ಕೃಷಿಗೆ ಮುನ್ನ ಮಣ್ಣು ಪರೀಕ್ಷೆ ನಡೆಸುವುದು ಅಗತ್ಯ
ಭೂಮಿಯಲ್ಲಿ ಕಾರ್ಬನ್ ಪ್ರಮಾಣ ಕಡಿಮೆಯಾದರೆ ಬೆಳೆ ಕಷ್ಟ • ರೈತರಿಗೆ ಸಹಜ ಬೇಸಾಯ ಶಾಲೆ ವಿಜ್ಞಾನಿ ಡಾ.ಮಂಜುನಾಥ್ ಸಲಹೆ
Team Udayavani, Jul 29, 2019, 12:31 PM IST
ತುಮಕೂರು: ಭೂಮಿಯಲ್ಲಿ ಕಾರ್ಬನ್ ಪ್ರಮಾಣ ಕಡಿಮೆಯಾದರೆ ಎಷ್ಟು ನೀರು ಹಾಯಿಸಿದರೂ ವ್ಯರ್ಥವಾಗುತ್ತದೆ. ಕೃಷಿ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಲೇ ಬೇಕು ಎಂದು ಸಹಜ ಬೇಸಾಯ ಶಾಲೆ ವಿಜ್ಞಾನಿ ಡಾ.ಎಚ್.ಮಂಜುನಾಥ್ ತಿಳಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಭವನದಲ್ಲಿ ಭಾನುವಾರ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿ, ತುಮಕೂರು ವಿಜ್ಞಾನ ಕೇಂದ್ರ, ಸಹಜ ಬೇಸಾಯ ಶಾಲೆ, ಜೀವನಾಡಿ ಯುವ ಬಳಗ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲೆಯ ಜಲ ಬಿಕ್ಕಟ್ಟು, ಕಾರಣಗಳು, ಪರಿಹಾರಗಳು ಕುರಿತ ಜಿಲ್ಲಾ ಜಲಾಸಕ್ತರ ಜಲದಜಾಡು ಸಮಾವೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಗ್ರಾಮೀಣ ಸಮುದಾಯದ ಕೃಷಿಭೂಮಿ ಮತ್ತು ರೈತ ಜಲಾನಯನ ಪ್ರದೇಶದ ಅವಿಭಾಜ್ಯ ಅಂಗ ವಿಷಯ ಕುರಿತು ಮಾತನಾಡಿದರು.
ಮಣ್ಣಿನಲ್ಲಿರುವ ಕಾರ್ಬನ್ ಪ್ರಮಾಣದ ಬಗ್ಗೆ ವಿಜ್ಞಾನಿಗಳು ವಿವಿಯಲ್ಲಿ ಕುಳಿತು ಚರ್ಚೆ ನಡೆಸುತ್ತಾರೆ. ಕಾರ್ಬನ್ ಪ್ರಮಾಣ ಹೆಚ್ಚಿಸುವ ಕುರಿತು ರೈತರು ಮನಸ್ಸು ಮಾಡುತ್ತಿಲ್ಲ. ಸರ್ಕಾರದ ಪ್ರಕಾರ ಕೃಷಿ ಭೂಮಿಯಲ್ಲಿ 0.75 ಕಾರ್ಬನ್ ಡೈ ಆಕ್ಸೆ ೖಡ್ ಪ್ರಮಾಣ ಇರಬೇಕು. ಜಿಲ್ಲೆಯ ಕೃಷಿ ಭೂಮಿಲ್ಲಿ ಕೇವಲ 0.3 ಇದೆ. ಹೀಗಾಗಿ ಭೂಮಿಯಲ್ಲಿ ನೀರಿನ ಪ್ರಮಾಣ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ವ್ಯರ್ಥ ನೀರು ಮರುಬಳಕೆ ಮಾಡಿ: ರೈತರು ಹೇಮಾವತಿ, ಎತ್ತಿನಹೊಳೆ ಹಾಗೂ ಭದ್ರಾ ಯೋಜನೆಯ ನೀರು ಆಧಾರಿತ ಕೃಷಿಗೆ ಅಂಟಿಕೊಳ್ಳಬಾರದು. ಮನೆಯಿಂದ ಬರುವ ವ್ಯರ್ಥ ನೀರು ಮರುಬಳಕೆ ಮಾಡಿಕೊಂಡು ಕೃಷಿ ಮಾಡಬೇಕು. ಒಂದು ದಿನಕ್ಕೆ ಒಬ್ಬ ಮನುಷ್ಯನಿಗೆ 125 ಲೀಟರ್ ನೀರು ಬೇಕು. ಈ ನೀರಿನಲ್ಲಿ ಸಬ್ ಸಾಯಿಲ್ ಇರ್ರಿಗೇಷನ್ ಮಾಡಿ ಒಂದು ಮರಕ್ಕೆ 2.5 ಲೀಟರ್ ನೀರು ಕೊಡಬಹುದು ಎಂದು ತಿಳಿಸಿದರು.
