ಫಿನಿಕ್ಸ್‌ನಂತೆ ಗೆದ್ದು ಬರಲಿದೆ ಜೆಡಿಎಸ್
Team Udayavani, Oct 28, 2020, 3:04 PM IST
ಶಿರಾ: ಪ್ರದೇಶಿಕ ಪಕ್ಷ ಜೆಡಿಎಸ್ ರಾಜ್ಯದಲ್ಲಿ ನೆಲೆ ಕಳೆದುಕೊಂಡಿದೆ ಎಂದು ನಮ್ಮ ಪಕ್ಷದಿಂದ ಬೆಳೆದ ರಾಷ್ಟ್ರೀಯ ಪಕ್ಷದ ಕೆಲವು ನಾಯಕರು ಹೇಳುತ್ತಾರೆ, ಆದರೆ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಫಿನಿಕ್ಸ್ ನಂತೆ ಗೆದ್ದು ಬರಲಿದ್ದು ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ಹೇಳಿದರು.
ತಾಲೂಕಿನ ಕಾಮಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮೀಸಲಾತಿ ಕಲ್ಪಿಸಿದ್ದು ನಾನು: ಕೆಳ ಹಂತದ ಸಮುದಾಯಗಳಾದ ವಾಲ್ಮೀಕಿ, ಕುರುಬ, ಮಡಿವಾಳ, ಗೊಲ್ಲ, ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದು ಈ ಎಚ್.ಡಿ.ದೇವೇಗೌಡ. ಮೀಸಲಾತಿ ನೀಡಿದ ಕಾರಣ ಎಲ್ಲಾ ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ಸಮಾಜ ಮುನ್ನೆಲೆಗೆ ಬಂದಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ಜೆಡಿಎಸ್ ಪಕ್ಷ ನಿರ್ನಾಮ ಯಾವತ್ತಿಗೂ ಸಾಧ್ಯವಿಲ್ಲ. ಶಿರಾ ಕ್ಷೇತ್ರದಲ್ಲಿ ಕಾರ್ಯ ಕರ್ತರ ಪರಿಶ್ರಮ ಸತ್ಯನಾರಾಯಣರವರ ಒಳ್ಳೆ ತನ ಅಮ್ಮಾಜಮ್ಮಗೆ ಗೆಲವು ತಂದು ಕೊಡಲಿದೆ ಎಂದರು.
ನೀರಿನ ವಿಷಯದಲ್ಲಿ ರಾಜಕೀಯ ನಡೆಯಲ್ಲ: ತಾವರೆಕೆರೆ ಗ್ರಾಮದಲ್ಲಿ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿ, ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಪ್ರಸ್ತಾವಕ್ಕೆ ನಾನು ಮುಖ್ಯ ಮಂತ್ರಿಯಾಗಿದ್ದಾಗ ಮಂಜೂರಾತಿ ನೀಡಿದೆ. ಶಿರಾ ಭಗೀರಥ ಎಂದು ಹೇಳುವ ಜಯಚಂದ್ರ ಯಾವ ವೇದಿಕೆಯಲ್ಲಿ ಕರಿತಾರೋ ಅಲ್ಲೇ ಚರ್ಚೆ ಮಾಡಲು ಸಿದ್ಧ ನೀರಿನ ರಾಜಕೀಯ ಶಿರಾ ಕ್ಷೇತ್ರದಲ್ಲಿ ನಡೆಯೋಲ್ಲಾ ಎಂದು ಕುಟಕಿದರು.
ಆಮಿಷಗಳಿಗೆ ಬಲಿಯಾಗಬೇಡಿ: ಶಿರಾ ತಾಲೂಕಿನ 17 ಸಾವಿರ ರೈತರ 87 ಕೋಟಿ ಸಾಲಮನ್ನಾ ಮಾಡಿದ್ದೇನೆ. 9 ತಿಂಗಳು ಕಳೆದರು ವೃದ್ಧ ಅಂಗವಿಕಲರಿಗೆ, ವಿಧವೆಯರಿಗೆ ಮಾಸಾಶನ ನೀಡಲು ಸಾಧ್ಯವಿಲ್ಲದ ಬಿಜೆಪಿ ಸರ್ಕಾರ, ಭ್ರಷ್ಟಾಚಾರದಿಂದ ಕೊಡಿಟ್ಟ ಹಣದಿಂದ ಮತದಾರರಲ್ಲಿ ಹಣದ ಆಮಿಷವೊಡ್ಡಿ ಚುನಾವಣೆ ಗೆಲ್ಲಲ್ಲು ವಾಮ ಮಾರ್ಗ ಹಿಡಿದಿದೆ. ಇಂತಹ ಅಮಿಷಗಳಿಗೆ ಬಲಿಯಾಗದೆ ಆಸಕ್ತ ಮಹಿಳೆಗೆ ಕ್ಷೇತ್ರದಲ್ಲಿ ಶಕ್ತಿ ತುಂಬಲು ನಮ್ಮ ಪಕ್ಷದ ಮಹಿಳಾ ಅಭ್ಯರ್ಥಿ ಬೆಂಬಲಿಸಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸುರೇಶ್ ಬಾಬು, ಜಿಪಂ ಸದಸ್ಯ ರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಸಿ.ಆರ್.ಉಮೇಶ್, ಇಮ್ರಾನ್, ನಜ್ಮಾ, ಬೆಳ್ಳಿ ಲೋಕೇಶ್, ಶೀಲಾನಾಯಕ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.