ಸಮುದಾಯದಿಂದ ಸರ್ಕಾರಕ್ಕೆ ತಕ್ಕ ಪಾಠ: ಎಚ್ಚರಿಕೆ
Team Udayavani, May 21, 2022, 4:25 PM IST
ಪಾವಗಡ: ರಾಜನಹಳ್ಳಿ ಪ್ರಸನ್ನನಂದಾ ಪುರಿಸ್ವಾಮಿಗಳ ಮೀಸಲಾತಿ ಧರಣಿಯನ್ನ ನಿರ್ಲಕ್ಷ್ಯ ಮಾಡಿದರೆ ಸಮುದಾಯದ ವತಿಯಿಂದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ. ರಾಜ್ಯದಲ್ಲಿ ಮತ್ತೂಮ್ಮೆ ಹಲಗಲಿಬೇಡರ ದಂಗೆಯನ್ನು ಕಣ್ಣಾರೆ ರಾಜ್ಯ ಸರ್ಕಾರ ಕಾಣಬೇಕಾಗುತ್ತದೆ ಎಂದು ಲೋಕೇಶ್ ಪಾಳೇಗಾರ್ ಎಚ್ಚರಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ರಾಜನಹಳ್ಳಿಯ ಪ್ರಸನ್ನ ನಂದಾಪುರಿ ಸ್ವಾಮೀಜಿ ಕೈಗೊಂಡಿರುವ ಹೋರಾಟಕ್ಕೆ ಕೈಜೋಡಿಸಿ ತಾಲೂಕು ಮೀಸಲಾತಿ ಹೋರಾಟಸಮಿತಿ ವತಿಯಿಂದ ತಾಪಂ ಕಚೇರಿಯಿಂದ ಹೊರಟ ಪ್ರತಿಭಟನೆಕಾರರು ಶನಿಮಹಾತ್ಮ ಸರ್ಕಲ್ ಬಳಿಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ತಹಶೀಲ್ದಾರ್ ಕಚೇರಿ ಮುಂದೆರಸ್ತೆ ತಡೆ ನಡೆಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು.
ಮರ್ಹಷಿ ವಾಲ್ಮೀಕಿ ಜಾಗೃತಿ ವೇದಿಕೆ ತಾ.ಅಧ್ಯಕ್ಷ ಲೋಕೇಶ್ ಪಾಳೇಗಾರ್ ಮಾತನಾಡಿ, ಅಧಿಕಾರಕ್ಕೆಬಂದ ತಕ್ಷಣ ಮೀಸಲಾತಿ ಹೆಚ್ಚಿಸುವ ಬಗ್ಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಇಂದಿನ ಸಿಎಂ ಬಸವರಾಜ ಬೊಮ್ಮಾಯಿರವರು ಕೂಡ ಹೇಳಿ ಇಂದಿಗೂ ಭರವಸೆಈಡೇರಿಸದ ಕಾರಣ ರಾಜ್ಯದಾದ್ಯಂತ ಸರ್ಕಾರದವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಮುಖಂಡರಾದ ನೇರಳೆಕುಂಟೆ ನಾಗೇಂದ್ರ ಕುಮಾರ್ ಮಾತನಾಡಿ, ಮೀಸಲಾತಿ ಹೆಚ್ಚಿಸದಿದ್ದಲ್ಲಿವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಡಿಜೆಎಸ್ ನಾರಾಯಣಪ್ಪ, ಜಾಗೃತಿ ವೇದಿಕೆಯತಾಲೂಕು ಕಾರ್ಯದರ್ಶಿ ಚಂದ್ರಶೇಖರ್, ಬಿಎಸ್‌ಪಿಪಕ್ಷದ ತಾಲೂಕು ಅಧ್ಯಕ್ಷ ಹನುಂಮತರಾಯ,ತಾ.ಪಂ. ಮಾಜಿ ಸದಸ್ಯರಾದ ನರಸಿಂಹ, ಪ್ರಗತಿರಾಮಾಂಜಿನೇಯಲು, ನಾಗೇಶ್, ಬೋವಿ ಸಮಾಜದಬಂಗಾರಪ್ಪ, ಸಿ.ಕೆ.ತಿಪ್ಪೇಸ್ವಾಮಿ, ಚಲವಾದಿಸಮುದಾಯದ ರವೀಂದ್ರ, ರಂಗಸ್ವಾಮಿ, ನಾಗರಾಜು,ಲಂಬಾಣಿ ಸಮುದಾಯದ ಗೋವಿಂದನಾಯ್ಕ,ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ,ಹನುಮಂತರಾಯಪ್ಪ, ಆರ್.ಎನ್.ಲಿಂಗಪ್ಪ,ಅಂಬಿಕರಮೇಶ್, ರಂಗಮ್ಮ ಬೆಳ್ಳಿಬಟ್ಟಲ ಜಯಮ್ಮ ಮಾತನಾಡಿದರು.
ತಹಶೀಲ್ದಾರ್ ವರದರಾಜು ಮನವಿ ಸ್ವೀಕರಿಸಿಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಓಂಕಾರ್‌ನಾಯಕ, ಬಲರಾಮ್, ನಲಿಗಾನಹಳ್ಳಿ ಮಂಜುನಾಥ,ಚಿನ್ನಮ್ಮನ ಹಳ್ಳಿ ವೆಂಕಟರಮಣ, ಕರವೇಲಕ್ಷ್ಮಿನಾರಾಯಣ, ಕಾವಲಗೇರೆ ರಾಮಾಂಜಿ, ವಕೀಲ ಕೃಷ್ಣ, ಕೆ.ಟಿ.ಹಳ್ಳಿ ಶ್ರೀನಿವಾಸ್, ನಾಗರಾಜು, ಈರಪ್ಪ,ರಾಮು, ನಾಗರಾಜು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.