ಸರ್ವರನ್ನೂ ಆಕರ್ಷಿಸುತ್ತಿದೆ ಮಠದ ವಸ್ತು ಪ್ರದರ್ಶನ


Team Udayavani, Feb 28, 2022, 2:49 PM IST

ಸರ್ವರನ್ನೂ ಆಕರ್ಷಿಸುತ್ತಿದೆ ಮಠದ ವಸ್ತು ಪ್ರದರ್ಶನ

ತುಮಕೂರು: ಶ್ರೀಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಸರ್ಕಾರಿ ಇಲಾಖೆಗಳ ಜನೋಪಯೋಗಿ ಮಾಹಿತಿಯನ್ನು ಎಲ್ಲರಿಗೂ ನೀಡುವ ಹಾಗೂಕೈಗಾರಿಕೆಗೆ ಚೈತನ್ಯ ತುಂಬುವ ಮೂಲಕ ನೋಡುಗರ ಕಣ್ಮನ ಸೆಳೆಯುತ್ತಿದೆ.

ಗ್ರಾಮೀಣದ ಶ್ರೇಯೋಭಿವೃದ್ಧಿಗಾಗಿ ಲಿಂ.ಡಾ. ಶ್ರೀಶಿವಕುಮಾರ ಸ್ವಾಮೀಜಿ 1964ರಲ್ಲಿ ಈ ವಿಶೇಷವಸ್ತು ಪ್ರದರ್ಶನ ಆರಂಭಿಸಿದ್ದರು. ಸಣ್ಣ ಪ್ರಮಾಣದಲ್ಲಿಆರಂಭವಾದ ಈ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಪ್ರತಿ ವರ್ಷವೂ ಜಾತ್ರೆಯ ಪ್ರಮುಖಆಕರ್ಷಣೆಯಾಗಿದ್ದು, 18 ಕೇಂದ್ರ ಮತ್ತು ರಾಜ್ಯಸರ್ಕಾರ, 160 ಖಾಸಗಿ ಸಂಘ-ಸಂಸ್ಥೆಗಳು ಸೇರಿದಂತೆ 178 ಮಳಿಗೆಗಳನ್ನು ತೆರೆಯುವಮೂಲಕ ಜನೋಪ ಯೋಗಿ ವಸ್ತು ಪ್ರದರ್ಶನವೆಂಬ ಹೆಗ್ಗಳಿಕೆ ಶ್ರೀ ಮಠದ್ದಾಗಿದೆ.

ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ,ರೇಷ್ಮೆ, ನೀರಾವರಿ, ಶಿಕ್ಷಣ,ಪಶುಪಾಲನೆ, ಮೀನುಗಾರಿಕೆ, ಮಹಿಳೆ ಮತ್ತುಮಕ್ಕಳ ಕಲ್ಯಾಣ, ಸಿದ್ಧಗಂಗಾ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು ಈ ವಸ್ತುಪ್ರದರ್ಶನದಲ್ಲಿ ಮಳಿಗೆ ತೆರೆದು ತಮ್ಮ ಇಲಾಖೆ ಹಾಗೂಸಂಸ್ಥೆಯಲ್ಲಿ ರೈತರು, ಸಾರ್ವಜನಿಕರಿಗೆ ದೊರೆಯುವಸೌಲಭ್ಯಗಳ ಕುರಿತು ಮಾಹಿತಿ ನೀಡುವ ಜನೋಪಯೋಗಿ ಕಾರ್ಯಕ್ರಮವಾಗಿದೆ.

