ಶಿರಾದಿಂದಲೇ ಬಿಜೆಪಿ-ಜೆಡಿಎಸ್‌ ಪ್ರೇಮಾಂಕುರ!


Team Udayavani, Mar 16, 2022, 3:35 PM IST

ಶಿರಾದಿಂದಲೇ ಬಿಜೆಪಿ-ಜೆಡಿಎಸ್‌ ಪ್ರೇಮಾಂಕುರ!

ತುಮಕೂರು: ಶಿರಾ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ನಡುವೆ ಮತ್ತೆ ಪ್ರೇಮಾಂಕುರವಾಗಿದ್ದು, 2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಮತ್ತಷ್ಟು ಕಡೆ ಮೈತ್ರಿ ಹೆಸರಲ್ಲಿ ಪ್ರೇಮ ವಿಸ್ತರಿಸಲಿದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಭವಿಷ್ಯ ನುಡಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023-24ರ ಚುನಾವಣೆ ಹೊತ್ತಿಗೆ ದೊಡ್ಡ ರಾಜಕೀಯ ಧ್ರುವೀಕರಣವಾಗಲಿದೆ. ಪಂಚ ರಾಜ್ಯ ಚುನಾವಣೆ ಫ‌ಲಿತಾಂಶವೇ ಇದಕ್ಕೆ ಮುನ್ನಡಿ ಬರೆದಿದೆ ಎಂದು ಹೇಳಿದರು.

ಸಂಪುಟ ವಿಸ್ತರಣೆ ಚರ್ಚೆ: ಐದು ರಾಜ್ಯಗಳಲ್ಲಿಯ ಚುನಾವಣೆ ಫ‌ಲಿತಾಂಶವನ್ನು ಆಳಕ್ಕೆ ಹೋಗಿ ವಿಶ್ಲೇಷಣೆ ಮಾಡಿದರೆ ಅವಧಿಗೂ ಮುಂಚಿತವಾಗಿ ಚುನಾವಣೆ ಬರಲಾರದು. ಅವಧಿಗೂ ಮುನ್ನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತೋ ಇಲ್ಲವೋ ಅಂಥ ಗೊಂದಲ ವಿದ್ದಾಗ ಮಾತ್ರ ಅವಧಿಪೂರ್ವ ಚುನಾವಣೆಗೆ ಹೋಗ್ತಾರೆ. ಈಗ ಸಂಪುಟ ವಿಸ್ತರಣೆ ಮಾಡುವ ವಿಷಯ ಚರ್ಚೆಯಲ್ಲಿದೆ. ಸಂಪುಟ ವಿಸ್ತರಣೆ ಸರ್ಕಾರದ ಆಂತರಿಕ ವಿಚಾರ ಎಂದು ಹೇಳಿದರು.

ಚುನಾವಣೆಯಲ್ಲಿ ಬ್ಯಾಲೆಟ್‌ ಪೇಪರ್‌ ಸೂಕ್ತ: ಯಾವುದೆ ತಂತ್ರಜ್ಞಾನವನ್ನು ಸುಲಭವಾಗಿ ಟ್ಯಾಂಪರ್‌ ಮಾಡಬಹುದು. 40-50 ಸಾವಿರದ ಇವಿಎಂನಲ್ಲಿ ಟ್ಯಾಂಪರ್‌ ಮಾಡಕ್ಕೋಗಲ್ಲ ಅಂಥ ಹೇಳಲು ಸಾಧ್ಯವಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಅಂದರೆ ಬ್ಯಾಲೆಟ್‌ ಪೇಪರ್‌ ಸೂಕ್ತ ಎಂದು ಜಯಚಂದ್ರ ತಿಳಿಸಿದರು.

ಅಮೆರಿಕಾ, ಜಪಾನ್‌ ರಾಷ್ಟ್ರದಲ್ಲೇ ಇವಿಎಂ ಬಳಸುತ್ತಿಲ್ಲ. ಭಾರತ, ದಕ್ಷಿಣ ಆಫ್ರಿಕಾದ ನಾಲ್ಕು ರಾಷ್ಟ್ರಗಳಲ್ಲಿ ಮಾತ್ರ ಬಳಸಲಾಗುತ್ತಿದೆ. ಇವಿಎಂ ಟ್ಯಾಪಿಂಗ್‌ ವಿಷಯ ವನ್ನು ಮಾಧ್ಯಮಗಳು ಮುಚ್ಚಿಡುತ್ತಿವೆ ಎಂದು ಆರೋಪಿಸಿದರು.

