ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಮುಷ್ಕರ


Team Udayavani, Mar 16, 2021, 2:20 PM IST

ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಮುಷ್ಕರ

ತುಮಕೂರು: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀ ಕರಣ ವಿರೋಧಿಸಿ ಬ್ಯಾಂಕ್‌ ಯೂನಿ ನ್‌ಗಳ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ರಾಷ್ಟ್ರೀಕೃತ ಬ್ಯಾಂಕ್‌ ಗಳ ನೌಕರರು ಮುಷ್ಕರ ಆರಂಭಿಸಿದ್ದಾರೆ. ದೇಶಾದ್ಯಂತ ಸೋಮವಾರ ಮತ್ತು ಮಂಗಳವಾರ ನಡೆಸಲಾಗುತ್ತಿರುವ ಬ್ಯಾಂಕ್‌ ಗಳ ಮುಷ್ಕರ ಬೆಂಬಲಿಸಿ ತುಮಕೂರು ನಗರದ ಚರ್ಚ್‌ ಸರ್ಕಲ್‌ನಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಕೇಂದ್ರ ಕಚೇರಿ ಮುಂಭಾಗ ಜಮಾಯಿಸಿರುವ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಘೋಷ ಣೆಗಳನ್ನು ಕೂಗಿ, ಕೂಡಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಗಾಮಿ ಕ್ರಮಗಳಿಗೆ ವಿರೋಧ: ಸುಧಾ ರಣೆಯ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೇಂದ್ರ ಸರ್ಕಾರ ಮುಂಗಡ ಪತ್ರದಲ್ಲಿ ಘೋಷಿಸಿದೆ. ಐಡಿಬಿಐ ಬ್ಯಾಂಕ್‌ ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ ಗಳ ಖಾಸಗೀಕರಣ, ಆಸ್ತಿ ವಸೂಲಿ ಕಂಪೆನಿಯ ಸ್ಥಾಪನೆ, ಜೀವ ವಿಮಾ ನಿಗಮದಲ್ಲಿ ಬಂಡ ವಾಳ ಹಿಂತೆಗೆತ, ಒಂದು ಸಾಮಾನ್ಯ ವಿಮಾ ಕಂಪೆನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಶೇ.74 ರವರೆಗೆ ಅವಕಾಶ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಬಂಡವಾಳ ಹಿಂತೆಗೆತದಲ್ಲಿ ಹುರುಪು ಹಾಗೂ ಅವುಗಳ ಮಾರಾಟ ಇವೆಲ್ಲವೂ ಪ್ರತಿಗಾಮಿ ಕ್ರಮಗಳಾಗಿರುವು ದರಿಂದ ಅವುಗಳನ್ನು ವಿರೋಧಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಮುಷ್ಕರ ನಿರತ ಬ್ಯಾಂಕ್‌ ನೌಕರರು ಹೇಳಿದರು.

ಖಾಸಗೀಕರಣ ಮಾಡುವ ಕ್ರಮ ಸರಿಯಲ್ಲ: ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದಿಂದ ದೇಶದ ಜನರ ಉಳಿತಾಯದ ಲೂಟಿಗೆ ಅವ ಕಾಶ ನೀಡಿದಂತಾಗುತ್ತದೆ. ಠೇವಣಿದಾರರ ಹಿತಾ ಸಕ್ತಿಗೆ ಧಕ್ಕೆಯಾಗುತ್ತದೆ. ಉದ್ಯೋಗಾ ವಕಾಶಗಳು ಹಾಗೂ ಮೀಸಲಾತಿಯಂತಹ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗುವುದರ ಜತೆಗೆ ಶಾಖೆಗಳ ಮುಚ್ಚುವಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಬ್ಯಾಂಕಿಂಗ್‌ ಸೇವೆ ಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀ ಕರಣ ಮಾಡುವ ಕ್ರಮ ಸರಿಯಲ್ಲ. ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. 1969ರಲ್ಲಿ 14 ಮತ್ತು 1980ರಲ್ಲಿ 6 ವಾಣಿಜ್ಯ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಲಾಗಿತ್ತು. ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ ಬ್ಯಾಂಕ್‌ ಗಳ ಮುಳುಗುವಿಕೆ ಸರ್ವೆ ಸಾಮಾನ್ಯ ವಾಗಿತ್ತು. 1947 ರಿಂದ 1969ರ ಅವಧಿಯಲ್ಲಿ ಒಟ್ಟು 550 ಖಾಸಗಿ ಬ್ಯಾಂಕ್‌ಗಳು ಮುಳುಗಿ ದವು. ಈ ಬ್ಯಾಂಕ್‌ಗಳ ಠೇವಣಿದಾರರು ತಮ್ಮ ಉಳಿತಾಯವನ್ನು ಕಳೆದು ಕೊಂಡರು ಎಂದು ಮುಷ್ಕರ ನಿರತರು ಹೇಳಿದರು.

