Road Mishap ಕಾರುಗಳ ಢಿಕ್ಕಿ: ಒಂದೇ ಕುಟುಂಬದ ಮೂವರು ಸೇರಿ ಐವರ ಸಾವು
Team Udayavani, Sep 8, 2024, 10:01 PM IST
ಮಧುಗಿರಿ (ತುಮಕೂರು): ಎರಡು ಕಾರುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ಐವರು ಮೃತಪಟ್ಟು, ಐದು ಜನ ಗಾಯಗೊಂಡಿರುವ ಘಟನೆ ತಾಲೂಕಿನ ಕಸಬಾ ವ್ಯಾಪ್ತಿಯ ಕೊರಟಗೆರೆ-ಮಧುಗಿರಿ ಗಡಿಭಾಗದ ಕಾಟಗಾನಹಟ್ಟಿಯ ಬಳಿ ರವಿವಾರ ಸಂಜೆ ಜರಗಿದೆ.
ಒಂದು ಕಾರಿನಲ್ಲಿದ್ದ ಪಾವಗಡ ಎತ್ತಿನಹಳ್ಳಿಯ ಜನಾರ್ದನ ರೆಡ್ಡಿ (63), ಅವರ ಪುತ್ರಿ ಸಿಂಧೂ (25), ಸಿಂಧೂ ಪುತ್ರ ಅಂಶು (8) ಹಾಗೂಮತ್ತೊಂದು ಕಾರಿನ ಚಾಲಕ ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ನಾಗರಾಜು (27), ಸಿದ್ದಗಂಗಪ್ಪ (45) ಮೃತಪಟ್ಟವರು.
ಮೃತ ಜನಾರ್ದನ ರೆಡ್ಡಿ ಸಂಬಂಧಿ ಗೀತಾ ಅವರ ಕಾಲು ಮುರಿತ, ಕಣ್ಣಿನ ಬಳಿ ಗಾಯವಾಗಿದ್ದು ಗೀತಾ ಅವರ ಪುತ್ರ ಯೋಧ (8) ಹಾಗೂ ಕಾರು ಚಾಲಕ ಆನಂದ್ ಅವರ ಕಾಲು ಮುರಿದಿದೆ. ಮೃತ ಸಿಂಧೂ ಅವರ ಒಂದು ವರ್ಷದ ಮಗುವಿಗೆ ಹಣೆಗೆ ಗಾಯಗಳಾಗಿವೆ.
ಪಾವಗಡದ ಎತ್ತಿನಹಳ್ಳಿಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಹಾಗೂ ತುಮಕೂರಿನಿಂದ ಬರುತ್ತಿದ್ದ ಮತ್ತೂಂದು ಕಾರಿನ ನಡುವೆ ಮಧುಗಿರಿ ಗಡಿಯ ಕಾಟಗಾನಹಳ್ಳಿಯ ಬಳಿ ಢಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿಯೇ ಸಿಂಧೂ ಸೇರಿ ನಾಲ್ವರು ಮೃತಪಟ್ಟರೆ, ಸಿಂಧೂ ಪುತ್ರ ಅಂಶು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಮಧುಗಿರಿ ಎಎಸೈಗಳಾದ ಹನುಮಂತರಾಪ್ಪ, ಶಿವಣ್ಣ ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.
ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತಾಪ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದು ಐದು ಜನ ಪ್ರಯಾಣಿಕರು ಅಸುನೀಗಿರುವುದಕ್ಕೆ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವರಾದ ತುಮಕೂರು ಸಂಸದ ವಿ.ಸೋಮಣ್ಣನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತನು ಕರುಣಿಸಲಿ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.