ಬ್ಯಾಂಕ್ ಸಿಬ್ಬಂದಿ ವರ್ತನೆಗೆ ಗ್ರಾಮೀಣ ಗ್ರಾಹಕರ ಆಕ್ರೋಶ
Team Udayavani, Jan 17, 2022, 5:20 PM IST
ಕೊರಟಗೆರೆ: ಎಸ್‌ಬಿಐ ಕೊರಟಗೆರೆ ಶಾಖೆಯಲ್ಲಿ 55 ಸಾವಿರಕ್ಕೂ ಅಧಿಕ ಗ್ರಾಹಕರ ಖಾತೆಗಳಿವೆ. ಬ್ಯಾಂಕಿನಲ್ಲಿ ನಿತ್ಯ 4 ಸಾವಿರಕ್ಕೂ ಅಧಿಕ ಗ್ರಾಹಕರಿಂದ 2 ಕೋಟಿಗೂ ಅಧಿಕ ವಹಿವಾಟು ನಡೆಯಲಿದೆ. ಬ್ಯಾಂಕಿನಲ್ಲಿ ಕೆಲಸ ಮಾಡುವ ಪ್ರಭಾರ ವ್ಯವಸ್ಥಾಪಕ, ಲೆಕ್ಕಾಧಿಕಾರಿ ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳಾ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ.
ಪಟ್ಟಣದ ಟಿಎಂ ರಸ್ತೆಯ ಎಸ್‌ಬಿಐ ಬ್ಯಾಂಕಿನ ಆವರಣದಲ್ಲಿ ಗ್ರಾಹಕರಿಗೆ ಶೌಚಾಲಯ, ನೀರು, ಪಾರ್ಕಿಂಗ್ ವ್ಯವಸ್ಥೆ ಮರೀಚಿಕೆಯಾಗಿದೆ. ಅಕ್ಷರ ಜ್ಞಾನವಿಲ್ಲದ ಗ್ರಾಮೀಣ ಗ್ರಾಹಕರ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ಮಹಿಳೆಯರ ನೋವಿನ ವೇದನೆ ಹೆಚ್ಚಾಗಿ ಬ್ಯಾಂಕಿನ ವ್ಯವಹಾರವನ್ನೇ ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.
ಬ್ಯಾಂಕಿನಿಂದ ಸೌಲಭ್ಯವಿಲ್ಲ: ಗ್ರಾಮೀಣ ಪ್ರದೇಶದಿಂದ ಸಾವಿರಾರು ಗ್ರಾಹಕರು ಬ್ಯಾಂಕಿಗೆ ವಹಿವಾ ಟಿಗೆ ಆಗಮಿಸುತ್ತಾರೆ. ಬ್ಯಾಂಕಿನ ಆವರಣದಲ್ಲಿ ಇಂತಿಷ್ಟು ಹಣ ಕೊಟ್ಟರೇ ಮಾತ್ರ ಖಾಸಗಿ ವ್ಯಕ್ತಿಗಳು ಬರೆದುಕೊಡುತ್ತಾರೆ ಇಲ್ಲವಾದರೇ ಗ್ರಾಹಕರು ಮನೆಗೆ ಹೋಗಬೇಕಾದ ಪರಿಸ್ಥಿತಿಯಿದೆ.