ಜನರ ಮೆಚ್ಚುಗೆ: ಸರ್ಕಾರದ ಇಲಾಖೆಗಳಲ್ಲದೆ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಇಲಾಖೆಗಳುಇನ್ನಿತರೆ ಸಂಸ್ಥೆಗಳು ಮಳಿಗೆ ತೆರೆದು ತಮ್ಮಲ್ಲಿನಯೋಜನೆಗಳು, ಸೌಲಭ್ಯಗಳ ಬಗ್ಗೆ ಅರಿವುಮೂಡಿಸುವ ಕೆಲಸವೂ ಈ ಪುಣ್ಯ ಕ್ಷೇತ್ರದಲ್ಲಿನಡೆಯುತ್ತಿದೆ. ಖಾಸಗಿ ಸಂಘ- ಸಂಸ್ಥೆಗಳು ಈ ವಸ್ತುಪ್ರದರ್ಶನದಲ್ಲಿ ಮಳಿಗೆ ತೆರೆದು ಉತ್ತಮ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೂವುಗಳಲ್ಲಿ ಅರಳಿದ ಶ್ರೀಗಳ ಗದ್ದುಗೆ: ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆಯಿಂದ ತೆರೆದಿರುವ ಮಳಿಗೆಯಲ್ಲಿನಿರ್ಮಾಣ ಮಾಡಲಾಗಿರುವ ಲಿಂ.ಡಾ.ಶ್ರೀಶಿವಕುಮಾರ ಸ್ವಾಮೀಜಿಗದ್ದುಗೆ ಪ್ರಮುಖ ಆಕರ್ಷಣೆಯಾಗಿದೆ. ಗುಲಾಬಿ, ಸೇವಂತಿಸೇರಿದಂತೆ ವಿವಿಧ ರೀತಿಯಹೂವು ಗಳಿಂದ ನಿರ್ಮಾಣಗೊಂಡಿರುವಶ್ರೀಗಳ ಗದ್ದುಗೆ ನೋಡುಗರನ್ನು ಕೈಬೀಸಿಕರೆಯುತ್ತಿದೆ. 500 ಕೆ.ಜಿ. ವಿವಿಧ ಬಗೆಯ ಹೂವುಗಳಿಂದ ಮೂರ್ನಾಲ್ಕು ದಿನಗಳ ಕಾಲ 22 ಮಂದಿಸಿಬ್ಬಂದಿ ಸೇರಿ ನಿರ್ಮಾಣ ಮಾಡಿರುವ ಶ್ರೀಗಳಗದ್ದುಗೆಯ ಕಲಾಕೃತಿ ಇಡೀ ವಸ್ತುಪ್ರದರ್ಶನದ ಕೇಂದ್ರ ಬಿಂದುವಾಗಿದೆ.

ಉಪಯುಕ್ತ ಮಾಹಿತಿ: ಅನ್ನದಾತರಿಗೆ ಅಗತ್ಯ ಉಪಯುಕ್ತ ಮಾಹಿತಿ ಒದಗಿಸುವ ಕೆಲಸವನ್ನು ಕೃಷಿಇಲಾಖೆ ಅಚ್ಚುಕಟ್ಟಾಗಿ ಈ ವಸ್ತು ಪ್ರದರ್ಶನದಲ್ಲಿಮಾಡಿದ್ದು, ಕೃಷಿ ಕ್ಷೇತ್ರದ ಹೊಸ ಸಂಶೋಧನೆಗಳಪರಿಚಯ, ವಿವಿಧ ಕೃಷಿ ಬೆಳೆಗಳ ಪ್ರಾತ್ಯಕ್ಷಿಕೆಗಳಪ್ರತ್ಯಕ್ಷದರ್ಶನದ ಮೂಲಕ ಮಾಹಿತಿ ಒದಗಿಸಿ ಉತ್ತೇಜಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವೂಶ್ರೀಕ್ಷೇತ್ರದಲ್ಲಿ ಸದ್ದುಗದ್ದಲವಿಲ್ಲದ ಈ ಕೃಷಿ ಮತ್ತುಕೈಗಾರಿಕಾ ವಸ್ತುಪ್ರದರ್ಶನದ ಮೂಲಕ ನಡೆದಿದೆ.ಅರಣ್ಯ ಸಂಪತ್ತು, ವನ್ಯಮೃಗಗಳ ಸಂರಕ್ಷಣೆ, ಆಯುರ್ವೇದ ಗಿಡಮೂಲಿಕೆಗಳನ್ನು ಬೆಳೆಸಲುಪ್ರಚೋದನೆ ನೀಡುವುದು, ವನ ಸಂರಕ್ಷಣೆ ಜಾಗೃತಿಕಾರ್ಯಕ್ರಮ, ಕಾಡಿನ ಬೆಂಕಿಯ ಬಗ್ಗೆ ಮುಂಜಾಗ್ರತೆಕುರಿತು ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತಿದೆ.

