ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರಮ ಅವಶ್ಯ: ತಬಸುಮ್ ಜಹೇರಾ
Team Udayavani, Jul 4, 2017, 9:39 AM IST
ತುಮಕೂರು: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರಂತರ ಪರಿಶ್ರಮ ಪಡುವುದರ ಜೊತೆಗೆ ಸಾಧಿಸುವ ಛಲವಿದ್ದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ತುಮಕೂರು ಉಪವಿಭಾಗಾಧಿಕಾರಿ ತಬಸುಮ್ ಜಹೇರಾ ತಿಳಿಸಿದರು.
ಸೋಮವಾರ ನವೋದಯ ಐಎಎಸ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು
ಸಾಕಷ್ಟು ಮಾರ್ಗಗಳಿವೆ. ಅವುಗಳ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸೂಕ್ತ ಮಾರ್ಗದರ್ಶನ ಇದ್ದಾಗ ಯಶಸ್ಸು ದೊರೆಯುತ್ತದೆ. ಅದಕ್ಕೆ ವಿದ್ಯಾರ್ಥಿಗಳ ಶ್ರದ್ಧೆಯೂ ಮುಖ್ಯ ಎನ್ನುವುದನ್ನು ನೆನೆಪಿಟ್ಟು ಕೊಳ್ಳಬೇಕೆಂದರು.
ನಮ್ಮ ನ್ಯೂನತೆ ಬಗ್ಗೆ ಅರಿವಿದ್ದಾಗ ಮಾತ್ರ ಯಶಸ್ಸು ಪಡೆಯಲು ಏನು ಮಾಡಬೇಕೆಂಬುಂದು ನಮಗೆ ಗೊತ್ತಾಗುತ್ತದೆ.
ಮೊದಲು ನಮ್ಮಲ್ಲಿರುವ ನ್ಯೂನತೆ ಬಗ್ಗೆ ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ತಾಳ್ಮೆಬೇಕು ಎಂದು ಅಭಿಪ್ರಾಯಪಟ್ಟರು.
ನವೋದಯ ಐಎಎಸ್ ಅಕಾಡೆಮಿ ಉಲ್ಲಾಯಪ್ಪ, ದೆಹಲಿಗೆ ಹೋದರೆ ಐಎಎಸ್ ಆಗಬಹುದು ಎನ್ನುವುದು ಸುಳ್ಳು. ದೆಹಲಿಗೆ ಹೋದವರೆಲ್ಲಾ ಐಎಎಸ್ ಆಗಲು ಸಾಧ್ಯವಿಲ್ಲ, ಮನೆಯಲ್ಲಿಯೇ ನಿರಂತರ ಅಭ್ಯಾಸ ಮಾಡುವ ಮೂಲಕ ಯಶಸ್ಸುಗಳಿಸಬಹುದಾಗಿದೆ. ಅದಕ್ಕೆ ಸೂಕ್ತ ಮಾರ್ಗದರ್ಶನ ಬೇಕಿದ್ದು ಗ್ರಾಮೀಣ ಪ್ರದೇಶದ ಪ್ರತಿಭಾವಂತರಿಗೂ ನವೋದಯ ಐಎಎಸ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಸಹಾಯ ಮಾಡಲಿದೆ ಎಂದು
ತಿಳಿಸಿದರು. ಪತ್ರಕರ್ತ ಹಬೀಬ್ ಉರ್ ರೆಹಮಾನ್, ಜನಸ್ನೇಹಿ ಅಧಿಕಾರಿಗಳನ್ನು ಜನರು ಎಂದಿಗೂ ಮರೆಯುವುದಿಲ್ಲ,
ಜನರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಪರೀಕ್ಷೆ ಮುಂದೆ ಇದೆ ಎಂದು ಸುಮ್ಮನೆ ಕಾಲವ್ಯರ್ಥ ಮಾಡುವ ಬದಲಾಗಿ ಅಭ್ಯಾಸ ಮಾಡುವುದರಿಂದ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು. ಅನ್ವರ್ ಪಾಷಾ, ರಂಗಧಾಮಯ್ಯ, ನವೋದಯ ಐಎಎಸ್ ಅಕಾಡೆಮಿ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.