರುಗಳ ದಾಹ ತಣಿಸುವ ರೈತರ ಗೋಳು ಹೇಳತೀರದಾಗಿದೆ. ಜೊತೆಗೆ ಇಲ್ಲಿನ ಶಾಲೆಯ ಬಿಸಿಯೂಟಕ್ಕೂ ನೀರಿಲ್ಲದೆ ಬಿಸಿಯೂಟದ ಸಿಬ್ಬಂದಿ ದೂರದ ತೋಟಗಳಿಂದ ಹೊತ್ತು ತಂದು ಅಡುಗೆ ಮಾಡಬೇಕಿದೆ. ಶಾಲೆಗೆ ಬರುವ ಮಕ್ಕಳಂತೂ ತುಪ್ಪದ ರೀತಿ ನೀರನ್ನು ಬಳಸುವಂತ್ತಾಗಿದೆ. ಮೊದಲೇ ಬಿಸಿಲ ಧಗೆ ಹೆಚ್ಚಾಗಿದ್ದು,ಬಾಯಾರಿಕೆ ಹೋಗಲಾಡಿಸಲಿಕ್ಕಾದರೂ ಹೊಟ್ಟೆ ತುಂಬ ನೀರು ಕುಡಿಯದಂತ ಹಾಹಾಕಾರ ಇಲ್ಲಿದೆ. ಮಾಸ್ತಯನಪಾಳ್ಯದ ಪರಿಸ್ಥಿತಿ ಇದನ್ನು ಹೊರತಾಗಿಲ್ಲ.
ಅಧಿಕಾರಿಗಳ ನಿರ್ಲಕ್ಷ್ಯ: ಈ ಬಗ್ಗೆ ತಾಪಂ ಇಒ, ಗ್ರಾಪಂ ಪಿಡಿಒ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಸಮಸ್ಯೆ ಪರಿಹರಿಸದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿಮೇಲಧಿಕಾರಿಗಳು ಇತ್ತ ಗಮನ ಹರಿಸಿ ತಕ್ಷಣ ಟ್ಯಾಂಕರ್ ಮೂಲಕ ನೀರನ್ನುಪೂರೈಸಿ ಹಾಹಾಕಾರ ನೀಗಿಸಬೇಕಿದೆ.ಅಲ್ಲದೇ ಹೊಸ ಕೊಳವೆ ಬಾವಿ ಕೊರೆಸಿ ಗ್ರಾಮದ ನೀರಿನ ಸಮಸ್ಯೆಯನ್ನುಶಾಶ್ವತವಾಗಿ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.