“ಮಕ್ಕಳ ನಡೆ ಅರಣ್ಯದ ಕಡೆ’ ಕಾರ್ಯಕ್ರಮ
Team Udayavani, Mar 27, 2021, 2:51 PM IST
ತಿಪಟೂರು: ತಾಲೂಕಿನ ನೊಣವಿನಕೆರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಮಕ್ಕಳ ನಡೆ ಅರಣ್ಯದ ಕಡೆ ಎಂಬ ವಿನೂತನ ಪರಿಸರ ಪಯಣ ಕಾರ್ಯಕ್ರಮ ನಡೆಯಿತು.
ಶಾಲೆಯ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಾಗೂ ನೊಣವಿನಕೆರೆಲಯನ್ಸ್ ಕ್ಲಬ್‌ನ ಸಹಕಾರದೊಂದಿಗೆಸುಮಾರು 60 ವಿದ್ಯಾರ್ಥಿಗಳು, ಶಿಕ್ಷಕವೃಂದ, ಪರಿಸರ ಪ್ರೇಮಿ, ಪರಿಸರ ಚಿಂತಕಗುಂಗರಮಳೆ ಮುರಳೀಧರ್‌ರ ಮಾರ್ಗದರ್ಶನದಲ್ಲಿ ನಡೆಯಿತು. ಮಕ್ಕಳನ್ನು ಸಮೀಪದ ರಂಗನಹಳ್ಳಿಯ ಅರಣ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅರಣ್ಯದ ದಾರಿಯಲ್ಲಿ ಸಿಗುವ ಸಸ್ಯ, ಗಿಡ, ಮರ ಮತ್ತು ವಿವಿಧ ಸಸ್ಯ ಪ್ರಬೇಧ ಮತ್ತು ಔಷಧೀಯ ಸಸ್ಯಗಳಪ್ರಪಂಚವನ್ನು ಮಕ್ಕಳ ಮುಂದೆ ತೆರೆದಿಡಲಾಯಿತು.
ವಿಶೇಷವಾಗಿ ಸಿಳ್ಳೆ ಹೊಡೆಯುವ ಕಾಯಿ, ನಿಸರ್ಗದ ಪಾನೀಯ ಗುಲಗಂಜಿ ಸಸ್ಯದ ಎಲೆ ತಿನ್ನುತ್ತಾ ವಿವಿಧ ಎಲೆ,ಕಾಯಿ, ಗಿಡಗಳ ಉಪಯೋಗಗಳನ್ನುತಿಳಿದುಕೊಂಡರು. ಜೀವ ವೈವಿಧ್ಯತೆಗಳಕುತೂಹಲ ತಿಳಿದುಕೊಂಡು ಪ್ರಕೃತಿಮಡಿಲಲ್ಲಿ ಕಾರ್ಯಕ್ರಮ ಆಚರಿಸಿದ್ದುವಿಶೇಷವಾಗಿತ್ತು.
ಈ ವೇಳೆ ಶಾಲೆಯ ಹಿರಿಯ ಸಹ ಶಿಕ್ಷಕಿ ಕೆ.ಎಂ.ರುಕ್ಮಿಣಿ,ಇಕೋ ಕ್ಲಬ್ ಸಂಚಾಲಕ, ಎನ್‌ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸ.ಚ. ಜಗದೀಶ್, ಐ.ಟಿ. ಸಂಪನ್ಮೂಲ ಶಿಕ್ಷಕ ಯಾದವ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.