ಕಡಿಮೆ ನೀರಿನಲ್ಲಿ ಬೆಳೆ ಬೆಳೆಯಿರಿ: ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ವಿಶೇಷ ನಿರ್ದೇಶಕ ಡಾ.ವಿ.ಎಸ್.ಪ್ರಕಾಶ್ ಮಾತನಾಡಿ, ತುಮಕೂರಲ್ಲಿ 13 ಎಂಎಂ ಮಳೆ ಬೀಳುತ್ತದೆ. ವರ್ಷ ದಲ್ಲಿ 15 ಬಾರಿ ಇಷ್ಟು ಮಳೆ ಆಗಬಹುದು. ಶೇ.70ರಷ್ಟು ಜನರು 1.5 ಎಕರೆಭೂಮಿ ಹೊಂದಿದ್ದಾರೆ. 1 ಎಕರೆ ಭತ್ತ ಬೆಳೆಯುವುದನ್ನು ಕಡಿಮೆ ಮಾಡಿದರೆ 2 ಸಾವಿರ ಜನಸಂಖ್ಯೆ ಇರುವ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಬಹುದು. ಸರ್ಕಾರ ಗ್ರಾಮೀಣ ಪ್ರದೇಶದ ಹಿಡುವಳಿದಾರರಿಗೆ ಜಾಗೃತಿ ಮೂಡಿಸಲು ಹಾಗೂ ತಲುಪಿಸುವಲ್ಲಿ ವೈಫಲ್ಯ ಕಾಣುತ್ತಿದೆ. ಭತ್ತ ಬೆಳೆಯುವ ಬದಲಾಗಿ ಕಡಿಮೆ ನೀರು ಪಡೆಯುವ ಬೆಳೆ ಬೆಳೆಯಲು ರೈತರ ಮನವೊಲಿಸಬೇಕು ಎಂದು ಸಲಹೆ ನೀಡಿದರು. ಪರಸರವಾದಿ ಸಿ.ಯತಿರಾಜ್ ಮಾತನಾಡಿ, ಸರ್ಕಾರ ಘನ ತ್ಯಾಜ್ಯ ವಿಲೇವಾರಿ ಮಾಡಲು ಭೂಮಿಗೆ ಹಣ ಸುರಿಯುತ್ತಿದೆ. ನಿರ್ವಹಣೆಗೆ ಹೆಚ್ಚು ಭೂಮಿ ಬೇಕು. ರೈತರು ಭೂಮಿ ನೀಡುತ್ತಿಲ್ಲ. ಹೀಗಾಗಿ ಕೃಷಿ ಭೂಮಿಗೆ ಘನತ್ಯಾಜ್ಯ ಬಳಕೆ ಮಾಡಲು ಯೋಜನೆ ರೂಪಿಸಬೇಕು. ತ್ಯಾಜ್ಯ ಸಂಸ್ಕರಣೆ, ಘಟಕ ವಿಶ್ಲೇಷಣೆ ಮಾಡಿ ಕೃಷಿಗೆ ಬಳಸಬಹುದು ಎಂದರು. ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ರಾಮಕೃಷ್ಣ, ರಾಮಚಂದ್ರ, ಸಿ.ಕೆ.ಮಹೇಂದ್ರ, ಡಾ.ವಿ.ಎಸ್.ಪ್ರಕಾಶ್, ಎಸ್.ಜಿ.ಶ್ರೀ ಕಂಠೇಶ್ವರ ಸ್ವಾಮಿ, ಮಲ್ಲಿಕಾರ್ಜುನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkur: ಪತ್ರಕರ್ತರಿಗೆ ಉಚಿತ ಆರೋಗ್ಯ ವಿಮೆ ಕೊಡಿ: ಸರಕಾರಕ್ಕೆ ಒತ್ತಾಯ
Tumakuru: ಎಲ್ಲ ಪತ್ರಕರ್ತರಿಗೆ ಆರೋಗ್ಯ ವಿಮೆ, ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್: ಸಿಎಂ
Koratagere: ಸಂಕ್ರಾಂತಿ ಹಬ್ಬಕ್ಕೆ ಹಸುಗಳಿಗೆ ಪೂಜೆ
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.