Protest; ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ಅಮಾನತಿಗೆ ಆಗ್ರಹ
ಎಸ್‌ಸಿ/ಎಸ್‌ಟಿ ಮೀಸಲಾತಿ ಟೆಂಡರ್‌ನಲ್ಲಿ ಲೋಪ.. ಗುತ್ತಿಗೆದಾರರಿಂದ ಕಚೇರಿ ಮುಂದೆ ಪ್ರತಿಭಟನೆ
Team Udayavani, Nov 9, 2023, 12:55 AM IST
ಕೊರಟಗೆರೆ: ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನೇ ಕೈಬೀಟ್ಟು ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆಯಿತು.
ಕೊರಟಗೆರೆ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಯ 60 ಲಕ್ಷ ರೂ. ಮೌಲ್ಯದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಸುವ ವೇಳೆ ಕೊರಟಗೆರೆ ಎಇಇ ನೀಡಿರುವ ಮೀಸಲಾತಿ ಅಂಕಿಅಂಶದ ವರಧಿಯನ್ನೇ ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ತಿರಸ್ಕರಿಸಿ ಸರಕಾರದ ಆದೇಶವನ್ನೇ ಉಲ್ಲಂಘಿಸಿ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀ ನರಸಯ್ಯ ಮಾತನಾಡಿ ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲಾತಿಯನ್ನೇ ಕೈಬಿಟ್ಟು 60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ನಾವು ಎಇ ಮುಷೀರ್‌ಗೆ ಟೆಂಡರ್ ಪ್ರತಿ ಕೇಳಿದ್ರೇ ಉಡಾಫೆ ಉತ್ತರ ನೀಡ್ತಾರೇ. ಮಧುಗಿರಿ ಇಇ ದಯಾನಂದ್ ಮತ್ತು ಕೊರಟಗೆರೆೆ ಎಇ ಮುಷೀರ್ ಕರ್ತವ್ಯಲೋಪ ಪರಿಗಣಿಸಿ ಜಿಪಂ ಸಿಇಓ ಅಮಾನತು ಮಾಡಬೇಕಿದೆ ಎಂದು ಆಗ್ರಹಿಸಿದರು.
ಕೊರಟಗೆರೆ ಎಸ್‌ಸಿ/ಎಸ್‌ಟಿ ಗುತ್ತಿಗೆದಾರ ಲಕ್ಷ್ಮೀ ನಾರಾಯಣ್ ಮಾತನಾಡಿ ಕೊರಟಗೆರೆ ಪಿಆರ್‌ಇಡಿ ಇಲಾಖೆಯಲ್ಲಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ. ಕೊರಟಗೆರೆ ಎಇಇ ರವಿಕುಮಾರ್ ನೀಡಿರುವ ಮೀಸಲಾತಿ ಅನುಧಾನದ ಅಂಕಿಅಂಶದ ಆದೇಶವನ್ನೇ ಬದಿಗಿಟ್ಟು ಕೊರಟಗೆರೆ ಎಇ ಮತ್ತು ಮಧುಗಿರಿ ಇಇ ಕರ್ತವ್ಯಲೋಪ ಮಾಡಿದ್ದಾರೆ. ತಪ್ಪಾದ ನಂತರ ತಿದ್ದಿ ಮರು ಟೆಂಡರ್ ಮಾಡ್ತೀವಿ ಎಂಬ ಜಾಣತಾಳ್ಮೆ ತೋರಿಸ್ತಾರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರ ಬಸವರಾಜು, ನಾಗೇಶ್, ಅಶ್ವತ್ಥಪ್ಪ, ಗೋವಿಂದರಾಜು, ದಾಡಿವೆಂಕಟೇಶ್, ಪ್ರಸನ್ನಕುಮಾರ್, ಪ್ರಶಾಂತ್, ಕದರಪ್ಪ, ಹನುಮಂತರಾಜು, ಕಾಮರಾಜು, ನಂದನಕುಮಾರ್, ಗೋಪಿನಾಥ್ ಸೇರಿದಂತೆ ಇತರರು ಇದ್ದರು.
ರಾಜ್ಯ ಸರಕಾರದ ಆದೇಶವೇ ಉಲ್ಲಂಘನೆ..
ಪಿಆರ್‌ಇಡಿ ಇಲಾಖೆಯ ಕಾಮಗಾರಿಯಲ್ಲಿ ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವಂತೆ 2007 ರಲ್ಲಿ ಆದೇಶ ಮಾಡಿದೆ. ಕೊರಟಗೆರೆಯ ಪಂಚಾಯತ್‌ರಾಜ್ ಇಲಾಖೆಯಲ್ಲಿ ಪ್ರಸ್ತುತವರ್ಷ 60 ಲಕ್ಷ ರೂ ಅನುದಾನದ7 ಕಾಮಗಾರಿಗಳಿವೆ.7 ಕಾಮಗಾರಿಯಲ್ಲಿ 2 ಎಸ್‌ಸಿ, 1 ಎಸ್‌ಟಿ ಮತ್ತು4 ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಕೊರಟಗೆರೆ ಎಇಇ ರವಿಕುಮಾರ್ ಸರಕಾರದ ಆದೇಶದಂತೆ ಮಧುಗಿರಿ ಇಇ ಕಚೇರಿಗೆ ಅ.17 ರಂದೇ ಕಳುಹಿಸಿರುವ ಪ್ರತಿಗಳಿವೆ. ಕೊರಟಗೆರೆ ಎಇ ಮುಷೀರ್ ಅಹಮ್ಮದ್ ಮತ್ತು ಮಧುಗಿರಿ ಇಇ ದಯಾನಂದ್ ಸರಕಾರದ ಆದೇಶ ಉಲ್ಲಂಘಿಸಿ 7 ಕಾಮಗಾರಿಯನ್ನೇ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಟೆಂಡರ್ ಮುಗಿಸಿರುವುದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ತಡೆ ನೀಡಲಾಗಿದೆ. ಕಂಪ್ಯೂಟರ್ ಟೆಕ್ನಿಕಲ್ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಮಧುಗಿರಿ ಮತ್ತು ಕೊರಟಗೆರೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಸಾಕಾಷ್ಟಿದೆ. ಗುತ್ತಿಗೆ ಮೀಸಲಾತಿ ನೀಡೋದು ನಮ್ಮ ಪ್ರಮುಖ ಕರ್ತವ್ಯ. ಕೆಲಸದ ಒತ್ತಡದಿಂದ ಇಂತಹ ಲೋಪವಾಗಿದ್ದು ಮತ್ತೇ ಇಂತಹ ಘಟನೆ ನಡಿಯೋದಿಲ್ಲ.
ದಯಾನಂದ್. ಇಇ. ಪಿಆರ್‌ಇಡಿ ಇಲಾಖೆ. ಮಧುಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.