ತಳ ಸಮುದಾಯಕ್ಕೆ ಬಜೆಟ್‌ನಲ್ಲಿ ಅನ್ಯಾಯ
Team Udayavani, Mar 15, 2021, 2:06 PM IST
ತುಮಕೂರು: ರಾಜ್ಯದಲ್ಲಿ ಆರ್ಥಿಕ, ಸಾಮಾಜಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಶೇ. 65ರಷ್ಟಿರುವ ಎಲ್ಲ ತಳಸಮುದಾಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಕೇವಲ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ತಾರತಮ್ಯ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮರಳೂರು ಕೆಎನ್‌ಆರ್ ಅಭಿಮಾನಿಗಳ ಬಳಗ ಮತ್ತು 28ನೇ ವಾರ್ಡ್‌ನನಾಗರಿಕರ ವತಿಯಿಂದ ಮರಳೂರಿನಲ್ಲಿ ನೂತನ ಮೇಯರ್ ಬಿ.ಜಿ.ಕೃಷ್ಣಪ್ಪ ಹಾಗೂಉಪಮೇಯರ್ ನಾಜೀಮಾಭಿ ಇಸ್ಮಾಯಿಲ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಬಜೆಟ್‌ನಲ್ಲಿ ಹಿಂದುಳಿದಿರುವ ತಳ ಸಮುದಾಯಗಳಿಗೆ ಭಾರೀ ಅನ್ಯಾಯವಾಗಿದೆ. ಇಂದು ರಾಜ್ಯದಲ್ಲಿರುವ ಶೇ.13.4ರಷ್ಟುಒಕ್ಕಲಿಗರಿಗೆ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂ. ಬಿಡುಗಡೆ ಮಾಡಿದರೆ,ಶೇ.21ರಷ್ಟಿರುವ ಲಿಂಗಾಯಿತರಿಗೂ 500ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಎಲ್ಲತಳ ಸಮುದಾಯಗಳೂ ಸೇರಿ 500 ಕೋಟಿರೂ.ಇದು ಹಿಂದುಳಿದ ಜನಾಂಗಕೆ ಅನ್ಯಾಯ ವಾಗಿದ್ದು. ಈ ಬಗ್ಗೆ ಶಾಸಕರುವಿಧಾನಸಭೆ ಅಧಿವೇಶನದಲ್ಲಿ ತಳಸಮುದಾಯಗಳ ಅನುದಾನ ಹೆಚ್ಚಿಸಲು ಧ್ವನಿ ಎತ್ತಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮರಳೂರು ಗ್ರಾಮದ ಜನರ ಬಹುದಿನಗಳಬೇಡಿಕೆಯಾದ ಮರಳೂರು ಕೆರೆಗೆ ಇನ್ನು 6 ತಿಂಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನೀರುಹರಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿವೆ.ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೆರೆಗಳುತುಂಬಿಸಿಕೊಳ್ಳಬಹುದು ಎಂದು ಯಾರಿಗೂಯೋಚನೆ ಇರಲಿಲ್ಲ, ಈ ಹಿಂದೆ ಇದ್ದವರು ಬರೀ ಕಟ್ಟಡ, ರಸ್ತೆಗಳು ನಿರ್ಮಾಣ ಮಾಡಲುಹೊರಟಿದ್ದರು. ನಾವು ಗೆದ್ದ ಮೇಲೆ ಸಾಕಷ್ಟು ಕ್ರಿಯಾ ಯೋಜನೆ ಬದಲಾವಣೆ ಮಾಡಿದ ಪರಿಣಾಮ ಇಂದು ಅಮಾನಿಕೆರೆಗೆ ನೀರು ಹರಿದಿದೆ ಎಂದರು.
