ಪಟ್ಟನಾಯಕನಹಳ್ಳಿ ಬಸ್ ನಿಲ್ದಾಣದ ರಸ್ತೆ ಅವ್ಯವಸ್ಥೆ
Team Udayavani, Dec 28, 2019, 4:17 PM IST
ಶಿರಾ: ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಬಸ್ ನಿಲ್ದಾಣದ ರಸ್ತೆ ಅಭಿವೃದ್ಧಿ ಕಾಮಗಾರಿ ಅನುಮೋದನೆಯಾಗಿ ಒಂದು ವರ್ಷ ಕಳೆದರೂ ನನೆಗುದಿಗೆ ಬಿದ್ದಿದೆ.
ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠಕ್ಕೆ ಬರುವ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ 11 ಕೋಟಿ ಮತ್ತು 8 ಕೋಟಿ ಪ್ರತ್ಯೇಕ ಕಾಮಗಾರಿಗೆ ಮಂಜೂರಾತಿ ನೀಡಿತ್ತು. ಆದರೆ ವರ್ಷ ಕಳೆದರೂ ರಸ್ತೆ ಕಾಮಗಾರಿ ನಡೆದಿಲ್ಲ. ಬಾಕ್ಸ್ ಚರಂಡಿ ನಿರ್ಮಿಸಿ ಹಳೆಯ ಡಾಂಬರ್ ರಸ್ತೆ ಹಾಳು ಮಾಡಲಾಗಿದೆ. ಇದರಿಂದ ಸ್ಥಳೀಯರು ದೂಳಿನ ಸಮಸ್ಯೆ ಅನುಭವಿಸಬೇಕಾಗಿದೆ.
ಕಾಣೆಯಾದ ಗುತ್ತಿಗೆದಾರ: 2018ರಲ್ಲಿ ಪಟ್ಟನಾಯಕನಹಳ್ಳಿ ಬಸ್ ನಿಲ್ದಾಣದ 150 ಮೀಟರ್ ರಸ್ತೆ ಕಾಮಗಾರಿಗೆ 1 ಕೋಟಿ ರೂ. ಮಂಜೂರಾಗಿತ್ತು. ಅದರಂತೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರ ಹಳೆ ರಸ್ತೆ ತೆಗೆದು ರಸ್ತೆಯ ಅಕ್ಕ ಪಕ್ಕ ಬಾಕ್ಸ್ ಚರಂಡಿ ಕಾಮಗಾರಿ ಮುಗಿಸಿ ಹಿಂದೆ ಇದ್ದ ಡಾಂಬರ್ ರಸ್ತೆ ಕಿತ್ತು ಹಾಕಿಸಿದ್ದಾನೆ. ಶೀಘ್ರ ಡಾಂಬರಿಕರಣ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿ ಹೋದ ಗುತ್ತಿಗೆದಾರ ವರ್ಷ ಕಳೆದರೂ ಇತ್ತ ಸುಳಿದಿಲ್ಲ. ಇದೀದ ರಸ್ತೆ ಸಂಪೂರ್ಣ ಮಣ್ಣಿನ ರಸ್ತೆಯಾಗಿದ್ದು, ವಾಹನಗಳು ಸಂಚರಿಸಿದರೆ ದೂಳಿನ ಅಭಿಷೇಕವಾಗುತ್ತದೆ. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ಅಸ್ಪತ್ರೆಗೆ ಬರುವಂತ ವೃದ್ಧರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.
2019ರ ನವೆಂಬರ್‌ನಲ್ಲಿ ಪಟ್ಟನಾಯಕನಹಳ್ಳಿಯಿಂದ ಉದ್ದರಾಮನಹಳ್ಳಿ ಕ್ರಾಸ್‌ವರೆಗೆ 8 ಕೋಟಿ ರೂ. ವೆಚ್ಚದ ಕಾಮಗಾರಿಯೂ ಕಳಪೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಇಷ್ಟಾದರೂ ನಿರ್ಲಕ್ಷ್ಯ ವಹಿಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಡೆ ಸಾರ್ವಜನಿಕರ ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣ ಬಸ್ ನಿಲ್ದಾಣ ರಸ್ತೆಗೆ ಡಾಂಬರೀಕರಣ ಮಾಡುವ ಮೂಲಕ ದೂಳಿನಿಂದ ರಕ್ಷಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.