ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಧರಣಿ
Team Udayavani, Oct 10, 2020, 4:21 PM IST
ಮಧುಗಿರಿ: ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಹತ್ಯೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ತಾಲೂಕು ನಾಯಕ ಸಮಾಜದವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆನಡೆಸಿ ಉತ್ತರ ಪ್ರದೇಶ ಸರ್ಕಾರದ ದಲಿತ ವಿರೋಧಿನೀತಿ ಖಂಡಿಸಿ, ದಲಿತ ಸಮಾಜದ ಪ್ರತಿಭಾವಂತಹೆಣ್ಣುಮಗಳ ಹತ್ಯೆಗೆ ಸರ್ಕಾರ ಕೂಡಲೇ ನ್ಯಾಯಒದಗಿಸಬೇಕೆಂದು ಆಗ್ರಹಿಸಿದವು.
ಯೋಗಿ ವಿರುದ್ಧ ಆಕ್ರೋಶ: ನಂತರ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂಡು ಸೆ.14 ರಂದು ಯುಪಿಯಲ್ಲಿನಡೆದ ಅತ್ಯಾಚಾರ ಹಾಗೂ ಹತ್ಯೆಯುಅಮಾನವೀಯದಿಂದ ಕೂಡಿದೆ. ಇದುಮನುಕುಲವೇ ಮರುಕ ಪಡುವಂತ ಹೇಯಕೃತ್ಯವಾಗಿದೆ. ಮೃತ ಯುವತಿಯ ಶವ ಸಂಸ್ಕಾರಕ್ಕೂಇಲ್ಲಿನ ಯೋಗಿ ಸರ್ಕಾರ ಹೆತ್ತವರಿಗೆ ಅವಕಾಶನೀಡದೆ ಸುಟ್ಟುಹಾಕಲಾಗಿದ್ದು, ಸಂವಿಧಾನದತ್ತವಾದಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿ ಪೊಲೀಸರು ಸಹ ಸರ್ಕಾರದ ಕೈಗೊಂಬೆಯಾಗಿದ್ದು, ಮನುಷ್ಯತ್ವವಿಲ್ಲದೆ ನಡೆದುಕೊಂಡಿದ್ದಾರೆ. ಇಂತಹ ಪರಿಸ್ಥಿಯಲ್ಲೂ ಅಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂಪ್ರಧಾನಿ ಮೋದಿ ಈ ಘಟನೆಯ ಬಗ್ಗೆ ತುಟಿ ಬಿಚ್ಚಿಲ್ಲ. ಇಂತವರಿಂದ ಮಹಿಳೆಯ ರಕ್ಷಣೆ ಹೇಗೆ ನಿರೀಕ್ಷಿಸಲು ಸಾಧ್ಯ ಎಂದುಕಿಡಿಕಾರಿದರು.
ಸರ್ಕಾರಕ್ಕೆ ನಾಚಿಕೆಯಾಗಬೇಕು: ತಾಲೂಕು ನಾಯಕ ಸಂಘದ ಕಾರ್ಯದರ್ಶಿ ಶಂಕರನಾರಾಯಣ (ಬಾಬು) ಮಾತನಾಡಿ, ರಾಮ ಹುಟ್ಟಿದ ನೆಲದಲ್ಲಿ ರಾಮ ಹಾಗೂ ಗೋಮಾತೆಯ ಬಗ್ಗೆ ಮಾರುದ್ಧ ಭಾಷಣ ಮಾಡುವ ಬಿಜೆಪಿಗೆ ಈಹೆಣ್ಣುಮಗಳ ನೋವು ಅರ್ಥವಾಗುತ್ತಿಲ್ಲ.ಮಹಿಳೆಯೆಂದರೆ ಕೇವಲ ಮೇಲ್ವರ್ಗದ ಹೆಣ್ಣಿಗಷ್ಟೇ ಬೆಲೆ ಎಂಬಂತಾಗಿದೆ. ಅಹಿಂದ ವರ್ಗದ ಹೆಣ್ಣುಮಗಳ ಸಾವಿಗೆ ಕಿಂಚಿತ್ತೂ ಮರುಗದ ಈಸರ್ಕಾರಕ್ಕೆ ನಾಚಿಕೆಯಾಗಬೇಕು. ಮುಂದೆ ಇದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಠಿಣ ಕ್ರಮಕ್ಕೆ ಆಗ್ರಹ: ನಾಯಕ ನೌಕರರ ಸಂಘದಅಧ್ಯಕ್ಷ ಡಿ.ಓ.ನಾಗರಾಜು ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ಮಹಿಳೆಗೆ ಸಮಾನ ಹಾಗೂ ಶ್ರೇಷ್ಠ ಸ್ಥಾನವನ್ನು ಭಾರತದ ಸಂವಿಧಾನ ನೀಡಿದೆ. ಇಂತಹ ದೇಶದಲ್ಲಿ ಹುಟ್ಟಿ ಪ್ರತಿಭಾವಂತೆಯಾದ ಸಮಾಜದ ಹೆಣ್ಣುಮಗಳ ಧಾರುಣ ಹತ್ಯೆ ಖಂಡನೀಯ.
ಸಹೋದರತೆ, ಸಹಭಾಳ್ವೆ ಹಾಗೂ ಸಮಾನತೆಗೆ ಧಕ್ಕೆ ತಂದಿರುವ ಅಲ್ಲಿನ ಸರ್ಕಾರ ಹಾಗೂ ವ್ಯವಸ್ಥೆಯ ವೈಫಲ್ಯವನ್ನು ಗಣನೆಗೆ ಪಡೆದುಕೊಂಡು ಸರ್ಕಾರಹಾಗೂ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕ್ಯಗೊಳ್ಳಬೇಕೆಂದು ಆಗ್ರಹಿಸಿದರು.
ತಾಲೂಕು ನಾಯಕ ಸಂಘದ ಗೌರವಾಧ್ಯಕ್ಷರಂಗಶಾಮಣ್ಣ, ಮಹಿಳಾ ಅಧ್ಯಕ್ಷೆ ಇಂದಿರಮ್ಮ, ಪುರಸಭೆ ಮಾಜಿ ಸದಸ್ಯರಾದ ಭಾಗ್ಯಮ್ಮ,ಕುಶಾಲವತಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಗರಣಿ ಗಿರೀಶ್, ವಕೀಲ ಪಾಂಡುರಂಗಯ್ಯ, ನೌಕರ ವರ್ಗದ ಕೃಷ್ಣಮೂರ್ತಿ, ಚಂದನ್, ಕುಮಾರ್,ಶಿವಪ್ಪ, ಗಂದಾಧರ ರೆಡ್ಡಿಹಳ್ಳಿ, ಚಿರಂಜೀವಿ,ನಾಗರಾಜು, ಮಂಜುಳಾ, ಲೀಲಾ, ಜಯಮ್ಮ, ಶಾಂತ, ಪಾರ್ವತಮ್ಮ ಹಾಗೂ ದಲಿತ ಪರಸಂಘಟನೆಯ ನೂರಾರು ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.