ನೀರು ಹರಿಸಲು ಸಿದ್ಧತೆ: ಗಂಗಸಂದ್ರ ಕೆರೆಗೆ ಗ್ರಾವಿಟಿ ಮೂಲಕ ನೀರು ಹರಿಸಲು ಸಿದ್ಧತೆನಡೆದಿದ್ದು, ಟೆಂಡರ್ ಕೂಡ ಆಗಿದೆ. ಇನ್ನು 7 ತಿಂಗಳೊಳಗೆ ಈ ಎರಡೂ ಕೆರೆಗಳಿಗೆ ನೀರುಹರಿಯಲಿದ್ದು, ಈ ಎರಡೂ ಕೆರೆಗಳುತುಂಬಿದರೆ ತುಮಕೂರು ನಗರದ ನಾಗರಿಕರಿಗೆಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ, ಪಾಲಿಕೆ ಆಡಳಿತವನ್ನುಸರಳೀಕರಣಗೊಳಿಸಿ ಸಾರ್ವಜನಿಕರ ಕೆಲಸಸುಗಮವಾಗಿ ನಡೆಯಲು ಮತ್ತುಸಾರ್ವಜನಿಕರ ಯಾವುದೇ ಅರ್ಜಿಗಳುತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಎಲ್ಲರೀತಿಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆಪಾಲಿಕೆಯ 35 ವಾರ್ಡುಗಳ ಸದಸ್ಯರೂಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಪಾಲಿಕೆಯಲ್ಲಿ ಅನುದಾನದ ಕೊರತೆ: 28ನೇವಾರ್ಡಿನ ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, ಪ್ರಗತಿ ಬಡಾವಣೆ ಮತ್ತು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆಗಳಅಭಿವೃದ್ಧಿ, ಚರಂಡಿಗಳ ನಿರ್ಮಾಣವಾಗಿಲ್ಲ, 8ಕಿ.ಮೀ.ರಸ್ತೆ ಮೆಡ್ಲಿಂಗ್ ರಸ್ತೆಯನ್ನಾಗಿಯಾದರೂಮಾಡಿದರೆ ಆ ಭಾಗದ ಜನತೆಗೆಅನುಕೂಲವಾಗಲಿದೆ. ಪಾಲಿಕೆಯಲ್ಲಿಅನುದಾನದ ಕೊರತೆಯಿದ್ದು, ಶಾಸಕರ ವಿಶೇಷಅನುದಾನದಲ್ಲಿ ಹಣ ನೀಡಿದರೆ ರಸ್ತೆ ಮತ್ತುಚರಂಡಿ ನಿರ್ಮಾಣ ಮಾಡಿ ಸಾರ್ವಜನಿಕರಿಗೆಅನುಕೂಲ ಕಲ್ಪಿಸಲು ಸಹಕಾರಿಯಾಗುತ್ತದೆ ಎಂದರು.
17ನೇ ವಾರ್ಡಿನ ಸದಸ್ಯ ಮಂಜುನಾಥ್, ಮರಳೂರು ಮಾಜಿ ಛೇರ್ಮೇನ್ ಭೀಮಯ್ಯ, ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಗಳಿಗೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಧನಲಕ್ಷ್ಮೀ, ಪ್ರತಾಪ್ ಮದಕರಿ, ರಾಮಾಂಜಿನೇಯ ಇದ್ದರು.
ನಗರದ ಅಭಿವೃದ್ಧಿಗೆ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂಶ್ರಮಿಸಬೇಕಿದೆ. ಇಂದು ಸ್ಮಾರ್ಟ್‌ಸಿಟಿ ಯೋಜನೆ ಬಂದಿದೆ. ಮತ್ತೂಂದುಮಹಾತ್ಮಗಾಂಧಿ ನಗರ ವಿಕಾಸಅನುದಾನವೂ ಬಂದಿದೆ. ಇವೆಲ್ಲವೂಸದುಪಯೋಗ ಪಡಿಸಿ ಕೊಂಡರೆತುಮಕೂರು ನಗರ ಮಾದರಿ ನಗರವಾಗಿ ಅಭಿವೃದ್ಧಿಗೊಳ್ಳುತ್ತದೆ. -●ಜಿ.ಬಿ.ಜ್ಯೋತಿಗಣೇಶ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.