ಸರ್ಕಾರಗಳ ವಿರುದ್ಧ ಹೋರಾಟ
Team Udayavani, Sep 27, 2020, 4:08 PM IST
ಶಿರಾ: ಸುಗ್ರೀವಾಜ್ಞೆ ಮೂಲಕ ರೈತರ ಮೇಲೆ ಸರ್ಕಾರ ಹೇರಲು ಹೊರಟಿರುವ ಏಳು ಕಾಯ್ದೆಗಳ ವಿರುದ್ಧ ವಿವಿಧ ಸಂಘಟನೆಗಳು ರಾಜ್ಯ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ರೈತ ಸಂಘ ಮತ್ತಿತರೆ ಸಂಘಟನೆಗಳ ಪ್ರಮುಖರು ಸಭೆ ನಡೆಸಿದರು.
ರೈತಸಂಘದ ಜಿಲ್ಲಾ ಗೌರವಾಧ್ಯಕ Ò ಧನಂಜಯ ಆರಾಧ್ಯ ಮಾತನಾಡಿ, ಎಪಿಎಂಸಿ ತಿದ್ದುಪಡಿ ಮೂಲಕ ರೈತನಿಗೆ ಸಿಗುತ್ತಿದ್ದ ಮಾರುಕಟ್ಟೆ ಸೌಕರ್ಯವನ್ನು ಮೊಟಕುಗೊಳಿಸಿ, ಸಿಗುತ್ತಿದ್ದ ಬೆಲೆಯೂ ಸಿಕ್ಕದಂತೆ ಮಾಡಲಾಗುತ್ತಿದೆ. ವೈಜ್ಞಾನಿಕ ಬೆಲೆ ನೀಡಿ ಎಂದು ರೈತರು ಸರ್ಕಾರವನ್ನುಒತ್ತಾಯಿಸುತ್ತಿದ್ದರೆ, ಸರ್ಕಾರ ಕಾಯ್ದೆ ತಿದ್ದುಪಡಿ ಮೂಲಕ ರೈತರ ಮೇಲೆ ದಬ್ಟಾಳಿಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಹೊಸ ಕಾಯ್ದೆ ಪ್ರಕಾರ ಕಾರ್ಪೋರೆಟ್ ಕಂಪನಿಗಳು ನಾನ್ನೂರು ಎಕರೆಗೂ ಹೆಚ್ಚಿನ ಭೂಮಿ ಹೊಂದಬಹುದಾಗಿದೆ. ಅದೇ ರೀತಿ ಭೂ ಅಭಿವೃದ್ಧಿ, ಸೌಕರ್ಯಗಳ ನೆಪದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನೀತಿಯಿಂದಾಗಿ, ಫಲವತ್ತಾದ ಭೂಮಿ ರೈತರ ಕೈಬಿಟ್ಟು ಹೋಗುತ್ತಿದೆ. ಇದೇ ರೀತಿ ವಿದ್ಯುತ್ಛಕ್ತಿ ಕಾಯ್ದೆ ಮೂಲಕ, ಪ್ರತಿ ರೈತರೂ ಬಳಸುವ ವಿದ್ಯುತ್‌ಗೆ ತಕ್ಕಂತೆ ಶುಲ್ಕ ಪಾವತಿಸುವ ಅನಿವಾರ್ಯತೆಗೆ ಸಿಲುಕಲಿದ್ದಾರೆ. ಬೀಜ ಕಾಯ್ದೆ, ಕಾರ್ಮಿಕ ಕಾಯ್ದೆಗಳ ಮೂಲಕ ಬಡವರ ಬದುಕನ್ನೇ ಕಿತ್ತುಕೊಳ್ಳುವ ಇಂಥ ಕಾಯ್ದೆಗಳ ಜಾರಿ ಬೇಡ ಎಂದು ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ cರಿಕೆ ನೀಡಲಿದ್ದೇವೆ ಎಂದು ತಿಳಿಸಿದರು.
