ರಸ್ತೆ ಬದಿ ಔಷಧಿ ತ್ಯಾಜ್ಯ ; ಆಕ್ರೋಶ
Team Udayavani, Nov 29, 2019, 5:22 PM IST
ಹುಳಿಯಾರು: ರಾಷ್ಟ್ರೀಯ ಹೆದ್ದಾರಿ 150ಎರಲ್ಲಿನ ಹುಳಿಯಾರಿನಿಂದ ಕೆಂಕೆರೆ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಆಸ್ಪತ್ರೆ ತ್ಯಾಜ್ಯಸುರಿದಿದ್ದು ಸ್ಥಳೀಯ ಪಾದಚಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.
ಸುರಿದಿರುವ ತ್ಯಾಜ್ಯದಲ್ಲಿ ಅರೆಬರೆ ಬಳಸಲಾಗಿರುವ ಔಷಧಗಳು, ಮಾತ್ರೆಗಳು,ಸೂಜಿಗಳು, ರಕ್ತಸಿಕ್ತ ಬ್ಯಾಂಡೇಜ್ ಬಟ್ಟೆಗಳು ಹಾಗೂ ಗ್ಲೂಕೋಸ್ ಬಾಟಲ್‌ಗಳು ಸೇರಿ ದಂತೆ ನಾನಾ ಬಗೆಯ ತ್ಯಾಜ್ಯಗಳು ಬಿದ್ದಿವೆ.
ಜಾನುವಾರುಗಳಿಗೆ ಕಂಟಕ: ಹೀಗೆ ರಾಸಾಯನಿಕ ಯುಕ್ತ ಔಷಧಗಳನ್ನು ತಂದುಸುರಿಯಲಾಗಿರುವ ಪ್ರದೇಶದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸಲಾಗು ತ್ತದೆ.ಮಳೆಗೆ ತ್ಯಾಜ್ಯ ವಸ್ತುಗಳು ಹಾಗೂ ರಾಸಾಯನಿಕಯುಕ್ತ ಔಷಧಗಳು ಜಾನುವಾರು ಮೇವಿಗೆ ಸೇರಿಕೊಂಡು ಅವುಗಳಆರೋಗ್ಯದಲ್ಲಿ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ.
ಆರೋಗ್ಯದ ಮೇಲೆ ದುಷ್ಪರಿಣಾಮ: ಈಮಾರ್ಗವಾಗಿ ಲಿಂಗಪ್ಪನಪಾಳ್ಯ, ಕೋಡಿ ಪಾಳ್ಯ,ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ, ಸೋಮಜ್ಜನಪಾಳ್ಯ, ಗೌಡಗೆರೆ ಗ್ರಾಮಗಳ ಶಾಲಾವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಹುಳಿಯಾರಿ ನಿಂದ ತಮ್ಮ ಊರುಗಳಿಗೆ ನಡೆದುಕೊಂಡು ಹೋಗುವುದಿದ್ದು ಈ ಔಷಧಿ ತ್ಯಾಜ್ಯ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ.
ಕ್ರಮ ಕೈಗೊಳ್ಳದ ಇಲಾಖೆ: ಇದೇ ರೀತಿ ಐದಾರು ತಿಂಗಳ ಹಿಂದೆ ವಿದ್ಯಾವಾರಿಧಿ ಶಾಲೆ ಸಮೀಪ ರಸ್ತೆಯ ಬದಿ ಔಷಧಿ ತ್ಯಾಜ್ಯ ಸುರಿಯಲಾಗಿತ್ತು. ಔಷಧ ನಿಯಂತ್ರಣ ಇಲಾಖೆ ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಉಪಯೋಗಿಸಲ್ಪಟ್ಟ ಔಷಧಿ ತ್ಯಾಜ್ಯವಸ್ತುಗಳನ್ನು ತಾಲೂಕಿನಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿ ರುವುದು ಮಾಮೂಲಾಗಿದೆ.
ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ: ಔಷಧಿ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ಸಂಸ್ಕರಣೆ ಮೂಲಕ ನಾಶಗೊಳಿಸಬೇಕು. ಗುಂಡಿ ತೆಗೆದುಅದರಲ್ಲಿ ಊಳುವಂತೆಯೂ ನಿದರ್ಶ ನವಿದೆ. ಆದರೆ ಈ ಎಲ್ಲಾ ನಿಯಮಗಳನ್ನೂ ಗಾಳಿಗೆ ತೋರಿ ಬೇಕಾಬಿಟ್ಟಿ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ. ಇಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಖಾಸಗಿ ಆಸ್ಪತ್ರೆಯಲ್ಲಿ ಬಳಸಿರುವುದು ಮೇಲ್ನೋಟಕ್ಕೆ ಖಚಿತಗೊಂಡಿದೆ. ಈಗಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಯ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೈದ್ಯಕೀಯ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿದರೆ ಪರಿಸರ ಅಧಿಕಾರಿಯಾಗಿ ನಾವು ನೋಟಿಸ್ ನೀಡಬಹುದೇ ವಿನಃ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದಿಲ್ಲ. ಡಿಎಸ್‌ಒ ಅವರ ಗಮನಕ್ಕೆ ತಂದರೆ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲು ಅವಕಾಶವಿದೆ. ಪಪಂಸಿಬ್ಬಂದಿಗೆ ಹೇಳಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ನೋಟಿಸ್ ನೀಡುತ್ತೇನೆ. –ಜ್ಯೋತಿಶ್ವರಿ, ಪರಿಸರ ಅಧಿಕಾರಿ.
-ಕಿರಣ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.