ಚಲನಚಿತ್ರದ ಪಾತ್ರಗಳಿಗೆ ಜೀವ ತುಂಬುತ್ತಿದ್ದ ರಾಜ್‌

ಡಾ.ರಾಜ್‌ಕುಮಾರ್‌ ನಟನೆಯ ಚಲನಚಿತ್ರ ಮಕ್ಕಳಿಗೆ ತೋರಿಸಿ, ಆ ಚಿತ್ರಗಳಲ್ಲಿನ ಮೌಲ್ಯ ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು: ಡೀಸಿ

Team Udayavani, Apr 25, 2019, 4:34 PM IST

tumkur-4-tdy..

ತುಮಕೂರು: ಕರ್ನಾಟಕ ರತ್ನ, ಪದ್ಮಭೂಷಣ, ವರನಟ ಡಾ.ರಾಜ್‌ಕುಮಾರ್‌ ಅವರ ನಟನೆ ಚಲನಚಿತ್ರಗಳನ್ನು ಮಕ್ಕಳಿಗೆ ತೋರಿಸಿ, ಆ ಚಿತ್ರಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌ ತಿಳಿಸಿದರು.

ವರನಟ ಡಾ. ರಾಜ್‌ಕುಮಾರ್‌ ಅವರ 91ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ವರನಟ ಡಾ. ರಾಜ್‌ಕುಮಾರ್‌ ಅವರು ನಟಿಸಿರುವ ಪ್ರತಿ ಚಲನಚಿತ್ರದಲ್ಲಿ ಪಾತ್ರಗಳಿಗೆ ಜೀವ ತುಂಬು ತ್ತಿದ್ದರು. ತನ್ಮಯತೆ, ಶ್ರದ್ಧೆ ಅವರಲ್ಲಿತ್ತು. ನೆಗೆಟಿವ್‌ ಅಥವಾ ಪಾಸಿಟಿವ್‌ ಪಾತ್ರದಲ್ಲಿ ನಟಿಸು ವಾಗಲೂ ಆ ಪಾತ್ರಗಳಿಗೆ ತಕ್ಕಂತೆ ಮನೋಜ್ಞ ವಾಗಿ ನಟನೆ ಮಾಡುತ್ತಿದ್ದರು. ಭೂ ಕೈಲಾಸ ಹಾಗೂ ಭಕ್ತ ಪ್ರಹ್ಲಾದ ಚಲನಚಿತ್ರಗಳಲ್ಲಿ ಡಾ. ರಾಜ್‌ ಅವರ ನಟನೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸ್ಪಷ್ಟವಾದ ಕನ್ನಡ ಭಾಷೆ ಬಳಕೆ: ತೆಲುಗು ಮತ್ತು ತುಳು ಭಾಷಿಕ ನನ್ನ ಸ್ನೇಹಿತರಿಗೆ ಕನ್ನಡ ಭಾಷೆ ಕಲಿಯಲು ಡಾ. ರಾಜ್‌ಕುಮಾರ್‌ ನಟನೆ ಚಿತ್ರ ಗಳನ್ನು ವೀಕ್ಷಿಸಲು ತಿಳಿಸುತ್ತಿದ್ದೆವು. ಅವರ ಚಿತ್ರ ಗಳಲ್ಲಿ ಸ್ಪಷ್ಟವಾದ ಕನ್ನಡ ಭಾಷೆ ಬಳಕೆ ಕಾಣುತ್ತೇವೆ ಎಂದರು.

ಚಿತ್ರವಿಕ್ಷೀಸಿ ಆಚರಿಸಿ: ರಾಘವೇಂದ್ರಸ್ವಾಮಿ ಪಾತ್ರದಲ್ಲಿ ರಾಜ್‌ಕುಮಾರ್‌ ನಟಿಸುವಾಗ ಪಾತ್ರಕ್ಕೆ ತಕ್ಕಂತೆ ಚಿತ್ರದ ಚಿತ್ರೀಕರಣ ಮುಗಿಯು ವರೆಗೂ ತಮ್ಮ ಜೀವನಶೈಲಿ ಬದಲಿಸಿಕೊಂಡಿ ದ್ದರು ಎಂಬುದನ್ನು ನನ್ನ ತಂದೆಯಿಂದ ತಿಳಿದು ಕೊಂಡಿದ್ದೆ. ಒಟ್ಟಾರೆ ಬಂಗಾರದ ಮನುಷ್ಯನ ಜನ್ಮ ದಿನಾಚರಣೆ ಅವರ ನಟನೆ ಚಿತ್ರಗಳನ್ನು ವೀಕ್ಷಿಸುವ ಮೂಲಕ ಜನರು ಅಭಿಮಾನಿಗಳು ಆಚರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹಿರಣ್ಯಕಶಿಪು, ಭಕ್ತ ಕನಕದಾಸ, ಭಕ್ತ ಕುಂಬಾರ ಕುರಿತಂತೆ ಪೌರಾಣಿಕ ಹಾಗೂ ಐತಿಹಾಸಿಕ ಪುಸ್ತಕಗಳನ್ನು ಓದುವಾಗ ಡಾ.ರಾಜ್‌ಕುಮಾರ್‌ ಅವರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಇದು ಅವರ ನಟನೆಯಲ್ಲಿ ಇದ್ದ ತನ್ಮಯತೆ, ಬದ್ಧತೆ, ಶ್ರದ್ಧೆ ತೋರಿಸುತ್ತದೆ ಎಂದರು.