ಸೋಮವಾರ ಎಲ್ಲ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಕಾರ್ಯದರ್ಶಿನಾದೂರು ಕೆಂಚಪ್ಪ, ರೈಲ್ವೆ ಹೋರಾಟ ಸಮಿತಿ ಆರ್.ವಿ.ಪುಟ್ಟಕಾಮಣ್ಣ, ಶಾಶ್ವತ ನೀರಾವರಿ ಹೋರಾಟ ಸಮಿತಿ ರಮೇಶ್, ಶ್ರೀನಿವಾಸ್, ಎಐಟಿಯುಸಿ ನಿಸಾರ್ ಅಹ್ಮದ್, ದಲಿತ ಶೋಷಿತ ಸಂಘರ್ಷ ಸಮಿತಿ ಸಂಚಾಲಕ ಟೈರ್ ರಂಗನಾಥ್ ಇತರರು ಇದ್ದರು.
ನಾಳೆ ತುರುವೇಕೆರೆ ತಾಲೂಕು ಬಂದ್ : ತುರುವೇಕೆರೆ: ಕಾರ್ಮಿಕರ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ವಿರೋಧಿಸಿ ಸೋಮವಾರ ಬೆಳಗ್ಗೆ6ರಿಂದ ಸಂಜೆ 6 ರವರೆಗೆ ತುರುವೇಕೆರೆ ತಾಲೂಕು ಬಂದ್ ಗೆಕರೆ ನೀಡಲಾಗಿದೆ ಎಂದುಕರವೇ ರಾಜ್ಯ ಉಪಾಧ್ಯಕ್ಷ ಮುಷೀರ್ ಅಹಮದ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕರ ಕಾಯ್ದೆ ವಿರೋಧಿಸಿ ಈಗಾಗಲೇ ತಾಲೂಕಿನ ಅನೇಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ಸಂಘವು ಸಹ ಅವುಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು. ಭೂ ಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ.ಕಾಯ್ದೆಗಳನ್ನು ತಿದ್ದುಪಡಿ ತರುವ ಮುನ್ನ ರಾಜ್ಯ ಸರ್ಕಾರವು ರೈತರೊಂದಿಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ನೆಡೆಸದೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿದ್ದು ಕೇವಲ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ದೇಶದ ಬೆನ್ನೆಲುಬಾದ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ರಸ್ತೆ ಉಬ್ಬುಗಳಿಗೆ ಬಿಳಿಪಟ್ಟೆ, ಟ್ರಾಫಿಕ್ ಸಮಸ್ಯೆಯಂತ ಜ್ವಲಂತ ಸಮಸ್ಯೆಗಳು ಹೆಚ್ಚಿದ್ದು ಇದರ ವಿರುದ್ಧ ಹೋರಾಟಹಮ್ಮಿಕೊಳ್ಳಲಾಗುವುದುಹಾಗೂಮುಂದಿನದಿನಗಳಲ್ಲಿ ಪಟ್ಟಣದಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದರು.
ಸೋಮವಾರ ದಿನಬಳಕೆ ವಸ್ತು ಹೊರತುಪಡಿಸಿ ಪೆಟ್ರೋಲ್ ಬಂಕ್, ಹೋಟಲ್, ಶಾಲಾ ಕಾಲೇಜು, ಎಲ್ಲ ದಿನಸಿ ಅಂಗಡಿ, ತರಕಾರಿ ಅಂಗಡಿಗಳ ಮಾಲೀಕರು ಹಾಗೂ ದಿನ ನಿತ್ಯದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ನೀಡಬೇಕಾಗಿ ಕೋರಿದ್ದಾರೆ. ಕಾಂಗ್ರೆಸ್ ಕಿಸಾನ್ ಸಂಘದ ಅಧ್ಯಕ್ಷ ಸ್ವರ್ಣಕುಮಾರ್, ಕರವೇ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಸಂಚಾಲಕ ನಝರುಲ್ಲಾಖಾನ್, ಸಂಘಟನಾ ಕಾರ್ಯದರ್ಶಿ ಕಂಚೀರಾಯ್‌ಸ್ವಾಮಿ, ಹಿಂದುಳಿದ ವರ್ಗದ ನಗರಾಧ್ಯಕ್ಷ ಮನ್ಸೂರ್, ಕೋಡಿಹಳ್ಳಿ ಚಂದ್ರಶೇಖರ್ ರೈತ ಬಣದ ನಾಗೇಂದ್ರ, ಪ್ರಕಾಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.