ಶ್ರೀಕೃಷ್ಣ ಸಂಧಾನ ನಾಟಕ : ಕೃಷ್ಣ, ದುರ್ಯೋಧನರಾಗಿ ಪೊಲೀಸ್ ಅಧಿಕಾರಿಗಳು
Team Udayavani, Aug 1, 2022, 9:59 PM IST
ಕೊರಟಗೆರೆ: ಶ್ರೀ ರಾಮೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಕೊರಟಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ತುಮಕೂರಿನ ಹೆಸರಾಂತ ಬಸವೇಶ್ವರ ಡ್ರಾಮಾ ಸಿನರಿ ಮತ್ತು ಜಗಜಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯರಂಗ ಸಜ್ಜಿಕೆಯಲ್ಲಿ ಕೊರಟಗೆರೆಯ ಶಿವಗಂಗಾ ಚಿತ್ರಮಂದಿರದಲ್ಲಿ ಶ್ರೀ ಹೆಚ್ ಗೋವಿಂದರಾಜು ಗೌಜಗಲ್ಲು ಇವರ ದಕ್ಷ ಸಂಗೀತ ನಿರ್ದೇಶನದಲ್ಲಿ ಕೊರಟಗೆರೆ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ ಜಿ ಪರಮೇಶ್ವರ್ ರವರ ಪ್ರೋತ್ಸಾಹದೊಂದಿಗೆ ಭಾನುವಾರ ಬೆಳಗ್ಗೆ 1030ಕ್ಕೆ ಭಗವದ್ಗೀತೆ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕ ಪ್ರದರ್ಶನ ನಡೆಸಲಾಯಿತು .
ಕುರುಕ್ಷೇತ್ರ ನಾಟಕದಲ್ಲಿ ಅತ್ಯುತ್ತಮ ನಟನೆಗೆ ಹೆಸರಾಂತ ಇಬ್ಬರೂ ಕಲಾವಿದರಾದ ಹಾಗೂ ಕೊರಟಗೆರೆ ಪೊಲೀಸ್ ಠಾಣೆಯ ಎಎಸ್ಐ ಗಳಾದ ಯೋಗೀಶ್ ಮತ್ತು ಮಂಜುನಾಥ್ ರವರು ಕೃಷ್ಣ ಹಾಗೂ ದುರ್ಯೋಧನ ಪಾತ್ರದಲ್ಲಿ ಅಭಿನಯಿಸಿದ್ದರು.
ಈ ಸುಂದರ ಪೌರಾಣಿಕ ನಾಟಕದಲ್ಲಿ ಅತ್ಯುತ್ತಮ ನಟನೆಗಾಗಿ ನಾಟಕ ಪ್ರಿಯರು ಹಾಗೂ ಗಣ್ಯರಿಂದ ಬೆಳ್ಳಿ ಕಿರೀಟವನ್ನು ಶ್ರೀ ಕ್ಷೇತ್ರ ಸಿದ್ದರ ಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಎಲೆರಾಂಪುರ ಕುಂಚಿಟಿಗ ಮಠದ ಪೀಠಾಶಧ್ಯಕ್ಷರ ಸಮ್ಮಖದಲ್ಲಿ ಯೋಗೀಶ್ ಮತ್ತು ಮಂಜುನಾಥ್ ಅವರಿಗೆ ಬೆಳ್ಳಿ ಕಿರೀಟ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೊರಟಗೆರೆ ಪೊಲೀಸ್ ಠಾಣೆಯ ಜನಸ್ನೇಹಿ ಪೋಲಿಸ್ ದಿಗ್ಗಜರು ಎಂದೇ ಜನರ ಪ್ರೀತಿಗೆ ಪಾತ್ರರಾಗಿರುವ ಎಎಸ್ಐ ಗಳಾದ ಯೋಗೀಶ್ ಹಾಗೂ ಮಂಜುನಾಥ್ ರವರಿಗೆ ವಿಶೇಷ ಬೆಳ್ಳಿ ಕಿರೀಟ ಧಾರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಶುಭ ಹಾರೈಸಲು ಸಿದ್ದರಬೆಟ್ಟದ ಶ್ರೀಗಳಾದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ . ಹಾಗೂ ಎಲೆ ರಾಮಪುರ ಮಠದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ. ಮತ್ತು