ನೀಟ್‌, ರಾಜ್ಯಗಳ  ಒಂದೊಂದು ನಿಲುವು ಸಲ್ಲದು :

ನೀಟ್‌ ಕುರಿತು ಒಂದೊಂದು ರಾಜ್ಯಗಳ ಒಂದೊಂದು ನಿಲುವು ಸಲ್ಲದು, ತಮಿಳುನಾಡಲ್ಲಿ ನೀಟ್‌ ನಿರ್ಬಂಧಿಸಿದ್ದಾರೆ. ಒಂದು ರಾಜ್ಯ ಒಂದು ನಿಲುವು, ಇನ್ನೊಂದು ರಾಜ್ಯ ಇನ್ನೊಂದು ನಿಲುವು ತೆಗೆದು ಕೊಂಡರೆ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ. ದೇಶದ ಎಲ್ಲಾ ಮಕ್ಕಳಿಗೂ ಅವಕಾಶ ಸಿಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ ತೀರ್ಮಾನ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದರು.

ತುಮಕೂರು ವಿವಿ ಕ್ಯಾಂಪಸ್‌ ವಿಳಂಬ : ತುಮಕೂರು ವಿವಿ ಕ್ಯಾಂಪಸ್‌ ನಿರ್ಮಾಣ ವಿಳಂಬ ವಾಗುತ್ತಿದೆ. ಈ ಸರ್ಕಾರಕ್ಕೆ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದೇ ಗೊತ್ತಿಲ್ಲ ಎಂದು ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿದ ಟಿ.ಬಿ.ಜಯ ಚಂದ್ರ, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ಯಾಂಪಸ್‌ ಜಾಗದ ಸಮಸ್ಯೆ ಇತ್ಯರ್ಥಗೊಳಿಸಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೂಲ ಸೌಕರ್ಯವೆಂದರೆ ಬರೀ ಕಟ್ಟಡವೆಂದು ಈ ಸರ್ಕಾರ ಭಾವಿಸಿದೆ. ಶಿರಾ ಗೇಟ್‌ ಹಾಗೂ ಶಿರಾದಲ್ಲಿ ಉದ್ಘಾಟನೆಗೊಂಡ ಪಶುಸಂಗೋಪನೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾಚರಣೆ ಮಾಡ್ತಿಲ್ಲ. ಈ ಸರ್ಕಾರಕ್ಕ ಆದ್ಯತೆ ಕಾರ್ಯ ಕ್ರಮಗಳ್ಯಾವುವು ಗೊತ್ತಿಲ್ಲ ಎಂದರು.

ಗಣತಿ ವರದಿ ಆಧಾರದಲ್ಲಿ ಮೀಸಲು ಕಾನೂನು ಬದ್ಧಗೊಳಿಸಿ : ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಸರ್ಕಾರಿ ಅಧಿಕಾರಿಗಳಿಂದಲೇ ತಯಾರಿಸಲ್ಪಟ್ಟ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಗಣತಿ ವರದಿಯನ್ನು ಬಿಡುಗಡೆ ಮಾಡಿ ಅದರ ಆಧಾರದಲ್ಲೇ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲನ್ನು ಕಾನೂನು ಬದ್ಧಗೊಳಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. 3-4 ವಿಭಾಗ ಗಳಲ್ಲಿ ಕೋರ್ಟ್‌ ಸೂಚಿಸಿದ ಮೌಲ್ಯಮಾಪನ ವನ್ನು ಗಣತಿಯಲ್ಲಿ ಮಾಡಲಾಗಿದೆ. ಸುಮಾರು 200 ಕೋಟಿ ಖರ್ಚು ಮಾಡಿ ತಯಾರಿಸಿರುವ ಗಣತಿ ವರದಿಯನ್ನು 2018ರಲ್ಲಿ ಚುನಾ ವಣೆಯ ಕಾರಣಕ್ಕೆ ಬಹಿರಂಗಗೊಳಿಸಲಾಗಲಿಲ್ಲ. ಈಗ ಸರ್ಕಾರದ ಮುಂದೆ ವರದಿ ಇದೆ. ವರದಿ ಆಧರಿಸಿ ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗಗಳಿಗೂ ಕಲ್ಪಿಸಲಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಸುಪ್ರೀಂಕೋರ್ಟ್‌ನಲ್ಲಿರುವ ಹಿಂದು ಳಿದ ವರ್ಗಗಳ ಮೀಸಲು ತಕರಾರನ್ನೇ ಮುಂದು ಮಾಡಿ ರಾಜ್ಯ ಸರ್ಕಾರ ಜಿಪಂ ತಾಪಂ ಚುನಾವಣೆಯನ್ನು ವಿಳಂಬ ಮಾಡಿದ್ದು, ನೇರ ಭ್ರಷ್ಟಾಚಾರಕ್ಕೆ ವೇದಿಕೆ ನಿರ್ಮಿಸಿದೆ. -ಟಿ.ಬಿ.ಜಯಚಂದ್ರ, ಮಾಜಿ ಸಚಿವ

ಟಾಪ್ ನ್ಯೂಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

2-gubbi

Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.