ಯುಎಫ್ಬಿಯುನ ಸಂಚಾಲಕ ವಾದಿ ರಾಜ್‌ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಬ್ಯಾಂಕ್‌ ನೌಕರರು ಎರಡು ದಿನ ಮುಷ್ಕರ ನಡೆಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದೇಶದ ಆರ್ಥಿಕ ಪ್ರಗತಿಯೂ ಆಗಿದೆ ಎಂದರು. ದೇಶದಲ್ಲಿ ಇದುವರೆಗೂ 550ಕ್ಕೂ ಹೆಚ್ಚು ಖಾಸಗಿ ಬ್ಯಾಂಕ್‌ಗಳು ದಿವಾಳಿಯಾಗಿವೆ. ಆದರೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿ ಯಾಗಿರುವ ನಿದರ್ಶನಗಳಿಲ್ಲ. 2009- 10 ರಲ್ಲಿ 77 ಸಾವಿರ ಕೋಟಿ ಲಾಭ ಮತ್ತು 2019-20ರಲ್ಲಿ 1.77 ಲಕ್ಷ ಕೋಟಿ ರೂ. ಲಾಭ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಬಂದಿ ದೆ. ಇದು ರಾಷ್ಟ್ರೀಕೃತ ಬ್ಯಾಂಕ್‌ಗಳು ಲಾಭ ದಲ್ಲಿವೆ ಎಂಬುದನ್ನು ಸೂಚಿಸುತ್ತದೆ ಎಂದರು.

ವರ್ಷಪೂರ್ತಿ ತೊಂದರೆ: ಗ್ರಾಹಕರಿಗೆ 2 ದಿನ ಮಾತ್ರ ತಾತ್ಕಾಲಿಕವಾಗಿ ತೊಂದರೆಯಾಗಬ ಹುದು. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾಸ ಗೀಕರಣವಾದರೆ ವರ್ಷಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದ ರಿಂದ ನಮ್ಮ ಹೋರಾಟಕ್ಕೆ ಗ್ರಾಹಕರು ಸಹಕರಿ ಸಬೇಕು ಎಂದು ಮನವಿ ಮಾಡಿದರು. ಇದುವರೆಗೂ ಕೇಂದ್ರ ಸರ್ಕಾದ ಎಲ್ಲ ಸ್ಕೀಂಗಳನ್ನು ಕಾರ್ಯಗತಗೊಳಿಸಿರುವುದು ರಾಷ್ಟ್ರೀಕೃತ ಬ್ಯಾಂಕ್‌ಗಳು. ಯಾವುದೇ ಖಾಸಗಿ ಬ್ಯಾಂಕ್‌ಗಳಲ್ಲ ಎಂದು ಹೇಳಿದರು. ಯುಎಫ್ಬಿಯುನ ಸಂಚಾಲಕ ವಾದಿ ರಾಜ್‌, ವಿವಿಧ ಬ್ಯಾಂಕ್‌ ನೌಕರರಾದ ನಟ ರಾಜು, ಸರ್ವಮಂಗಳ, ಮಹೇ ಶ್ವರಪ್ಪ, ಶಂಕರಪ್ಪ, ರಾಮಕೃಷ್ಣೇಗೌಡ, ವೆಂಕಟೇಶ ಮೂರ್ತಿ, ರಾಮಕೃಷ್ಣ, ಜಾನಕೀರಾಂಬಾಬು, ವೆಂಕಟೇಶ್‌, ಮಹಲಿಂಗಯ್ಯ, ರಮೇಶ್‌ ಇದ್ದರು.

ಟಾಪ್ ನ್ಯೂಸ್

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Train

Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ

Covid test

HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ

Kalaburagi-BJP-Protest

Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

1-vit-22

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

1-nity

Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್‌

HDK

Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್‌ ಎದುರಾಳಿ

Train

Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.