ನೀರು ಉಳಿಸಿ ಅಂತರ್ಜಲ ಕಾಪಾಡಿ
Team Udayavani, May 31, 2020, 7:20 AM IST
ತುರುವೇಕೆರೆ: ಪ್ರಧಾನಿ ಮೋದಿಯವರು ನರೇಗ ಯೋಜನೆಯ ಮೂಲಕ ರೈತರ, ಬಡವರ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲು ಆರ್ಟ್ ಆಫ್ಲಿವಿಂಗ್ ಸಂಸ್ಥೆಯ ಸಹ ಯೋಗದೊಂದಿಗೆ ಅಂತರ್ಜಲ ಚೇತನ ಯೋಜನೆಗಳ ಕಾಮಗಾರಿಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಮಾಯಸಂದ್ರ ಹೋಬಳಿಯ ಭೈತರ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ದುಮ್ಮನಹಳ್ಳಿಯಲ್ಲಿ ಅಂತರ್ಜಲ ಚೇತನ ಯೋಜನೆಗಳ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ನರೇಂದ್ರ ಮೋದಿಯವರು ನರೇಗಾ ಯೋಜನೆಗಾಗಿ ಬಜೆಟ್ ನಲ್ಲಿ 60 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದೇ ಅಲ್ಲದೇ ರಾಜ್ಯ ಅಭಿವೃದ್ಧಿಗೆ 1831 ಕೋಟಿ ರೂ. ನೀಡುವ ಮೂಲಕ ರಾಜ್ಯದ ಬಗ್ಗೆ ಹೆಚ್ಚಿನ ಒಲವನ್ನು ತೋರಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಅಪವ್ಯಯವಾಗುತ್ತಿರುವ ನೀರು ಉಳಿಸಿ ಅಂತರ್ಜಲ ಕಾಪಾಡೋಣ. ಅಂತರ್ಜಲ ವೃದ್ಧಿ ಮಾಡುವ ಕುರಿತಂತೆ ಚೀನಾ ದೇಶದಲ್ಲಿ ನೂತನ ಯೋಜನೆ ಗಳನ್ನು ರೂಪಿಸಲಾಗಿದೆ. ನರೇಗ ಯೋಜನೆಯ ಮೂಲಕ ಅಂತರ್ಜಲ ಹೆಚ್ಚಿಸುವ ರಾಜ್ಯದ ಅಂತರ್ಜಲ ಚೇತನ ಯೋಜನೆಯ ಬಗ್ಗೆ ವಿಶ್ವಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು,
ಹಾಗಾಗಿ ಪ್ರತಿಯೊಬ್ಬರೂ ಮಳೆ, ಹೇಮಾವತಿ ನಾಲಾ ನೀರನ್ನು ಒಂದೆಡೆ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದರು. ಅಂತರ್ಜಲ ಚೇತನ ಯೋಜನೆ ರೂಪರೇಷೆಯ ಕ್ಯಾಲೆಂಡರ್‌ನ್ನು ಸಚಿವರು ಬಿಡುಗಡೆ ಮಾಡಿದರು. ಶಾಸಕರಾದ ಜಯರಾಂ, ಡಾ.ರಂಗನಾಥ್, ಬಿ.ಸಿ. ನಾಗೇಶ್, ಜಿ ಪಂ ಸಿಇಒ ಶುಭಾ ಕಲ್ಯಾಣ್, ಉಪವಿಭಾಗಾಧಿಕಾರಿ ನಂದಿನಿ, ತಹಶೀಲ್ದಾರ್ ನಯೀಂ ಉನ್ನೀಸಾ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.