ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನೀತಿಗೆ ವಿದ್ಯಾರ್ಥಿಗಳ ಖಂಡನೆ
Team Udayavani, Sep 2, 2017, 4:24 PM IST
ತಿಪಟೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನೀತಿ-ನಿಯಮಗಳಿಂದ ಅನ್ಯಾಯವಾಗಿದೆ ಎಂದು ನಗರದ ಕಲ್ಪತರು ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಅವ್ಯವಸ್ಥೆಗೆ ಆಕ್ರೋಶ: ಈ ವೇಳೆ ತುಮಕೂರು ಎಐಡಿಎಸ್‌ಒ ಜಂಟಿ ಕಾರ್ಯದರ್ಶಿ ರಾಜೇಶ್ವರಿ ಮಾತನಾಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಿಗದಿತ ಸಮಯಕ್ಕೆ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡುತ್ತಿಲ್ಲ. ಅಧ್ಯಾಯ ವಿಷಯಗಳು ನಿಗದಿತ ಸಮಯಕ್ಕೆ ಪೂರ್ಣವಾಗಿ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿದರು.
ಕ್ರಿಟಿಕಲ್ ಇಯರ್ ಬ್ಯಾಕ್ ರದ್ದು ಮಾಡಿ: 2010ರ ಸ್ಕೀಮ್‌ನ ವಿದ್ಯಾರ್ಥಿಗಳಿಗೆ ಈ ಒಂದು ವರ್ಷದ ಮಟ್ಟಿಗೆ ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್ ಇಯರ್ ಬ್ಯಾಕ್ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಸಿಬಿಎಸ್‌ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಪ್ರಕಟಿಸಬೇಕು.
ಪರೀಕ್ಷೆ ಮುಗಿದು 5-6 ತಿಂಗಳು ಕಳೆದು ಮತ್ತೂಂದು ಪರೀಕ್ಷೆ ನಡೆಯುವ ವೇಳೆಗೆ ವಿಟಿಯು ಮಧ್ಯರಾತ್ರಿಯ ಸಮಯದಲ್ಲಿ ಫಲಿತಾಂಶ ಬಿಡುಗಡೆ ಮಾಡುತ್ತದೆ. ಇದರಿಂದ ಫಲಿತಾಂಶ ತಿಳಿಯದೆ ಆತಂಕದಿಂದ ರಾಜ್ಯದಲ್ಲಿ 4 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮರು ಅಂಕ ಪರಿಶೀಲನೆಗೆ ಕಟ್ಟಿದ ಹಣವನ್ನು ವಾಪಸ್ ನೀಡದೆ ವಿದ್ಯಾರ್ಥಿಗಳ ಹಣವನ್ನು ದೋಚುತ್ತಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ಮಾರಕ: ಎಐಡಿಎಸ್‌ಒ ಜಿಲ್ಲಾ ಸಲಹೆಗಾರ ಸ್ವಾಮಿ ಮಾತನಾಡಿ, ವಿಟಿಯು ನೀತಿಗಳಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಸಮಯದ ಅಭಾವದಿಂದ ತಮ್ಮ ಅಧ್ಯಾಯಗಳು ನಿಗದಿತ ಸಮಯಕ್ಕೆ ಮುಗಿಸಲಾಗದಂತಹ ಹತಾಶ ಸ್ಥಿತಿಯಲ್ಲಿ ಪ್ರಾಧ್ಯಾಪಕರು ಒದ್ದಾಡುತ್ತಿದ್ದಾರೆ ಎಂದರು. ಒಂದೇ ದಿನಕ್ಕೆ ಎರಡು ಪರೀಕ್ಷೆಗಳನ್ನು ಮಾಡಿ ಒಟ್ಟು 50 ದಿನಗಳಲ್ಲಿ 16-20 ವಿಷಯಗಳ ಪರೀಕ್ಷೆ ನಡೆಯುತ್ತದೆ.
ಇದಕ್ಕೆ ವಿದ್ಯಾರ್ಥಿಗಳು ಮಾನಸಿಕವಾಗಿ ಹಿಂಸೆಯಾಗುತ್ತಿರುವುದಲ್ಲದೇ ಶಿಕ್ಷಣ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಲಭಿಸುತ್ತಿಲ್ಲ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗಿದ್ದು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಟಿಯು ವಿದ್ಯಾರ್ಥಿಗಳಾದ ಸುಮಂತ್, ಚಂದನ್, ಸ್ವರೂಪ್, ಶ್ರೇಯಸ್, ಶಶಿಕಾಂತ್, ಟಿ.ಎಂ.ಶರತ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.