ವಸ್ತು ಪ್ರದರ್ಶನ ಕಳೆ: ಕೊರೊನಾ ಕರಿನೆರಳಿನ ಛಾಯೆ ಇದೀಗ ನಿಧಾನವಾಗಿ ಪಕ್ಕಕ್ಕೆ ಸರಿಯುತ್ತಿರುವುದರಿಂದ ಈ ಬಾರಿಯ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಕಳೆಗಟ್ಟಿದ್ದು, 2 ವರ್ಷದಿಂದ ಮನೆಯಲ್ಲಿದ್ದ

ಜನತೆ ಈ ಬಾರಿ ಜಾತ್ರೆ ಮತ್ತು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಮನಸ್ಸನ್ನು ಮುದಗೊಳಿಸಿಕೊಳ್ಳುತ್ತಿದ್ದಾರೆ. ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಗೆಬಂದಿರುವ ರೈತರು ಪ್ರತಿದಿನ ಈ ವಸ್ತುಪ್ರದರ್ಶನಕ್ಕೆಭೇಟಿ ನೀಡಿ ತಮಗೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.ವಸ್ತುಪ್ರದರ್ಶನದ ಅಂಗವಾಗಿ ಬಯಲುರಂಗಮಂದಿರದಲ್ಲಿ ನಿತ್ಯ ಸಂಜೆ ನಾಡಿನ ಹೆಸರಾಂತಕಲಾವಿದರು ಸುಗಮ ಸಂಗೀತ, ವಚನಗಾಯನ,ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಘವಾಗಿ ನಡೆಯುತ್ತಿವೆ.

ಈ ವರ್ಷವೂ ಉತ್ತಮ ಪ್ರದರ್ಶನ ನೀಡುವ ಮಳಿಗೆಗಳಿಗೆ ಬಹುಮಾನ ನೀಡಲಾಗುತ್ತದೆ. ಶ್ರೀಗಳುಹಾಗೂ ಜಿಲ್ಲಾಡಳಿತದ ಆದೇಶದ ಮೇರೆಗೆ ಈ ವಸ್ತುಪ್ರದರ್ಶನ ನಡೆಸಲಾಗುತ್ತಿದೆ. ಹೆಚ್ಚು ಜನರು ವಸ್ತುಪ್ರದರ್ಶನ ವೀಕ್ಷಿಸುತ್ತಿದ್ದಾರೆ. ವಾಣಿಜ್ಯೇತರ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ.ವಸ್ತುಪ್ರದರ್ಶನ ಪ್ರಾರಂಭವಾಗಿ 58 ವರ್ಷ ಕಳೆದಿವೆ.ಇದರ ಸವಿನೆನಪಿಗೆ ಸುವರ್ಣ ಮಹೋತ್ಸವ ಮಾಡಬೇಕು ಎಂಬುದು ಶ್ರೀಗಳ ಸಂಕಲ್ಪವಾಗಿತ್ತು.ಅದರಂತೆ ಶ್ರೀಸಿದ್ದಲಿಂಗ ಸ್ವಾಮೀಜಿಮಾರ್ಗದರ್ಶನದಲ್ಲಿ ಹಿರಿಯಶ್ರೀಗಳ ಸಂಕಲ್ಪವನ್ನುನೆರವೇರಿಸಲಾಗಿದೆ. ಮಾರ್ಚ್‌ 4ರಂದುಜನೋಪಯೋಗಿ ವಸ್ತು ಪ್ರದರ್ಶನ ಮುಕ್ತಾಯವಾಗಲಿದೆ.

