ಜಂಪೇನಹಳ್ಳಿ ಮಗು ಪ್ರಕರಣ ಖಂಡಿಸಿ ಧರಣಿ
Team Udayavani, Mar 26, 2021, 5:06 PM IST
ಕುಣಿಗಲ್: ಕೊರಟಗೆರೆ ತಾಲೂಕು ಜಂಪೇನ ಹಳ್ಳಿಗ್ರಾಮದಲ್ಲಿ ದಲಿತ ಮೃತ ಮಗುವಿನ ಶವವನ್ನು ಹೊರತೆಗೆದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಅಮಾನವೀಯ ಘಟನೆ ಖಂಡಿಸಿ, ಕುಣಿಗಲ್ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು.
ಜಂಪೇನಗಹಳ್ಳಿ ಗ್ರಾಮದಲ್ಲಿನ ಘಟನೆಯಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ್ತಾಗಿದೆ. ಘಟನೆಗೆ ಸಂಬಂಧಿಸಿದ ಶಾಹಿ ಗಾರ್ಮೆಂಟ್ಸ್ ಮಾಲೀಕರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆಶಿಸ್ತುಕ್ರಮ ಜರುಗಿಸುವಂತೆ ಆಗ್ರಹಿಸಿ, ಪುರಸಭಾ ಸದಸ್ಯ ಆನಂದ್ ಕಾಂಬ್ಲಿ, ಶ್ರೀನಿವಾಸ್, ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಜಿಲ್ಲಾ ಡಿಎಸ್‌ಎಸ್‌ಸಂಚಾಲಕ ವಿ.ಶಿವಶಂಕರ್, ದಲಿತ್‌ನಾರಾಯಣ್‌ನೇತೃತ್ವದಲ್ಲಿ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿರುದ್ಧ ಧಿಕ್ಕಾರ ಕೂಗಿದರು.
ಹೀನಾಯ ಕೃತ್ಯ: ಎತ್ತಿನಹೊಳೆ ಕಾಮಗಾರಿ ಬ್ಲಾಸಿಂಗ್ ಶಬ್ದಕ್ಕೆ ಜಂಪೇನಹಳ್ಳಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೂರು ತಿಂಗಳ ಹೆಣ್ಣು ಮೃತಪಟ್ಟಿತ್ತು. ಘಟನೆ ಬಗ್ಗೆ ಪ್ರಶ್ನಿಸಲು ಶಕ್ತಿ ಇಲ್ಲದ ದಲಿತ ಕುಟುಂಬ ಸುವರ್ಣ ಮುಖೀ ನದಿಗೆ ಹೊಂದುಕೊಂಡತ್ತೇ ಇರುವ ಸರ್ಕಾರಿ ಜಮೀನಿನಲ್ಲಿ ಮೃತ ಮಗುವಿನ ಶವ ಸಂಸ್ಕಾರವನ್ನು ಮಾಡಿದ್ದರು. ಶಾಹಿ ಗಾರ್ಮೆಂಟ್ಸ್ ಮಾಲೀಕರು ನಮ್ಮ ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆಂದು ಗುಂಡಿಯಿಂದ ಶವವನ್ನು ಸೆಕ್ಯುರಿಟಿ ಮೂಲಕ ಹೊರ ತೆಗೆಸಿ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂñಹ ಹೀನಾಯ ಕೃತ್ಯ ಎಸಗಲಾಗಿದೆ ಎಂದು ದಲಿತ ಮುಖಂಡರು ಕಿಡಿಕಾರಿದರು.
ದಲಿತರು ಎಲ್ಲ ಸಮುದಾಯವನ್ನು ಪ್ರೀತಿಸುವಂತಹ ಸಮುದಾಯ. ಆದರೆ, ನಮ್ಮಲ್ಲೇ ಎತ್ತುಕಟ್ಟುವಂತಹ ಕೆಲಸ ನಡೆಯುತ್ತಿದೆ. ಇದನ್ನುಖಂಡಿಸುತ್ತೇವೆ. ನಮಗೆ ಎಲ್ಲರ ಸ್ನೇಹ ಬೇಕು ಸಂಘರ್ಷ ಬ್ಯಾಡ ಎಂದ ಮುಖಂಡರು, ದೇಶಕ್ಕೆ ಸ್ವಾತಂತ್ರ ಬಂದು 74 ವರ್ಷ ಕಳೆದರೂ ಇಂತಹಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ದಲಿತನ್ನು ಮನುಷ್ಯರಂತೆ ನೋಡುತ್ತಿಲ್ಲ. ಇದು ನಮ್ಮ ಸಂಸ್ಕೃತಿಯಲ್ಲ ಎಂದು ಆಕ್ರೋಶ ವ್ಯಕಪಡಿ¤ ಸಿದರು.
ಪರಿಹಾರದ ಭಿಕ್ಷೆ ಬೇಕಿಲ್ಲ: ನೊಂದ ಸಮಾಜದ ಮನುಷ್ಯರು ಘನತೆಯಿಂದ ಬದುಕುವ ವ್ಯವಸ್ಥೆ ಇಲ್ಲ. ಜಂಪೇನಹಳ್ಳಿ ಘಟನೆ ಹಿನ್ನೆಲೆ ಸಂತ್ರಸ್ತರಿಗೆ ಪರಿಹಾರದಭಿಕ್ಷೆ ನಮಗೆ ಬೇಕಿಲ್ಲ, ಸ್ವಾಭಿಮಾನ ಬೇಕು. ಸಮಾಜದಲ್ಲಿ ಎಲ್ಲರಂತೆ ಸಮಾನತೆಯಿಂದಬದುಕುವಂತಹ ವ್ಯವಸ್ಥೆ ಸರ್ಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಚೇರಿ ಶಿರಸ್ತೇದಾರ್ ಜಯಪ್ಪಚಾರ್ ಅವರಿಗೆ ಮನವಿ ಸಲ್ಲಿಸಿದರು. ದಲಿತ ಮುಖಂಡ ಜಿ.ಕೆ.ನಾಗಣ್ಣ, ವರದರಾಜು, ನರಸಿಂಹಮೂರ್ತಿ, ಎಸ್.ಟಿ. ಕೃಷ್ಣರಾಜು, ರಾಮಲಿಂಗಯ್ಯ, ಆನಂದ್, ಎನ್.ರಾಜೇಶ್, ನಂಜಪ್ಪ ವಿನಯ್, ತಿಮ್ಮಪ್ಪ, ಗೋವಿಂದರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.