ವಹಿವಾಟಿಗೆ ಬರುವ ಗ್ರಾಹಕರಿಗೆ ಬ್ಯಾಂಕಿನಿಂದ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಗ್ರಾಹಕರ ಜೊತೆ ಉತ್ತಮ ಬಾಂಧವ್ಯವಿಲ್ಲದೇ ಸಮಸ್ಯೆ ನಿತ್ಯ ಹೆಚ್ಚಾಗಿ ಗ್ರಾಹಕರಿಂದ ತಮ್ಮ ಬ್ಯಾಂಕಿನ ಖಾತೆಯನ್ನುಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಗ್ರಾಹಕರಿಗೆ ಭಿತ್ತಿಪತ್ರ ಸ್ವಾಗತ: ಎಸ್‌ಬಿಐ ಕಟ್ಟಡದ ಎಟಿಎಂ ಎಡಭಾಗದಲ್ಲಿ ನರಗಳ ದೌರ್ಬಲ್ಯ, ಮಾನಸಿಕ ಸಮಸ್ಯೆ, ಲೈಂಗಿಕ ಸಮಸ್ಯೆ, ಉರಿನೋವು ಸೇರಿದಂತೆ ವಿವಿಧ ರೋಗಗಳಿಗೆ ಔಷಧಿನೀಡುವಂತಹ ಭಿತ್ತಿಪತ್ರ ಬ್ಯಾಂಕಿಗೆ ಬರುವಗ್ರಾಹಕರಿಗೆ ಸ್ವಾಗತ ಮಾಡುವಂತಿದೆ. ಬ್ಯಾಂಕ್ ಕಿಟಕಿಗಳು ಶಿಥಿಲವಾಗಿ ಭದ್ರತೆ ಮರೀಚಿಕೆಯಾಗಿದೆ.
ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು: ಬ್ಯಾಂಕ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಶುಕ್ರವಾರ ಗಲಾಟೆ ನಡೆದಿದೆ. ಈ ವೇಳೆ ವಿಡೀಯೊ ಮಾಡಲುಪ್ರಯತ್ನಿಸಿದ ವೇಳೆ ಬ್ಯಾಂಕಿ ಪ್ರಭಾರ ವ್ಯವಸ್ಥಾಪಕಶ್ರೀನಿವಾಸ್, ಸಿಬ್ಬಂದಿ ರಾಮಚಂದ್ರ ನಾಯ್ಕ ಪತ್ರಕರ್ತನ ಮೊಬೈಲ್ ಕಸಿಯುವ ಪ್ರಯತ್ನ ನಡೆಸಿ,ಹಲ್ಲೆಗೆ ಯತ್ನಿಸಿದ್ದಾರೆ. ಬ್ಯಾಂಕಿನ ಇಬ್ಬರು ಸಿಬ್ಬಂದಿವಿರುದ್ಧ ಕೊರಟಗೆರೆ ಠಾಣೆಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿದೆ.
ಎಸ್‌ಬಿಐ ಬ್ಯಾಂಕಿನಲ್ಲಿ ವಹಿವಾಟಿಗೆಗ್ರಾಹಕರು ನಿತ್ಯ ಅಲೆಯಬೇಕಿದೆ.ಮಹಿಳೆಯರು ಶೌಚಾಲಯಕ್ಕೆ ಪರದಾಡುವಪರಿಸ್ಥಿತಿಯಿದೆ. ಗ್ರಾಹಕರು ಬ್ಯಾಂಕಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಪೊಲೀಸ್ ಠಾಣೆಗೆದೂರು ನೀಡುವ ಬೆದರಿಕೆ ಹಾಕುತ್ತಾರೆ.ಬ್ಯಾಂಕ್ ಸಿಬ್ಬಂದಿ ವರ್ತನೆ ಬದಲಾಗಬೇಕು. – ಚೇತನ್, ಎಸ್‌ಬಿಐ ಗ್ರಾಹಕ, ಎತ್ತುಗಾನಹಳ್ಳಿ
ಗ್ರಾಹಕರಿಗೆ ಸೇವೆ ನೀಡುವುದು ನಮ್ಮ ಕರ್ತವ್ಯ. ಅನಾರೋಗ್ಯದಿಂದ ನಾನುರಜೆ ಇದ್ದೇನೆ. ಬ್ಯಾಂಕಿನಲ್ಲಿ ಗ್ರಾಹಕರುಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿನಡೆದಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಬ್ಯಾಂಕ್ ಸಿಬ್ಬಂದಿ ಜೊತೆ ಸಭೆ ನಡೆಸುತ್ತೇನೆ. – ಅರುಣ ಕುಮಾರಿ, ವ್ಯವಸ್ಥಾಪಕಿ, ಎಸ್‌ಬಿಐ ಬ್ಯಾಂಕ್, ಕೊರಟಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.