ಶ್ರೀಗಂಧ ಕಳ್ಳರ ಮೇಲೆ ಎನ್‌ಕೌಂಟರ್ : ಓರ್ವ ಸಾವು
Team Udayavani, Aug 21, 2021, 7:14 PM IST
ಕುಣಿಗಲ್ : ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಶ್ರೀಗಂಧ ಕಳ್ಳರ ಮೇಲೆ ಉಪ ಅರಣ್ಯಾಧಿಕಾರಿ ಮಹೇಶ್ ಪೈರಿಂಗ್ ಮಾಡಿದ ಕಾರಣ ಕಳ್ಳ ಓರ್ವನ್ನು ಸ್ಥಳದಲ್ಲೇ ಮೃತಪಟ್ಟು, ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಓರ್ವನ್ನು ಗಾಯಗೊಂಡಿರುವ ಘಟನೆ ತಾಲೂಕಿನ ಶ್ರೀಗಂಧ ಮೀಸಲು ಅರಣ್ಯ ಪ್ರದೇಶ ಕಂಪಲಪುರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ,
ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಪತ್ತೆಯಾಗಿಲ್ಲ, ಅರಣ್ಯ ಸಿಬ್ಬಂದಿ ಶೇಖರ್‌ನ ಎಡ ಕೈಗೆ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ,
ಘಟನೆ ವಿವರ : ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಂಪಾಲಾಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಶ್ರೀಗಂಧ ಪ್ಲಾಂಟ್ ಮಾಡಲಾಗಿದೆ. ಸುಮಾರು 1500 ಸಾವಿಕ್ಕೂ ಹೆಚ್ಚು ಶ್ರೀಗಂಧದ ಮರಗಳಿವೆ ಈ ಹಿಂದೆಯೂ ಇಲ್ಲಿ ಸಾಕಷ್ಟು ಭಾರಿ ಶ್ರೀಗಂಧ ಕಳವು ಪ್ರಕರಣಗಳು ನಡೆದಿವೆ. ಶನಿವಾರವೂ ಮೂರು ರಿಂದ ನಾಲ್ಕು ಮಂದಿ ಶ್ರೀಗಂಧ ಚೋರರು ಬೆಳಗ್ಗೆ 9.3೦ ಸಮಯದಲ್ಲಿ ಶ್ರೀಗಂಧ ಮರಗಳನ್ನು ಕತ್ತರಿಸುತ್ತಿದ್ದಾಗ ಗಸ್ತಿನಲ್ಲಿದ್ದ ಇದ್ದ ಉಪ ಅರಣ್ಯಾಧಿಕಾರಿ ಮಹೇಶ್, ಸಿಬ್ಬಂದಿಗಳಾದ ಶಿವನಂಜಪ್ಪ, ಶರಣಪ್ಪ, ಶಿವನಂಜಯ್ಯ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಕಳ್ಳರು ಅರಣ್ಯ ಸಿಬ್ಬಂದಿಯ ಮೇಲೆ ಮಚ್ಚು ಹಾಗೂ ಕಲ್ಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ:ಸೆಲ್ಫಿ ತಂದ ಆಪತ್ತು | ಸಮುದ್ರ ಪಾಲಾದ ಹಾನಗಲ್ ಮೂಲದ ವ್ಯಕ್ತಿ
ಈ ವೇಳೆ ಅರಣ್ಯಾಧಿಕಾರಿಗಳು ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಕಳ್ಳರು ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಉಪ ಅರಣ್ಯಾಧಿಕಾರಿ ಮಹೇಶ್ ನೇರವಾಗಿ ಕಳ್ಳರ ಮೇಲೆ ಗುಂಡು ಹಾರಿಸಿದ್ದಾಗ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಉಳಿದ ಮೂರು ಮಂದಿ ಕಳ್ಳರು ಪರಾರಿಯಾಗಿದ್ದಾರೆ, ಉಪ ಅರಣ್ಯಾಧಕಾರಿ ಮಹೇಶ್ ಶ್ರೀಗಂಧ ಚೋರರ ಮೇಲೆ ಎನ್ ಕೌಂಟರ್ ಮಾಡಿರುವ ಖಡಕ್ ಅಧಿಕಾರಿ. ಆರ್‌ಏಫ್‌ಓ ಮಹಮದ್ ಮನ್ಸೂರ್ ಅವರ ನೇತೃತ್ವದ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್‌ಪಿ ರಾಹುಲ್ ಕುಮಾರ್, ಡಿಎಫ್‌ಓ ಡಾ.ರಮೇಶ್, ಎಸಿಎಫ್‌ಓ ಚಿಕ್ಕರಾಜು, ತಹಸೀಲ್ದಾರ್ ಮಹಾಬಲೇಶ್ವರ್, ಡಿವೈಎಸ್‌ಪಿ ರಮೇಶ್, ಸಿಪಿಐ ಗುರುಪ್ರಸಾದ್, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯೂರುದುರ್ಗ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅರಣ್ಯಾಧಿಕಾರಿಗಳ ಗುಂಡಿಗೆ ಬಲಿಯಾದ ಶ್ರೀಗಂಧ ಚೋರನ ವಿಳಾಸ ಪತ್ತೆಯಾಗಿಲ್ಲ. ಸುಮಾರು 3೦ ವರ್ಷ ವಯಸ್ಸಿನ ಯುವಕನಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ,
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.