ಆದರ್ಶ: ಅಭಿಮಾನಿಗಳನ್ನೇ ದೇವರು ಎಂದು ಕರೆಯುತ್ತಿದ್ದರು. ಚಿತ್ರ ನಿರ್ಮಾಪಕರನ್ನು ಅನ್ನ ದಾತರು ಎಂದು ಸಂಬೋಧಿಸುತ್ತಿದ್ದರು. ಇಂಥ ಸರಳತೆ, ಸಜ್ಜನಿಕೆಯ ವ್ಯಕ್ತಿತ್ವ ಹಾಗೂ ಅವರ ನಟನೆ ಚಲನಚಿತ್ರಗಳಲ್ಲಿನ ಮೌಲ್ಯಗಳು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಧುಗಿರಿ ಉಪ ಭಾಗಾಧಿಕಾರಿ ಶಿಲ್ಪಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‌ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ. ದೇವರಾಜ್‌, ಹಿಂದುಳಿದ ವರ್ಗಗಳ ಕಲ್ಯಾಣಾ ಧಿಕಾರಿ ಡಾ.ಸುಬ್ರನಾಯ್ಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಜ್‌ಕುಮಾರ್‌ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯ ಕ್ರಮದಲ್ಲಿ ಕಲಾವಿದ ದಿಬ್ಬೂರು ಮಂಜು ಅವರು ಡಾ. ರಾಜ್‌ಕುಮಾರ್‌ ಗಾಯನದ ಗೀತೆಗಳನ್ನು ಹಾಡಿದರು.

ಜಿಲ್ಲಾದ್ಯಂತ ಡಾ.ರಾಜ್‌ ಹುಟ್ಟುಹಬ್ಬ ಆಚರಣೆ:

ತುಮಕೂರು: ಕನ್ನಡ ನಾಡಿನ ಮೇರು ನಟ ಪದ್ಮಭೂಷಣ ಡಾ.ರಾಜ್‌ಕುಮಾರ್‌ರವರ ಹುಟ್ಟುಹಬ್ಬವನ್ನು ಜಿಲ್ಲಾದ್ಯಂತ ಅವರ ಅಭಿಮಾನಿಗಳು ಸಡಗರ ಸಂಭ್ರಮದಿಂದ ಬುಧವಾರ ಆಚರಿ ಸಿದರು. ಡಾ.ರಾಜ್‌ ಕುಮಾರ್‌ರವರ ಭಾವಚಿತ್ರ ಅಲಂಕರಿಸಿ ಪೂಜೆ ಸಲ್ಲಿಸಿ ಅಲ್ಲಲ್ಲಿ ಅನ್ನಸಂತರ್ಪಣೆ ಮಾಡುವ ಮೂಲಕ ರಾಜ್‌ಕುಮಾರ್‌ರವರ ಕನ್ನಡ ಪರ ಸೇವೆ ಸ್ಮರಿಸಿದರು.

ನಗರದ ಹೊರಪೇಟೆಯಲ್ಲಿರುವ ಮಧುರ ಟಿಫ‌ನ್‌ ರೂಂನಲ್ಲಿ, ತುಮ ಕೂರು ಜಿಲ್ಲಾ ಶತಶೃಂಗರಾಜ ಡಾ. ರಾಜ್‌ಕುಮಾರ್‌ ಕನ್ನಡ ಅಭಿಮಾನಿಗಳ ಸಂಘ, ತುಮಕೂರು ಜಿಲ್ಲಾ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಯುವಸೇನೆ ವತಿಯಿಂದ ಡಾ. ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬ ಆಚರಿಸಲಾಯಿತು.

