ಶಿರಾ: ಗಂಗನಹಳ್ಳಿಯ ಪುರಾತನ ಕೋಟೆ ರಕ್ಷಿಸಿ; ಶಾಸಕರಿಗೆ ಗ್ರಾಮಸ್ಥರ ಮನವಿ
ದರೋಡೆಕೋರರ ತಲೆಯ ಮೇಲೆ ರಾಗಿಯ ಅಂಬಲಿ ಸುರಿದು ತಮ್ಮನ್ನು ತಮ್ಮ ಆಹಾರ ಧಾನ್ಯಗಳನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದರು
Team Udayavani, Nov 20, 2021, 12:38 PM IST
ಶಿರಾ : ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ತಾಲೂಕಿನ ಗಂಗನಹಳ್ಳಿ ಗ್ರಾಮದಲ್ಲಿರುವ ಪುರಾತನ ಕೋಟೆ (ಬುರ್ಜು) ಶಿಥಿಲಗೊಂಡಿದೆ. ಈ ಕೋಟೆಯ ಪಕ್ಕದಲ್ಲಿಯೇ ‘ಮುದ್ದೆ ಮಾರಮ್ಮ’ ದೇವಿಯ ದೇವಾಲಯ ಇದ್ದು, ಕೋಟೆಯ ಕಲ್ಲುಗಳು ದೇವಾಸ್ಥಾನದ ಮೇಲೆ ಬಿದ್ದಿರುವುದರಿಂದ, ದೇವಾಲಯ ಕೂಡ ನೆಲಕ್ಕುರುಳಿದೆ.
ಸುಮಾರು 350-400 ವರ್ಷಗಳ ಪುರಾತನ ಕೋಟೆಯನ್ನು ರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಶಾಸಕರಾದ ಸಿ.ಎಂ ರಾಜೇಶ್ ಗೌಡ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕೋಟೆ ಅಥವಾ ಬುರ್ಜಿನ ವಿಶೇಷತೆ :
ಅಪರೂಪದ ಕಟ್ಟಡಗಳ ಮಧ್ಯೆ ಈ ಬುರ್ಜು ಕೂಡ ವಿಶೇಷ. ಇದು ಸುಮಾರು 350-400 ವರ್ಷಗಳ ಹಳೆಯದು ಎಂಬುದು ಸ್ಥಳೀಯರ ನಂಬಿಕೆ. ಕೆಲವರು ಸುಮಾರು 500 ವರ್ಷಗಳ ಹಳೆಯದು ಅಂತಾರೆ.
ಈ ಹಿಂದೆ ದಾಳಿಕೋರರು ಊರುಗಳಿಗೆ ಲಗ್ಗೆ ಇಟ್ಟಾಗ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ, ಹಾಗೂ ತಮ್ಮ ಆಹಾರ ಧಾನ್ಯಗಳನ್ನು ದರೋಡೆಕೋರರು ಮತ್ತು ಕಳ್ಳರಿಂದ ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಈ ಕೋಟೆಯುನ್ನು (ಬುರ್ಜ) ನಿರ್ಮಾಣ ಮಾಡಿದ್ದರಂತೆ.
ಕಳ್ಳರು ಈ ಕೋಟೆ ಹತ್ತಲು ಪ್ರಯತ್ನಿಸಿದರೆ ಬಿಸಿ ರಾಗಿಯ ಅಂಬಲಿಯನ್ನು ದರೋಡೆಕೋರರ ತಲೆಯ ಮೇಲೆ ಸುರಿದು ತಮ್ಮನ್ನು ತಮ್ಮ ಆಹಾರ ಧಾನ್ಯಗಳನ್ನು ರಕ್ಷಣೆ ಮಾಡಿಕೊಳ್ಳುತ್ತಿದ್ದರು ಎಂದು ಊರಿನ ಹಿರಿಯರ ಹೇಳುತ್ತಾರೆ.
ಮತ್ತೊಂದು ವಿಷಯ ಅಂದ್ರೆ ಈ ಬುರ್ಜಿನ ಪಕ್ಕದಲ್ಲಿಯೇ ‘ಮುದ್ದೆ ಮಾರಮ್ಮ’ನ ದೇವಾಲಯವಿದೆ. ಕೋಟೆಯ ಕಲ್ಲುಗಳು ದೇವಸ್ಥಾನದ ಮೇಲೆ ಬಿದ್ದಿರುವುದರಿಂದ ಆ ದೇವಾಲಯ ಕೂಡ ನೆಲಕ್ಕುರುಳಿದೆ.
ಪ್ರತಿ ಊರಿನಲ್ಲಿ ಏನಾದರೂ ಇಂತಹ ಕುತೂಹಲಭರಿತ ಕಟ್ಟಡಗಳು, ಪುರಾತನ ದೇವಾಲಗಳು, ಸ್ತಂಭಗಳು ಇವೆ. ಇಂತಹವುಗಳನ್ನು ಸರ್ಕಾರ, ಪುರಾತತ್ವ ಇಲಾಖೆ ರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಕೂಡ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿದಂತಾಗುತ್ತದೆ ಎಂಬುದು ಗಂಗನಹಳ್ಳಿ ಗ್ರಾಮಸ್ಥರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Karkala: ಗ್ರಾಹಕನ ಸೋಗಿನಲ್ಲಿ ಜ್ಯುವೆಲರಿ ಶಾಪ್‌ಗೆ ಬಂದು ಒಡವೆ ಕದ್ದು ಪರಾರಿಯಾದ ಕಳ್ಳ
Subramanya: ನಾಪತ್ತೆಯಾದ ವ್ಯಕ್ತಿ ಹರಿಹರ ಪಳ್ಳತ್ತಡ್ಕದಲ್ಲಿ ಪತ್ತೆ
Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.