ಉನ್ನತ ವ್ಯಾಸಂಗಕ್ಕೆ ಕೌಶಲ್ಯ ಅಗತ್ಯ
Team Udayavani, Sep 16, 2019, 3:35 PM IST
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.
ತುಮಕೂರು: ಸ್ಪರ್ಧಾತ್ಮಕ ಯುಗದಲ್ಲಿ ಸಾಂಪ್ರದಾಯಿಕ ಶಿಕ್ಷಣ ಉನ್ನತ ವ್ಯಾಸಂಗದ ನೆರವಿಗೆ ಬರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದರಷ್ಟೇ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ನಗರದ ಸಿದ್ಧಗಂಗಾ ಮಠದ ಉದ್ದಾನೇಶ್ವರ ಸಮು ದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ, ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅರ್ಥ ಮಾಡಿಕೊಂಡು ಓದಲು ಕಲಿಸಿ: ಸಾಂಪ್ರದಾ ಯಿಕ ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿದವರು, ಸಿಇಟಿ, ಕಾಮೆಡ್-ಕೆ, ನೀಟ್‌ನಂತಹ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಆಗುವುದಿಲ್ಲ. ಶಿಕ್ಷಣದೊಂದಿಗೆ ಕೌಶಲ್ಯವೂ ಮುಖ್ಯ. ಮಕ್ಕಳು ಅಂಕಗಳಿಗೆ ಓದುವುದು ಬಿಟ್ಟು, ಅರ್ಥ ಮಾಡಿಕೊಂಡು ಓದುವುದನ್ನು ಕಲಿಸ ಬೇಕು. ಶಿಕ್ಷಕರೂ ಮಕ್ಕಳಿಗೆ ಅರ್ಥೈಸುವ ಶಕ್ತಿ ಬೆಳೆಸಿದಾಗ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸ ಬಹುದು ಹೊರತು, ಹೆಚ್ಚು ಅಂಕ ಗಳಿಸುವುದರಿಂದಲ್ಲ ಎಂದು ಕಿವಿಮಾತು ಹೇಳಿದರು.
ಅಂಕ ಪಡೆದುಕೊಳ್ಳುವುದಷ್ಟೇ ಪ್ರತಿಭೆ ಅಲ್ಲ. ಮಕ್ಕಳಿಗಿಂತ ಶಿಕ್ಷಕರು ಹೆಚ್ಚಾಗಿ ಓದಬೇಕಿದೆ. ಏನೂ ತಯಾರಿ ಮಾಡಿಕೊಳ್ಳದೇ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೋರುವ ಗುಣ ಬಿಎಂಶ್ರೀಯವರಲ್ಲಿತ್ತು. ಅಂತಹ ಮನೋಭಾವನೆ ಇಂದಿನ ಶಿಕ್ಷಕರಲ್ಲಿ ಇಲ್ಲ. ವಿದ್ಯಾರ್ಥಿ ಗಳ ಬುದ್ಧಿಮತ್ತೆಗೆ ಅಡ್ಡಿಯಾಗಲಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.ವಿದ್ಯಾರ್ಥಿ ಗಳಲ್ಲಿ ಪ್ರಶ್ನಿಸುವ ಮನೋಭಾವ ದೊಂದಿಗೆ, ಮಕ್ಕಳಲ್ಲಿ ಕನಸು ಕಟ್ಟುವ ಕೆಲಸ ಶಿಕ್ಷಕರು ಮಾಡಬೇಕಿದೆ. ಮಗು ವಿನ ಅಭಿರುಚಿ ಗಮನಿಸಿ ಅದಕ್ಕೆ ತಕ್ಕಂತೆ ಬೆಳೆಸುವು ದರಿಂದ ಮಾತ್ರ ಮಕ್ಕಳು ದೇಶದ ಆಸ್ತಿಯಾಗಿ ರೂಪು ಗೊಳ್ಳುತ್ತಾರೆ ಎಂಬುದನ್ನು ಪೋಷ ಕರು ಮತ್ತು ಶಿಕ್ಷ ಕರು ಅರಿಯುವುದು ಅವಶ್ಯಕ ಎಂದು ಹೇಳಿದರು.
