ಕಳೆದು ಹೋದ ದೇವಾಲಯ: ಪರಿಶೀಲನೆ
Team Udayavani, Jul 16, 2022, 4:42 PM IST
ಕುಣಿಗಲ್: ಸುಮಾರು 949 ವರ್ಷದ ಹಳೇಯ ಚೋಳರ ಕಾಲದ ದೇವಸ್ಥಾನ ಕಳೆದು ಹೋಗಿದೆ, ಹುಡುಕಿ ಕೊಡಿ ಎಂದು ನಿವೃತ್ತಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡುಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಪುರತತ್ವಇಲಾಖೆಯ ಅಧಿಕಾರಿಗಳು ಕುಣಿಗಲ್‌ನ ವಿವಿಧ ಭಾಗಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿವಿಧ ಗ್ರಾಮಗಳಲ್ಲಿ ಪರಿಶೀಲನೆ: ತಮಿಳುನಾಡಿನ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎ.ಜಿ.ಪೊನ್ ಮಾಣಿಕ್ಕವೆಲ್, ಕುಣಿಗಲ್‌ನ ಕೊತ್ತಗಿರಿ ಗ್ರಾಮದಲ್ಲಿ ರಾಜ ರಾಜ ಚೋಳ-1 ನೇ ವಂಶಸ್ಥರು 949 ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕುರುಹು ಇಲ್ಲವಾಗಿದೆ, ದೇಗುಲದಲ್ಲಿದ್ದ ವಿಗ್ರಹವೂನಾಪತ್ತೆಯಾಗಿದೆ ಎಂದು ತಮಿಳುನಾಡು ಸರ್ಕಾರಕ್ಕೆಪತ್ರ ಬರೆದಿದ್ದರಿಂದ ಕರ್ನಾಟಕ ರಾಜ್ಯದ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್,ಇತಿಹಾಸ ತಜ್ಞ ಡಾ.ಎಚ್.ಎಸ್.ಗೋಪಾಲ್ ರಾವ್‌ತಾಲೂಕಿನ ಕೊತ್ತಗೆರೆ ಗ್ರಾಮದ ಹಳ್ಳಿಮರ,ಗಂಗೇನಹಳ್ಳಿ, ದೊಡ್ಡಕೆರೆ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿವೃತ್ತ ಐಜಿಪಿ ತಿಳಿಸಿದ ಸ್ಥಳ ಗಂಗೇನಹಳ್ಳಿನ?: ನಿವೃತ್ತ ಐಜಿಪಿ ಎ.ಜಿ.ಪೊನ್ ಮಾಣಿಕ್ಕವೆಲ್,ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿರುವ ಪತ್ರದಲ್ಲಿ ರಾಜರಾಜ ಚೋಳ-1, ಅವರ ಮೊಮ್ಮಗ ಹಾಗೂ ರಾಜೇಂದ್ರ ಚೋಳ-1 ಅವರ ಪುತ್ರಉದಯರ್ ರಾಜಾಧಿ ರಾಜ ದೇವರು, ಕುಣಿಗಲ್‌ನಲ್ಲಿ ರಾಜೇಂದ್ರ ಚೋಳಪುರಂ ಎಂಬ ಪಟ್ಟಣವನ್ನು ಸ್ಥಾಪಿಸಿದ್ದರು. 949 ವರ್ಷಗಳ ಹಿಂದೆ ಕುಣಿಗಲ್ ನಿಂದ 5 ಕಿ.ಮೀ ದೂರದಲ್ಲಿರುವ ಕೊತ್ತಗಿರಿಗ್ರಾಮದಲ್ಲಿ ತಮ್ಮ ತಂದೆಯ ನೆನಪಿಗಾಗಿರಾಜೇಂದ್ರ ಚೋಳೀಶ್ವರಂ ಎಂಬ ದೇವಾಲಯ ನಿವಿರ್ಮಿಸಿದ್ದರು.
ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ದೂರು: ದೇವಾಲಯಕ್ಕೆ ಅಪರೂಪದ ಕಂಚಿನ ನಟರಾಜ ವಿಗ್ರಹವನ್ನು (ಈ ವಿಗ್ರಹವನ್ನು ರಾಜಾಧಿರಾಜ ವಿಂಧಗರ್ ಎಂದು ಕರೆಯುತ್ತಾರೆ)ದಾನ ಮಾಡಿದ ಅಪರೂಪದ ಕಲ್ಲಿನ ವಿಗ್ರಹವಾಗಿದೆಎಂದು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಈ ಬಗ್ಗೆತಮಿಳುನಾಡಿನ ಹಿಂದೂ ಧಾರ್ಮಿಕ ಹಾಗೂ ದತ್ತಿಇಲಾಖೆಯ ಪಿ.ಕೆ.ಸುಕರ್‌ಬಾಬುಗೆ ಮಾಣಿಕ್ಕವೆಲ್ ದೂರು ನೀಡಿದ್ದಾರೆ.
