ಚುನಾವಣೆಯಲ್ಲಿ ತಟಸ್ಥನಾಗಿರುವೆ: ಮೌನಮುರಿದ ಸೊಗಡು ಶಿವಣ್ಣ
Team Udayavani, Apr 26, 2018, 6:25 AM IST
ತುಮಕೂರು: ಮಾಜಿ ಸಂಸದ ಜಿ.ಎಸ್.ಬಸವರಾಜು, ಜ್ಯೋತಿಗಣೇಶ್ ರಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ನಾಮಪತ್ರ ಸಲ್ಲಿಕೆ ಕೊನೆ ದಿನದ ವರೆಗೂ ಮೌನವಾಗಿದ್ದ ಶಿವಣ್ಣ ಬುಧವಾರ ತಮ್ಮ ಮೌನ ಮುರಿದು ಪತ್ರಿಕಾಗೋಷ್ಠಿಯಲ್ಲಿ ಮಾತ
ನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜಿಲ್ಲೆಯ ಬಿಜೆಪಿ ಜವಾಬ್ದಾರಿಯನ್ನು ಬಸವರಾಜು ಮತ್ತು ಅವರ ಪುತ್ರ ಜಿಲ್ಲಾಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಕೈಗೆ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಇವರು ಬಿಜೆಪಿ ಸರ್ವನಾಶಕ್ಕೆ ಕಾರಣವಾಗಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಈ ಅಪ್ಪ, ಮಗನೊಂದಿಗೆ ಇರುವವರೆಲ್ಲಾ ಪೇಮೆಂಟ್ ಕಾರ್ಯಕರ್ತರು, ವಿವಿಧ ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದವರು ಎಂದು ಗಂಭೀರ ಆರೋಪ ಮಾಡಿದರು.
2013ರ ಚುನಾವಣೆ ನಂತರ ಕೆಜೆಪಿಯಿಂದ ಬಿಜೆಪಿಗೆ ಬಂದ ಅಪ್ಪ, ಮಕ್ಕಳು ಸಂಪೂರ್ಣವಾಗಿ ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಟೀಕಿಸಿದರು. ತಟಸ್ಥ: ಪಕ್ಷದ ಮಾನ, ಮರ್ಯಾದೆ ಉಳಿಯಬೇಕು ಎಂಬ ಕಾರಣಕ್ಕಾಗಿಯೇ ತಾವು ಈ ಬಾರಿ ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ರಾಜಿ ಸಂಧಾನಕ್ಕಾಗಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಮ್ಮ ಮನೆ ಬಾಗಿಲಿಗೆ ಬರುವುದು ಬೇಡ ಎಂದು ಖಡಕ್ಕಾಗಿ ಹೇಳಿದರು.
ಹಣವಿದ್ದವರಿಗೆ ಟಿಕೆಟ್: ಶಿರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆಯಾಗಿದ್ದ ಬಿ.ಕೆ. ಮಂಜುನಾಥ್ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಗೆ ಅಸಮಾಧಾನಗೊಂಡು ಟಿಕೆಟ್ ನಿರಾಕರಿಸಿದ್ದಾರೆ.
ಅದೇ ರೀತಿ ಮಧುಗಿರಿಯಲ್ಲಿ ಮತ್ಯಾರನ್ನೋ ಗೆಲ್ಲಿಸುವ ಸಲುವಾಗಿ ಬಿಜೆಪಿ ಟಿಕೆಟ್ ನೀಡಿದ್ದ ಮಾಜಿ ಎಂಎಲ್‌ಸಿ ಡಾ.ಎಂ.ಆರ್.
ಹುಲಿನಾಯ್ಕರ್ ಟಿಕೆಟ್ ನಿರಾಕರಿಸಿದ್ದಾರೆ. ಇಷ್ಟೇ ಅಲ್ಲದೆ ಪಾವಗಡದಲ್ಲಿ ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ವಕೀಲ ಕೃಷ್ಣಾನಾಯ್ಕಗೆ ಟಿಕೆಟ್ ನೀಡುವುದು ಬಿಟ್ಟು,ದುಡ್ಡಿರುವವರಿಗೆ ಟಿಕೆಟ್ ನೀಡಿದ್ದಾರೆ ಎಂದು ಆಪಾದಿಸಿದರು.
ಪಕ್ಷ ಬಿಡುವುದಿಲ್ಲ: ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ತಮಗೇ ಟಿಕೆಟ್ ಇಲ್ಲ. ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಡುವುದಿಲ್ಲ. ಟಿಕೆಟ್ ನೀಡಿದ ಪಕ್ಷದ ವರಿಷ್ಠರ ವಿರುದ್ಧ ಬಂಡೇಳದೆ ಟಿಕೆಟ್ ನಿರಾಕರಣೆ ವೇಳೆ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು, ಹಿತ ಚಿಂತಕರ ಭಾವನೆಗಳಿಗೆ ಸದಾ ಬದಟಛಿನಾಗಿರುವೆ ಎಂದು ಹೇಳಿದರು.