ಕಾನೂನು ಪಾಲಿಸುವುದರ ಜತೆಗೆ ಗೌರವಿಸಿ
Team Udayavani, Aug 26, 2019, 4:03 PM IST
ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ ಹೈಕೋರ್ಟ್ ವಕೀಲರಾದ ಜಿ.ಎಸ್. ಪ್ರಸನ್ನಕುಮಾರ್, ಪ್ರಾಂಶುಪಾಲ ಡಾ. ನಂದೀಶಯ್ಯ ಮತ್ತಿತರರು.
ತಿಪಟೂರು: ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ರಾಜಕಾರಣಿಗಳು, ಅಧಿಕಾರಿಗಳು, ಶ್ರೀಸಾಮಾನ್ಯರು ಸೇರಿದಂತೆ ಎಲ್ಲರಿಗೂ ಈ ನೆಲದಲ್ಲಿ ಒಂದೇ ರೀತಿಯ ಕಾನೂನುಗಳಿದ್ದು, ಪಾಲಿಸಬೇಕು. ಜತೆಗೆ ಗೌರವಿಸಬೇಕು ಎಂದು ಹೈಕೋರ್ಟ್ ವಕೀಲ ಜಿ.ಎಸ್. ಪ್ರಸನ್ನಕುಮಾರ್ ತಿಳಿಸಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸುಭದ್ರ ಸಮಾಜಕ್ಕಾಗಿ ವ್ಯವಸ್ಥಿತ ಕಾನೂನು ಎಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ನಿರ್ದಿಷ್ಟ ಹಾಗೂ ಏಕ ಕಾನೂನಿನ ಅಡಿಯಲ್ಲಿ ಎಲ್ಲರೂ ಜೀವನ ನಡೆಸಬೇಕು. ಇದನ್ನೇ ಮಹಾತ್ಮ ಗಾಂಧೀಜಿ, ರಾಮ ರಾಜ್ಯ ಕಲ್ಪನೆ ಎಂದಿದ್ದರು. ಎಲ್ಲಾ ಅಂಶಗಳ ಆಧಾರದ ಮೇಲೆ ಪ್ರಜಾಪ್ರಭುತ್ವದಲ್ಲಿ ವ್ಯವಸ್ಥಿತ, ನಿರ್ದಿಷ್ಟ ಕಾನೂನು ರಚಿಸಿಕೊಳ್ಳುವುದು ಹಾಗೂ ಅದನ್ನು ಪರಿಪಾಲನೆ ಮಾಡಬೇಕಾದ ಗುಣ ನಾವು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಾದ ನೀವು ಸುಭದ್ರ, ಸುವ್ಯವಸ್ಥಿತ ಕಾನೂನಿನಡಿಯಲ್ಲಿ ಸಾಮಾಜಿಕ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆ ಹೆಚ್ಚು ವಿಮರ್ಶಕ ಹಾಗೂ ಸ್ವಾರಸ್ಯವಾದ ಭಾಷೆಯಾಗಿದೆ. ನಮ್ಮ ಭಾವನೆಗಳನ್ನು ಸುಲಭವಾಗಿ ಮಾತೃ ಭಾಷೆಯಿಂದ ಮಾತ್ರ ಹಂಚಿಕೊಳ್ಳಬಹುದಾಗಿದೆ. ಕನ್ನಡ ಭಾಷೆಯ ಶಬ್ದಕ್ಕೆ ತನ್ನದೇ ಮಹತ್ವವಿದೆ. ನಮ್ಮ ಭಾಷೆ ಕಣ್ಮರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ, ಮನುಷ್ಯನಿಗೆ ಗಾಳಿ, ನೀರು ಹೇಗೆ ಮುಖ್ಯವೋ ಹಾಗೆಯೇ ಕಾನೂನು ಅವಶ್ಯ. ದಿನನಿತ್ಯದ ಜೀವನಕ್ಕೆ ಕನಿಷ್ಠ ಕಾನೂನಿನ ಅರಿವು ಎಷ್ಟು ಬೇಕೊ ಅಷ್ಟನ್ನಾ ದರೂ ತಿಳಿದುಕೊಳ್ಳಬೇಕು. ಕಾನೂನಿನಡಿಯಲ್ಲಿ ನಡೆದುಕೊಂಡರೆ ಸುಭದ್ರ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗ ಲಿದೆ ಎಂದರು. ಕಾಲೇಜಿನ ಎಲ್ಲಾ ವಿಭಾಗ ಗಳ ಮುಖ್ಯಸ್ಥರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.