ಧಾರ್ಮಿಕ ಶ್ರದ್ಧೆಯಿಂದ ಆತ್ಮಶಕ್ತಿ ಅಧಿಕ

Team Udayavani, Mar 1, 2020, 3:00 AM IST

dharmika

ತುಮಕೂರು: ಯಾವುದೇ ವಿಷಯದಲ್ಲಿ ನಂಬಿಕೆ ಮುಖ್ಯವಾಗಿರಬೇಕು. ಇದು ಮನುಷ್ಯನಲ್ಲಿ ಹಲವು ಶಕ್ತಿ ಉಂಟು ಮಾಡಿ, ಆತ್ಮಬಲ ಹೆಚ್ಚಿಸಿ ಅಸಾಧ್ಯವಾದುದನ್ನೂ ಸಾಧಿಸಬಹುದಾದ ಆತ್ಮಶಕ್ತಿ ನೀಡುತ್ತದೆ ಎಂದು ಸವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ನಗರದ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಧರ್ಮ ಶ್ರದ್ಧೆಯು ವೈಜ್ಞಾನಿಕತೆಯ ವೈರುಧ್ಯವೇನಲ್ಲ, ಆತ್ಮಶಕ್ತಿ ಹೆಚ್ಚಿಸಿಕೊಳ್ಳಲು ಧಾರ್ಮಿಕ ಶ್ರದ್ಧೆಯಿಂದ ಸಾಧ್ಯವಾಗಬಹುದಾದರೆ ಅನುಸರಿಸಬಹುದು.

ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಇಟ್ಟುಕೊಳ್ಳುವುದು ಮೂಢನಂಬಿಕೆ ಅಲ್ಲ, ಅಂದು ಮಾನಸಿಕ ಶಕ್ತಿ ಹೆಚ್ಚಿಸುತ್ತದೆ. ಮನುಷ್ಯರಲ್ಲಿ ಅನುಸರಿಸುವ ಗುಣ, ಒಳ್ಳೆಯ ಹೃದಯವಂತಿಕೆ ಕೊಡು ಎಂದು ದೇವರನ್ನು ಪ್ರಾರ್ಥಿಸಿದರೆ, ಅದು ಧಕ್ಕಿದರೆ ಅದು ಸಾರ್ಥಕ ಬದುಕು. ಪ್ರತಿ ಮನುಷ್ಯನಲ್ಲೂ ದೇವರು ಇದ್ದಾನೆ ಎಂಬ ಜೀವಾನುಭವ ಹೊಂದಬೇಕು ಎಂದು ಹೇಳಿದರು.

ದೇಶದ ಆಡಳಿತ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಹೇಗಿದೆ ಎಂದು ಗಮನಿಸಿದರೆ, ಒಬ್ಬರನ್ನೊಬ್ಬರು ದೂಷಣೆ ಮಾಡುವ ಪರಿಸ್ಥಿತಿಗೆ ಬಂದಿದೆ. ಇದನ್ನೂ ಮೀರಿ ಮಾನವೀಯ ಮೌಲ್ಯ ಸಮಾಜದಲ್ಲಿ ಬೆಳೆಸುವ ಕೆಲಸಗಳಾಗಬೇಕು ಎಂದರು.

ಟಿ.ಎಸ್‌.ಅನಂತಮೂರ್ತಿಯವರು ರಚಿಸಿದ ರಮಣ ಮಹರ್ಷಿ ಗ್ರಂಥ ಬಿಡುಗಡೆ ಮಾಡಿದ ಸಂಸದ ಜಿ.ಎಸ್‌.ಬಸವರಾಜ್‌, ನಮ್ಮ ದೇಶದ ಮೇಲೆ, ಸಂಸ್ಕೃತಿ ಮೇಲೆ ಅದೆಷ್ಟೇ ದಾಳಿಗಳಾದರೂ ನಮ್ಮ ಧರ್ಮ ಧಕ್ಕೆಯಾಗದಂತೆ ಉಳಿದಿದೆ ಎಂದರೆ ಅದು ನಮ್ಮಲ್ಲಿನ ಅವಧೂತರು, ಸ್ವಾಮೀಜಿಗಳ ಮಾರ್ಗದರ್ಶನ ಕಾರಣ ಎಂದು ಹೇಳಿದರು.

ಸಮಾಜ ಸರಿದಾರಿಯಲ್ಲಿ ಕೊಂಡೊಯ್ಯಲು ಇಂತಹ ಮಹಾತ್ಮರು ಹಾಕಿಕೊಟ್ಟ ಮಾರ್ಗ ಸಹಕಾರಿಯಾಗಿದೆ. ಇಂತಹವರ ತ್ಯಾಗ, ಶಕ್ತಿ ದೇಶಕ್ಕೆ ದೊರೆತ ದೊಡ್ಡ ಕೊಡುಗೆ. ರಮಣ ಮಹರ್ಷಿಗಳ ಬಗ್ಗೆ ಚಿಂತನೆ ಮಾಡುವವರು ಕೋಟ್ಯಂತರ ಜನರಿದ್ದಾರೆ. ರಮಣ ಮಹರ್ಷಿಗಳ ಬಗ್ಗೆ ಗ್ರಂಥ ರಚಿಸಿದ ಟಿ.ಎಸ್‌.ಅನಂತಮೂರ್ತಿ ಮಹರ್ಷಿಗಳ ಮಾರ್ಗದಲ್ಲಿ ಸಾಗಿ ಸ್ವತಃ ಸಾಧಕರಾಗಿದ್ದಾರೆ ಎಂದರು.

