ಸಿದ್ಧಗಂಗಾ ಮಠಕ್ಕೆ ಶೀಘ್ರ ಹೇಮಾವತಿ ನೀರು
Team Udayavani, May 31, 2020, 7:22 AM IST
ತುಮಕೂರು: ಲಕ್ಷಾಂತರ ಭಕ್ತರ ಪವಿತ್ರ ಕ್ಷೇತ್ರ ಶ್ರೀ ಸಿದ್ಧಗಂಗಾ ಮಠಕ್ಕೆ ಹೇಮಾವತಿ ನೀರು ಕೊಡುವ ಬಹು ದಿನಗಳ ಬೇಡಿಕೆ ಈಗ ಈಡೇರುತ್ತಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು. ತಾಲೂಕಿನ ಊರ್ಡಿಗೆರೆ ಹೋಬಳಿಯಲ್ಲಿ ಶನಿವಾರ ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿ ಇರುವ ಜನರಿಗೆ ಎರಡನೇ ಬಾರಿಗೆ ಕ್ಷೇತ್ರದ ಎಲ್ಲಾ 65 ಸಾವಿರ ಕುಟುಂಬಗಳಿಗೂ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿದ್ಧಗಂಗಾ ಮಠಕ್ಕೆ ನೀರನ್ನು ಬುಗುಡನಹಳ್ಳಿಯಿಂದ ದೇವರಾಯಪಟ್ಟಣದ ಮೂಲಕ ಮೈದಾಳ ಕೆರೆಗೆ ನೀರು ತರುವ ಯೋಜನೆ 2009-10ರಲ್ಲಿ ಟೆಂಡರ್ ಆದರೂ ಕೂಡ ಕಾಮಗಾರಿ ಪೂರ್ಣಗೊಳ್ಳದೇ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿತ್ತು. ಈಗ ಮತ್ತೆ ಕಾಮಗಾರಿಗೆ ಚಾಲನೆ ದೊರೆತಿದೆ ಎಂದು ಹೇಳಿದರು. ಬುಗುಡನಹಳ್ಳಿಯಿಂದ ಮಂಜೂರಾಗಿದ್ದ ಕಾಮಗಾರಿ ಯನ್ನು ರದ್ದುಗೊಳಿಸಿ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆ ಅಲ್ಲಿಂದ ಮೈದಾಳ ಕೆರೆಗೆ ನೀರು ಹರಿಸಿ, ಮೈದಾಳ ಕೆರೆಯಿಂದ ಸಿದ್ಧಗಂಗಾ ಮಠಕ್ಕೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಹೊನ್ನೇನಹಳ್ಳಿ ಕೆರೆಯಿಂದ ಆರಂಭಗೊಂಡ ಕಾಮಗಾರಿಗೆ ಸಚಿವ ಜಗದೀಶ್ ಶೆಟ್ಟರ್ ಶಂಕು ಸ್ಥಾಪನೆ ನೆರವೇರಿಸುವ ಮೂಲಕ ಚಾಲನೆ ನೀಡಿದ್ದು, ಇದರಿಂದ ಸಿದ್ಧಗಂಗಾ ಮಠಕ್ಕೆ ನೀರು ಹರಿಸುವ ಬಹು ದಿನಗಳ ಬೇಡಿಕೆ ಸದ್ಯದಲ್ಲೇ ಈಡೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎರಡನೇ ಬಾರಿಗೆ ದಿನಸಿಕಿಟ್ ವಿತರಿಸಲಾಗುತ್ತಿದೆ, ವಾರಕ್ಕೆ ಎರಡು ಪಂಚಾಯ್ತಿ, ತಿಂಗಳಿಗೆ 8 ಪಂಚಾಯ್ತಿಗಳಲ್ಲಿ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ಗ್ರಾಮಾಂತರ ಕ್ಷೇತ್ರದ ಎಲ್ಲಾ 35 ಗ್ರಾಮ ಪಂಚಾಯ್ತಿಗಳಲ್ಲೂ ಮತ್ತೆ ದಿನಸಿ ಕಿಟ್‌ಗಳನ್ನು ವಿತರಿಸುವುದಾಗಿ ತಿಳಿಸಿದರು.
ಬಸವಾಪಟ್ಟಣ ಬಸವಣ್ಣ ದೇವಾಲಯ ನಿರ್ಮಿಸಿಕೊಡು ವಂತೆ ಗ್ರಾಮಸ್ಥರು ಮನವಿ ಮಾಡಿದ ಮೇರೆಗೆ ಮನವಿಗೆ ಸ್ಪಂದಿಸಿ ಶಾಸಕ ಡಿ.ಸಿ.ಗೌರಿಶಂಕರ್ ಬಸವಣ್ಣ ದೇವಾಲಯ ನಿರ್ಮಾಣ ಮಾಡಿಕೊಡುವ ಆಶ್ವಾಸನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.