ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಕೈ ಜೋಡಿಸಿ
Team Udayavani, Jan 14, 2020, 3:00 AM IST
ತಿಪಟೂರು: ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಯುವಕರು ಕೈಜೋಡಿಸಬೇಕಿದ್ದು, ಯುವಕರಿಂದಲೇ ಬದಲಾವಣೆ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮೋಟಾರು ವಾಹನ ನಿರೀಕ್ಷಕ ಟಿ.ಎಸ್.ಮಂಜುನಾಥ್ ಪ್ರಸಾದ್ ತಿಳಿಸಿದರು. ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಆವರಣದಲ್ಲಿ ಸೋಮವಾರ 31ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದಿಲ್ಲವೆಂಬ ದೃಢ ನಿರ್ಧಾರದ ಪ್ರತಿಜ್ಞೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಮೂಡಿಸಿ: ಇಲಾಖೆಯಿಂದ 31 ವರ್ಷದಿಂದ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ. ಇದು ರಾಷ್ಟ್ರೀಯ ನೀತಿಯಾಗಿದ್ದು, ಈ ನೀತಿಯ ಪ್ರಕಾರ ಯುವಕರಿಂದಲೇ ಬದಲಾವಣೆ ಸಾಧ್ಯ. ಇಲಾಖೆ ಜೊತೆಗೆ ಕೈ ಜೋಡಿಸಿ ಜಾಗೃತಿ ಮೂಡಿಸಿದರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು. ರಸ್ತೆ ಕಾಮಗಾರಿ ನಡೆಯುತ್ತಿರುವಾಗ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಲಿದೆ. ನೈಸರ್ಗಿಕ ತೊಂದರೆಯಾದ ಮಳೆ ಬಂದಾಗ, ಮಂಜು ಕವಿದಾಗ, ಹೊಗೆ ಹೆಚ್ಚಾದಾಗ ವಾಹನ ಅಪಘಾತಗಳು ಸಂಭವಿಸುತ್ತವೆ. ಇದಕ್ಕೆ ವಾಹನ ಸವಾರರು, ಚಾಲಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೆಲವು ಬಾರಿ ನಾವೇ ಅಪಘಾತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.
ಮೊಬೈಲ್ ಬಳಸಬೇಡಿ: ವಾಹನ ಚಲಾಯಿಸುವಾಗ ಬೇರೆಕಡೆ ಗಮನಹರಿಸುವುದು ಸರಿಯಲ್ಲ. ಸರಕು ಸಾಗಾಣೆ ಬೈಕ್‌ನಲ್ಲಿ ಸಾಗಿಸುವುದರಿಂದ ಹಾಗೂ ಮೊಬೈಲ್ ಬಳಕೆಯಿಂದ ಹೆಚ್ಚು ಅಪಘಾತಗಳಾಗುತ್ತವೆ. ಮದ್ಯ ಸೇವಿಸಿ ಚಲಾಯಿಸುವುದು ಕಾನೂನು ಪ್ರಕಾರ ತಪ್ಪು, ವಾಹನದ ಗುಣಮಟ್ಟ ತಿಳಿಯದೆ ಅದರ ವೇಗ ಅರಿಯದೆ ಅತೀ ವೇಗವಾಗಿ ವಾಹನ ಚಲಿಸಿದರೆ ಅಪಘಾತ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು. ಯುವ ಸಮುದಾಯ ಇಲಾಖೆಯೊಂದಿಗೆ ಕೈಜೋಡಿಸಿ ಇದರ ಬಗ್ಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಪ್ರಜ್ಞಾವಂತರಾಗೋಣ: ಸಹಾಯಕ ಸಾರಿಗೆ ಅಧಿಕಾರಿ ಎಚ್. ಹನುಮಂತರಾಯಪ್ಪ ಮಾತನಾಡಿ, ವಾಹನ ಸವಾರರಿಗೆ ಅಪಘಾತ ತಡೆಗಟ್ಟಲು ಹಾಗೂ ವೇಗದ ಮಿತಿ ಅನುಸರಿಸುವ ಬಗ್ಗೆ ಅರಿವು ಅಗತ್ಯವಾಗಿದ್ದು, ಸವಾರರು ವಾಹನ ಚಲಾವಣೆ ಮಾಡುವಾಗ ಯಾವುದೇ ಸಂದರ್ಭದಲ್ಲಿ ಅಪಘಾತವಾದಾಗ ಪ್ರಜ್ಞೆ ತಪ್ಪುವ ಬದಲು ಮೊದಲೇ ಪ್ರಜ್ಞಾವಂತರಾಗಬೇಕು. ಶಾಲಾ, ಕಾಲೇಜು ಬಳಿಯಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡದಂತೆ ಇಲಾಖೆ ಸಿಬ್ಬಂದಿ ನೇಮಕ ಮಾಡಿ ಎಚ್ಚರಿಸಲಾಗುತ್ತಿದೆ.
ಕೆಲವು ವಾಹನಗಳನ್ನು ಅಪ್ರಾಪ್ತರು ಕಾನೂನು ಉಲ್ಲಂಘಿಸಿ ಚಾಲನೆ ಮಾಡಿದರೆ ರಸ್ತೆ ಸುರಕ್ಷತಾ ನಿಯಮದ ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ನಿಮ್ಮ ಸ್ವಾರ್ಥ ಮೋಜಿಗಾಗಿ ಅಮಾಯಕರನ್ನು ಬಲಿ ಪಡೆಯುತ್ತಿದ್ದು, ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು. ಕಚೇರಿ ಅಧೀಕ್ಷಕ ವೀರಗಂಗಾಧರಸ್ವಾಮಿ, ಕಚೇರಿ ಸಹಾಯಕ ಎಚ್.ಎಸ್.ಚೇತನ್, ಸಿಬ್ಬಂದಿ ದಿಲೀಪ್, ಭದ್ರೇಶ್ ಮತ್ತಿತರರಿದ್ದರು.
ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವಾರು ಕಾರ್ಯಕ್ರಮ ರೂಪಿಸಿದೆ. ಇವುಗಳನ್ನು ಪಾಲಿಸದೇ ಅಪಘಾತ ಸಂಖ್ಯೆಯಲ್ಲಿ ರಾಜ್ಯದಲ್ಲಿ ತುಮಕೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ವಿಷಾದನೀಯ. ದಂಡ ವಿಧಿಸುವುದು ಲಾಭಕ್ಕಾಗಿ ಅಲ್ಲ, ಕಾನೂನು ಉಲ್ಲಂಘನೆ ಮಾಡದೇ ಅಪಘಾತಗಳ ಬಗ್ಗೆ ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕೆಂಬ ಉದ್ದೇಶ. ಲೈಸೆನ್ಸ್ ಪಡೆಯುವುದು ಪದವಿ ಪಡೆದಂತೆ ಇದಕ್ಕೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರಬೇಕು.
-ಡಾ.ಸುರೇಶ್, ಸಾರ್ವಜನಿಕ ಆಸ್ಪತ್ರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.