ಶ್ರೀ ದುರ್ಗಾಂಬಿಕಾ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ ಸಂಸ್ಥಾಪಕ ಡಾ.ಎಂ.ಆರ್‌.ಹುಲಿನಾಯ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಸಭಾಪತಿ ಎಸ್‌.ನಾಗಣ್ಣ, ನಿವೃತ್ತ ಐ.ಎ.ಎಸ್‌. ಅಧಿಕಾರಿ ಡಿ.ಸತ್ಯಮೂರ್ತಿ, ರಾಷ್ಟ್ರೀಯ ಖ್ಯಾತಿ ಶಿಲ್ಪಿ ಶ್ರೀ ಸಾರಾಲು ವೆಂಕಟರಮಣ ಭಟ್ಟ, ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಶಾಂತಾ ದುರ್ಗಾದೇವಿ ಹುಲಿನಾಯ್ಕರ್‌, ಡಾ.ರಮಣ್‌ ಆರ್‌.ಹುಲಿನಾಯ್ಕರ್‌,

ಡಾ. ಎಂ.ಎಚ್‌.ಮನೋನ್ಮಣಿ, ಡಾ.ಪಿ.ಲಾವಣ್ಯ, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್‌.ಪಾಟೀಲ್‌, ಎಂ.ಎಚ್‌.ಅಂಬಿಕಾ, ಶ್ರೀದೇವಿ ವೈದ್ಯಕೀಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶಾಲಿನಿ, ಡಾ.ಕೆ.ಆರ್‌.ಕಮಲೇಶ್‌, ಎಂ.ಕೆ.ಶಿವಶಂಕರ್‌, ಸಿ.ಪುಟ್ಟರಾಜು ಇತರರಿದ್ದರು.

ವಿವಿಧ ಧಾರ್ಮಿಕ ಕಾರ್ಯ: ನಗರದ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಳಸ ಸ್ಥಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಬ್ರಹ್ಮ ಕುಂಭಾಭಿಷೇಕ, ಚಂಡಿಕಾಹೋಮ, ಮಹಾಪೂಜೆ ನಡೆದವು. ನೂರಾರು ಭಕ್ತರು ಭಾಗವಹಿಸಿ ದೇವಿ ದರ್ಶನ ಪಡೆದರು. ಕಾರ್ಯಕ್ರಮದ ನಂತರ ಗಾಯಕಿ ಸಂಗೀತಾ ಕಟ್ಟೆ ಕುಲಕರ್ಣಿ ಅವರಿಂದ ಶ್ರೀ ದೇವಿ ಕೀರ್ತನೆಗಳ ಗಾಯನ ಹಾಗೂ ಬಾಲವಿಶ್ವನಥ್‌ ನೇತೃತ್ವದ ನೀಲಾಲಯ ತಂಡದಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ರಮಣ ಮಹರ್ಷಿ ಹಾಗೂ ಸತ್‌ ಉಪಾಸಿ ಸಾಧನೆ ಮೂಲಕವೇ ಇಂತಹ ಸ್ಥಾನ ಪಡೆದರು. ಅವರು ಸಮಾಜಕ್ಕೆ ನೀಡದ ಮಾರ್ಗದರ್ಶನ ಅನುಸರಿಸಿದರೆ ಸಾರ್ಥಕ ಬದುಕು ನಮ್ಮದಾಗುತ್ತದೆ. ದೇವರೆಲ್ಲಿದ್ದಾನೆ, ದೇವರೇ ಇಲ್ಲ ಎನ್ನುವವರಿದ್ದಾರೆ. ದೇವರು ಎಲ್ಲರಲ್ಲೂ ಇದ್ದಾನೆ. ನೋಡುವ ಒಳಗಣ್ಣು ಇರಬೇಕಷ್ಟೇ. ಅಂತರಂಗದ ದೃಢ ನಂಬಿಕೆಯೇ ದೇವರು. ನಂಬಿಕೆಯೇ ದೈವಶಕ್ತಿ. ಆ ಶಕ್ತಿ ಏನನ್ನಾದರೂ ಸಾಧಿಸಲು ಪ್ರೇರಣೆಯಾಗುತ್ತದೆ. ರಮಣ ಮಹರ್ಷಿ ಹಾಗೂ ಸತ್‌ ಉಪಾಸಿಯವರು ಸಕಲ ಜೀವಸಂಕುಲದ ಒಳಿತಿಗಾಗಿ ಬದುಕು ಮುಡುಪಿಟ್ಟರು.
-ವೀಣಾ ಬನ್ನಂಜೆ, ಧಾರ್ಮಿಕ ಚಿಂತಕಿ

ಟಾಪ್ ನ್ಯೂಸ್

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-koratagere

Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ

11-koratagere

ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ

10-

Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್‌ ಪ್ರತಾಪ್‌ ಜಾಮೀನು ಮಂಜೂರು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.