ವಿವಿಧ ಉತ್ಸವ :

ಫೆ.28ರಂದು ರಾವಣ ವಾಹನ, ಬಿಲ್ವ ವೃಕ್ಷ ವಾಹನ, ನವರಂಗ ಪಾಲಕಿ ಉತ್ಸವ, ಮಾ.1ರಂದುಮಹಾಶಿವರಾತ್ರಿ ಪೂಜಾದಿಗಳು ನೆಡೆಯಲಿದ್ದು,ಅಂದು ಬೆಳ್ಳಿ ರಥೋತ್ಸವ, ಮುತ್ತಿನ ಪಾಲಕಿ ಉತ್ಸವ,ಮಾ.2ರಂದು ರಥೋತ್ಸವ, ರುದ್ರಾಕ್ಷಿಮಂಟಪೋತ್ಸವ, ಮಾ.3ರಂದು ಬೆಳ್ಳಿ ಪಾಲಕಿ ಉತ್ಸವ, ಮಾ.4ರಂದು ತೆಪ್ಪೂತ್ಸವ ಮತ್ತುಪಂಚ ಬ್ರಹ್ಮೋತ್ಸವಗಳು ನಡೆಯಲಿದೆ.

1977ರಲ್ಲಿ ವಸ್ತುಪ್ರದರ್ಶನಕ್ಕೆ 50ಪೈಸೆ ಪ್ರವೇಶ ಶುಲ್ಕನಿಗದಿಪಡಿಸಲಾಗಿತ್ತು. ನಂತರ 1 ರೂ.ನಿಗದಿಪಡಿಸಿದ್ದೆವು. ಆಗ ಶಿವಕುಮಾರಸ್ವಾಮೀಜಿ ನಮ್ಮನ್ನು ತರಾಟೆಗೆತೆಗೆದುಕೊಂಡರು. ಜನರಿಗೆ ಉಚಿತ ಪ್ರವೇಶ ನೀಡುವುದಾಗಿ ಹೇಳಿದ್ದರು.ಅದಾದ ಬಳಿಕ 2 ರೂ. ನಿಗದಿಪಡಿಸಿದ್ದೆವು.ಆಗಲೂ ಆಕ್ಷೇಪ ವ್ಯಕ್ತಪಡಿಸಿದ್ದರು. -ಬಿ. ಗಂಗಾಧರಯ್ಯ, ಕಾರ್ಯದರ್ಶಿ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

ವಸ್ತುಪ್ರದರ್ಶನ ಸರಾಗವಾಗಿನಡೆದುಕೊಂಡು ಬಂದಿದೆ. ಸರ್ಕಾರಿಇಲಾಖೆ ಅಧಿಕಾರಿಗಳು, ಖಾಸಗಿ ಸಂಸ್ಥೆಗಳುಮಳಿಗೆ ತೆರೆಯುವ ಮೂಲಕವಸ್ತುಪ್ರದರ್ಶನಕ್ಕೆ ಕೈಜೋಡಿಸಿದ್ದಾರೆ. -ಕೆಂ.ಬ.ರೇಣುಕಯ್ಯ, ಜಂಟಿಕಾರ್ಯದರ್ಶಿ, ವಸ್ತುಪ್ರದರ್ಶನ

ಕ್ಷೇತ್ರಕ್ಕೆ ಹೆಚ್ಚು ಜನ ಬರುತ್ತಿರುವಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾಕ್ರಮವಾಗಿ ಕೊರೊನಾ ಪರೀಕ್ಷೆ, ಲಸಿಕೆಗೆವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ಕಾಗಿಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆಮಾಡಿದ್ದಾರೆ. ನೀರು, ಶೌಚಾಲಯಕ್ಕೆವ್ಯವಸ್ಥೆ ಮಾಡಲಾಗಿದೆ. -ಎಸ್‌. ಶಿವಕುಮಾರ್‌, ಜಂಟಿ ಕಾರ್ಯದರ್ಶಿ, ವಸ್ತುಪ್ರದರ್ಶನ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.