ಸ್ಥಳದ ಬಗ್ಗೆ ಸ್ಪಷ್ಟಪಡಿಸಿಲ್ಲ: ಮೊದಲು ಕೊತ್ತಗೆರೆ ಗ್ರಾಮ ಇದ್ದಾಗಿತ್ತಾ, ಇಲ್ಲಿನ ಜನರು ಮಾರಕ ರೋಗ ಪ್ಲೇಗ್ ಅಥವಾ ಇತರೆ ದಾಳಿಗೆ ಒಳಗಾಗಿ ಈ ಗ್ರಾಮ ತೊರೆದು ಅಲ್ಲಿ ವಾಸವಾಗಿದ್ದಾರ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಎ.ಜಿ.ಪೊನ್ ಮಾಣಿಕ್ಕವೆಲ್ ಹೇಳಿರುವಸ್ಥಳ ಇದೇ ಎಂದು ಸ್ಪಷ್ಟಪಡಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇವಾಲಯ ಕಂಡುಬಂದಿಲ್ಲ : ಕೊತ್ತಗೆರೆ ಗ್ರಾಮದಲ್ಲಿ ತಮಿಳು ಶಾಸನ ಇದೆ. ಆ ರೀತಿಯ ಯಾವುದೇ ದೇವಾಲಯಗಳು ಕಂಡು ಬಂದಿಲ್ಲ ಹಾಗೂ ಗಂಗೇನಹಳ್ಳಿ ಗ್ರಾಮದಲ್ಲಿ ಮಾಣಿಕ್ಕವೆಲ್ ಉಲ್ಲೇಖದಂತೆ ಶಿವಲಿಂಗ, ವೀರಗಲ್ಲು, ಜೈನ ತೀರ್ಥಕರನ ಶಿಲ್ಪಿ, ಕಲ್ಲಿನ ಬಸವಣ್ಣ,ಸೂರ್ಯನ ವಿಗ್ರಹಗಳು ಮೇಲ್ನೋಟಕ್ಕೆಕಂಡು ಬಂದಿದೆ ಎಂದು ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್. ಗೋಪಾಲ್, ಇತಿಹಾಸ ತಜ್ಞ ಡಾ.ಎಚ್. ಎಸ್.ಗೋಪಾಲ್ ರಾವ್ ಹೇಳಿದರು.
3 ಸಾವಿರ ವರ್ಷ ಪುರಾತನ :
ಕುಣಿಗಲ್ ಕೆರೆ ಕೋಡಿ ಹಿಂಭಾಗದ ಗಂಗೆನಹಳ್ಳಿ, ಗಂಗೆಹಳ್ಳಿ ದಿಬ್ಬ,ಗಂಗರಹಳ್ಳಿ ಎಂದು ಕರೆಯಲ್ಪಡುವ ಇಂದಿನ ಗಂಗೆನಹಳ್ಳಿ ಸುಮಾರು ಮೂರು ಸಾವಿರ ವರ್ಷಗಳಷ್ಟು ಪುರಾತನವಾಗಿದ್ದು, ಈ ಸ್ಥಳವನ್ನು ಇತಿಹಾಸ ತಜ್ಞರು ಪ್ರಗೈತಿಹಾಸಿಕ ನೆಲೆ ಎಂದು ಗುರುತಿಸಿದ್ದಾರೆ. ಇತಿಹಾಸ ಪೂರ್ವಕಾಲದ ಕುರುಹುಗಳಾದ ನೂತನ ಶಿಲಾಯುಗ ಉಜ್ಜಿ ನಯಗೊಳಿಸಲಾದ ಶಿಲಾಯುಧಗಳು, ಕೆಂಪು ವರ್ಣದ ಮಡಿಕೆ, ಕುಡಿಕೆಗಳು, ಬೂದಿದಿಬ್ಬ, ಕಬ್ಬಿಣದ ಕಿಟ್ಟ, ಅಸ್ಥಿ ಮೂಳೆಗಳು ಕಂಡುಬರುತ್ತವೆ. ಗಂಗರ ಕಾಲಾವಧಿಯಲ್ಲಿ ಗಂಗಾ ಪಟ್ಟಣ, ಗಂಗೇನಹಳ್ಳಿಯಲ್ಲಿ ಜನವಸತಿಯು ನೆಲೆಸಿತ್ತು. ಕಾಲಾನಂ ತರ ಪ್ರಾಕೃತಿಕ ವಿಕೋಪವೋ ಅಥವಾ ಶತ್ರುಗಳ ದಾಳಿಯೋ ಸಂಭವಿಸಿ ಗಂಗಪಟ್ಟಣವು ನಶಿಸಿ ಹೋಗಿರಬಹುದು ಎನ್ನಲಾಗಿದ್ದು, ಪುರಾತತ್ವ ಇಲಾಖೆ ನಿರ್ದೇಶಕರು, ಇತಿಹಾಸ ತಜ್ಞರು ನೀಡುವ ಮಾಹಿತಿಯಿಂದ ಮೂಲ ಇತಿಹಾಸ ತಿಳಿಯ ಬಹುದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ
Minister ಸೋಮಣ್ಣ, ಸಿ.ಎಸ್. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್: ಬಂಧನ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.