ಸೋಂಪುರ ಪುಟ್ಟೇಶ್ವರ ಸ್ವಾಮಿ ವಿರಕ್ತ ಮಠದ ಶ್ರೀ ಬಸವ ಕಿರಣ ಸ್ವಾಮೀಜಿ . ಗುಬ್ಬಿ ತಾಲೂಕಿನ ಶ್ರೀ ಬೃಂಗೀಶ್ವರ ಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಹಾಗೂ ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರಾದ ಪಿ ಆರ್ ಸುಧಾಕರ್ ಲಾಲ್ ರವರು. ಬಿಜೆಪಿ ಮುಖಂಡರಾದ ಮುನಿಯಪ್ಪ . ಅಧ್ಯಕ್ಷರು ತಾಲೂಕು ರಂಗಭೂಮಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ನ ವೈ ಎನ್ ಪುಟ್ಟಣ್ಣ ರವರು ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ವತಿಯಿಂದ ಬೆಳ್ಳಿ ಕಿರೀಟ ಭಾಜನರಾದ ಯೋಗೀಶ್ ಹಾಗೂ ಮಂಜುನಾಥ್ ರವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಲಾ ಪ್ರೇಮಿಗಳು ಕಲಾ ರಸಿಕರು ಗಣ್ಯಾತಿ ಗಣ್ಯರು ಆಗಮಿಸಿ ಪಾತ್ರಧಾರಿಗಳಿಗೆ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಪ್ರೋತ್ಸಾಹಿಸಿದರು.
ಈ ರಂಗ ಸಂಚಿಕೆಯ ಪಾತ್ರಧಾರಿಗಳಾಗಿ 1ನೇ ಕೃಷ್ಣ ರಾಜು. 2ನೇ ಕೃಷ್ಣ ರಂಗರಾಜು ಕೆ ಆರ್. ಧರ್ಮರಾಯನ ಪಾತ್ರದಲ್ಲಿ ಎ ಎನ್ ಚಂದ್ರಶೇಖರ್. 1ನೇ ಭೀಮ ಓಬಳರಾಜು .2ನೇ ಭೀಮ ಗಡ್ಡದ ರಂಗನಾಥ. ಅರ್ಜುನ ಪಾತ್ರಧಾರಿ ವೆಂಕಟರಾಜು. 1ನೇ ಅಭಿಮನ್ಯು ಬಾಲಾನಾಯ್ಕ .2ನೇ ಅಭಿಮನ್ಯು ಮೂಡಲ ಗಿರಿಯಪ್ಪ. ಸಾಂತ್ಯಕಿ ಸೊಗಡು ಶ್ರೀನಿವಾಸ್ .ವಿದುರ ವಿಜಯ್ ಕುಮಾರ್. ದುಶ್ಯಾಸನ ಪುಟ್ಟರಾಜು .1ನೇ ಕರ್ಣ ರಮೇಶ್. 2ನೇ ಕರ್ಣ ಶಿವಶಂಕರ್ .ಶಕುನಿ ಅಶ್ವತಪ್ಪ ಡಿ.,ಸೈಂಧವ ಸಿದ್ದರಾಜು. ದ್ರೋಣ ಹನುಮಂತರಾಯಪ್ಪ. ಭೀಷ್ಮ ರಮೇಶ್ .ಮಹಿಳಾ ಪಾತ್ರಧಾರಿಗಳಾಗಿ ಕುಮಾರಿ ರಮ್ಯಾ .ಶ್ರೀಮತಿ ಚೈತ್ರ ಅರ್ಜುನ್ .ಶ್ರೀಮತಿ ಜಯಶ್ರೀ ಗೌಡ. ಎಲ್ಲಾ ಪಾತ್ರಧಾರಿಗಳು ಅಭಿನಯಿಸಿ ಉತ್ತಮ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಹಾಗೂ ಕಲಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು .
ಈ ಪ್ರದರ್ಶನವನ್ನು ವೀಕ್ಷಿಸಲು ಕೊರಟಗೆರೆ ತಾಲೂಕಿನ ಜನ ಸಮೂಹ ತುಮಕೂರು ಜಿಲ್ಲೆಯ ಕಲಾ ಪ್ರೇಮಿಗಳು ಕಲಾ ರಸಿಕರು ಆಗಮಿಸಿ ನಾಟಕವನ್ನು ವೀಕ್ಷಿಸಿ ಆನಂದಿಸಿ ಆಶೀರ್ವದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.