ಬೀಜ ಮಸೂದೆ ಜಾರಿಗೆ ವಿರೋಧ
Team Udayavani, Feb 14, 2020, 3:02 PM IST
ಸಾಂಧರ್ಬಿಕ ಚಿತ್ರ
ತಿಪಟೂರು: ಹಲವು ಬಿಕ್ಕಟ್ಟುಗಳಿಂದ ನರಳುತ್ತಿರುವ ಕೃಷಿ ಕ್ಷೇತ್ರವನ್ನು ಮತ್ತಷ್ಟು ಅಪಾಯಕ್ಕೆ ದೂಡುವ ಕೃಷಿ ವಿನಾಶಕಾರಿ ಬೀಜ ಮಸೂದೆ ಜಾರಿಗೆ ಮುಂದಾಗು ತ್ತಿರುವುದು ಖಂಡನೀಯ ಎಂದು ತುಮಕೂರಿನ ಸಹಜ ಬೇಸಾಯ ಶಾಲೆಯ ಡಾ.ಮಂಜುನಾಥ್ ತಿಳಿಸಿದರು.
ನಗರದ ಎಪಿಎಂಸಿಯ ರೈತ ಭವನದಲ್ಲಿ ಸಹಜ ಬೇಸಾಯ ಶಾಲೆ, ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ್ಯ ರೈತ ಸಂಘ, ಅಖೀಲ ಭಾರತ ಕಿಸಾನ್ ಸಭಾ ಮತ್ತು ಆಸಕ್ತ ಪ್ರಜ್ಞಾವಂತ ನಾಗರಿಕರ ಸಹಯೋಗದಡಿ ಬೀಜ ಮಸೂದೆ-2019 ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ನೂತನ ಕಾಯ್ದೆಯಡಿ ಬೀಜ ವಾಣಿಜ್ಯೀಕರಣ ಪ್ರೋತ್ಸಾಹಿಸಿ ಲಾಭಕೋರ ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ ದುಬಾರಿ ಬೆಲೆ ನಿಗದಿಪಡಿಸಿ ಮಾರುವ ಹಕ್ಕು ನೀಡುವ ಬೀಜ ಮಸೂದೆ ಜಾರಿಗೊಳಿಸಲು ತಯಾರಿ ನಡೆಸಿ ರೈತರ ಹಕ್ಕು ಕಿತ್ತುಕೊಳ್ಳಲು ಮುಂದಾಗಿದೆ ಎಂದು ದೂರಿದರು.
ತುಮಕೂರಿನ ಆರ್ಡರ್ ಸಂಸ್ಥೆ ಯೋಜನಾ ನಿರ್ದೇಶಕ ಜಿ.ವಿ. ರಘು ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಪಾಶ್ಚಿಮಾತ್ಯ ಮಾದರಿ ಜಾರಿಗೆ ತಂದು ಇಳುವರಿ, ಗುಣಮಟ್ಟದಲ್ಲಿ ವ್ಯತ್ಯಯ ಉಂಟು ಮಾಡಿವೆ. ಇದರ ಜೊತೆಗೆ ಬೀಜ ಮಸೂದೆ ಜಾರಿಗೆ ತಂದರೆ ಮಾರಕವಾಗಲಿದೆ ಎಂದರು.
ತುಮಕೂರು ವಿಜ್ಞಾನ ಕೇಂದ್ರದ ಯತಿರಾಜ್, ಆರ್ಡರ್ ಸಂಸ್ಥೆಯ ಮಾಧವನ್, ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೆನ್ನಾಯಕನಹಳ್ಳಿ ದೇವ ರಾಜು, ಪ್ರಾಂತೀಯ ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನಬಸವಯ್ಯ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.