ಒತ್ತಡದಲ್ಲಿ ಮಕ್ಕಳ ನಿರ್ಲಕ್ಷಿಸದಿರಿ: ಮಕ್ಕಳಿಗೆ ಪೋಷ ಕರ ಪ್ರೀತಿ ಮತ್ತು ಪ್ರೋತ್ಸಾಹ ಅವಶ್ಯಕವಾಗಿದ್ದು, ಮಕ್ಕಳೊಂದಿಗೆ ಪೋಷಕರು ಸಮಯ ಕಳೆಯಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು. ಧಾರವಾಹಿ ಮತ್ತು ಕೆಲಸದ ಒತ್ತಡದಲ್ಲಿ ಮಕ್ಕಳನ್ನು ನಿರ್ಲಕ್ಷಿಸಬಾರದು. ಮಕ್ಕಳ ಭಾರವನ್ನೆಲ್ಲ ಶಿಕ್ಷಕರಿಗೆ ವಹಿಸುವುದು ಬಿಟ್ಟು ಪೋಷಕರು ಶಿಕ್ಷಣದ ಕಡೆ ಗಮನಹರಿಸಬೇಕು ಎಂದು ನುಡಿದರು.
ಮಕ್ಕಳು ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಶಿಕ್ಷಕರು ಉತ್ತಮ ನಡವಳಿಕೆ ತೋರಬೇಕು. ಅವರಲ್ಲಿ ಭವಿಷ್ಯ ಕಟ್ಟಿಕೊಳ್ಳುವ ಶಕ್ತಿ ಹಾಗೂ ದಾರಿ ಶಿಕ್ಷಕರು ತೋರಬೇಕು. ಮಕ್ಕಳ ತಪ್ಪುಗಳನ್ನು ಶಿಕ್ಷಕರು ಅವರಿಗೆ ತಿಳಿಸಿ ಪ್ರೀತಿಯಿಂದ ತಿದ್ದಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜೆ.ಬಿ. ಜ್ಯೋತಿಗಣೇಶ್, ಮಾಧುಸ್ವಾಮಿ ಮತ್ತು ಸುರೇಶ್ ಕುಮಾರ್ ಅವರಿಂದ ಶಿಕ್ಷಕರ ಸಮಸ್ಯೆಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿ ಮುಖಂಡ ಪಿ.ಆರ್. ಬಸವರಾಜು ಮಾತ ನಾಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸುವುದು ಉತ್ತಮ ಕೆಲಸ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್. ಹುಚ್ಚಯ್ಯ, ಬಾಪೂಜಿ ಶಿಕ್ಷಣ ಸಂಸ್ಥೆಯ ಎಂ.ಬಸವಯ್ಯ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರ ಸ್ವಾಮಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಮಾಧ್ಯಮಿಕ ಶಿಕ್ಷಕರ ಸಂಘದ ಮುಖಂಡ ರಾದ ಕೆ.ಎಸ್. ಉಮಾಮಹೇಶ್, ಜೆ.ಎಸ್. ರೇಣುಕಾ ನಂದ್, ಟಿ.ಎಂ. ರಾಘವೇಂದ್ರ, ಎಚ್. ಶಿವರಾಮು ಕೆ.ಎಸ್. ಸಿದ್ದಲಿಂಗಪ್ಪ, ದೇವರಾಜಯ್ಯ, ಕೃಷ್ಣಮೂರ್ತಿ, ಮಂಜುನಾಥ್, ಮಾದಾಪುರ ಶಿವಪ್ಪ, ಟಿ. ತ್ರಿವೇಣಿ, ಎಚ್. ಶಿವರಾಮು, ಅಮರಾವತಿ ದ್ರೇಹಾಚಾರ್, ಕೆ. ಪ್ರಕಾಶ್ ಇತರರಿದ್ದರು. ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.