ಕಲಾ ಪ್ರೇಮಿಗಳಿಗೆ ಸ್ಫೂರ್ತಿ: ಮಾಜಿ ಸಂಸದ ಜಿ.ಎಸ್‌. ಬಸವರಾಜ್‌ ಡಾ.ರಾಜ್‌ಕುಮಾರ್‌ ಬೆಳ್ಳಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಹರಳೂರು ಶಿವಕುಮಾರ್‌ರವರು ಕಳೆದ 25 ವರ್ಷಗಳಿಂದಲೂ ಡಾ.ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡು ತ್ತಿದ್ದು, ರಾಜ್‌ಕುಮಾರ್‌ ಅವರ ಕಲಾಭಿ ಮಾನ, ಉತ್ಸಾಹವೇ ಕಲಾ ಪ್ರೇಮಿಗಳಿಗೆ ಸ್ಫೂರ್ತಿಯಾಗಿದ್ದು, ಅವರ ಅಭಿಮಾನಿ ಗಳಾಗಿ ಇಂದು ಸಾವಿರಾರು ಜನರಿಗೆ ಉಪಾಹಾರದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಬೆಳ್ಳಿ ಪುತ್ಥಳಿ: ಈ ವೇಳೆ ಮಾತನಾಡಿದ ಡಾ.ರಾಜ್‌ಕುಮಾರ್‌ ಸಂಘದ ಅಧ್ಯಕ್ಷ ಹರಳೂರು ಟಿ.ಜಿ.ಶಿವಕುಮಾರ್‌ 91ನೇ ಡಾ.ರಾಜ್‌ಕುಮಾರ್‌ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದು, 10 ವರ್ಷ ಗಳಿಂದಲೇ ಬೆಳ್ಳಿ ಪುತ್ಥಳಿ ಮಾಡಿಸ ಲಾಯಿತು. ಈಗಲೂ ರಾಜ್‌ಕುಟುಂಬ ದವರಿಗೆ ನಮ್ಮ ಹೋಟೆಲ್ ತಿಂಡಿ ಎಂದರೆ ಇಷ್ಟ, ಕಳೆದ ಶನಿವಾರ ಶಿವರಾಜ್‌ಕುಮಾರ್‌ ಅವರು ನಮ್ಮ ಹೋಟೆಲ್ಗೆ ಬಂದು ತಿಂಡಿ ಸ್ವೀಕರಿಸಿದ್ದರು. ಡಾ. ರಾಜ್‌ಕುಮಾರ್‌ ಅವರ ಚಲನಚಿತ್ರಗಳು ಕೌಟುಂಬಿಕ, ಪೌರಾಣಿಕ, ಐತಿಹಾಸಿಕ ಕಥೆಗಳನ್ನು ಮಾಡುತ್ತಿದ್ದರು. ಅವರ ಸಿನಿಮಾಗಳು ಈಗಲೂ ಯುವ ಕಲಾ ವಿದರಿಗೆ ಸ್ಫೂರ್ತಿಯಾಗಿವೆ. ಕಲಾ ರಸಿರಕರ, ಕಲಾವಿದರ ಪೋಷಣೆಗೋಸ್ಕರ ಹಲವು ಕಾರ್ಯಕ್ರಮಗಳನ್ನು ಮಾಡಿ ಕೊಂಡು ಬರುತ್ತಿದ್ದೇವೆ. ಅಣ್ಣಾವ್ರ ಹುಟ್ಟು ಹಬ್ಬದಂದು ಕೆಲವು ಕಲಾವಿದರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಸುಮಾರು 2 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದರು. ಈ ವೇಳೆ ಹರಳೂರು ಜಿಲ್ಲಾ ಶತ ಶೃಂಗರಾಜ ಡಾ. ರಾಜ್‌ಕುಮಾರ್‌ ಕನ್ನಡ ಅಭಿಮಾನಿಗಳ ಸಂಘದ ಸದಸ್ಯ ರಾದ ಟಿ.ಜಿ.ಬಸವರಾಜು, ಟಿ.ಸಿ.ದಯಾ ನಂದ, ಟಿ.ಮೋಹನ್‌ಕುಮಾರ್‌ ಬಂಬೂ, ಟಿ.ಆರ್‌.ರಾಜೇಶ್‌, ಮದನ್‌ಕುಮಾರ್‌ ಪ್ರವೇಶ್‌, ಟಿ.ಎಸ್‌.ಮನೋಜ್‌ಕುಮಾರ್‌, ಟಿ.ಆರ್‌.ರವಿ ಕುಮಾರ್‌ ಅರಕೆರೆ, ಟಿ.ಎಂ.ರವಿ ಕುಮಾರ್‌ ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

1–dddd

Vitla; ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ದಂಪತಿಗೆ ಗಾಯ, ಬಾಲಕ ಮೃ*ತ್ಯು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

9

Surathkal-ಗಣೇಶಪುರ ರಸ್ತೆಯಲ್ಲಿ ಟ್ಯಾಂಕರ್‌ ರಾಜ್ಯಭಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.