ವಿದ್ಯಾರ್ಥಿಗಳೇ ಪಾಶ್ಚಿಮಾತ್ಯ ಭಾಷಾ ಸಂಸ್ಕೃತಿಗೆ ಮಾರುಹೋಗದಿರಿ


Team Udayavani, Mar 2, 2020, 3:00 AM IST

vidyarthuigale

ತಿಪಟೂರು: ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಭಾಷಾ ಸಂಸ್ಕೃತಿಗೆ ಮಾರುಹೋಗದೆ, ನಮ್ಮ ಭಾಷಾ ಸಂಸ್ಕೃತಿಯಲ್ಲಿರುವ ಅಗಾಧ ಸಂಸ್ಕಾರಯುತ ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕೆಂದು ತುಮಕೂರಿನ ಸಿದ್ದಗಂಗಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಕೆ.ಎಸ್‌. ಮಲೈಕಾ ಸುಲ್ತಾನ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಮತ್ತು ಉರ್ದು ಸಾತ್ಯ ಪೋರಂ, ಐಕ್ಯೂಎಸಿ ವತಿುಂದ ಆಯೋಜಿಸಿದ್ದ ಹಿಂದಿ ಮತ್ತು ಉರ್ದು ಭಾಷಾ ದಿವಸ್‌ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮ ಯಾವುದೇ ಇರಲಿ ಮೊದಲು ಮನುಷ್ಯನಾಗಬೇಕು. ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು, ಶಾಂತಿ ಪ್ರತಿಪಾದಿಸುವುದು ಮುಖ್ಯವಾಗಿದೆ. ಹಿಂದಿ ರಾಷ್ಟ್ರ ಭಾಷೆಯಾದರೆ, ಉರ್ದು ಮಾತೃಭಾಷೆಯಾಗಿದೆ.

ಇವುಗಳ ಜತೆಗೆ ಬೇರೆ ಭಾಷೆ ಪ್ರೀತಿಸುವ ಮೂಲಕ ಅಳವಡಿಸಿಕೊಳ್ಳಬೇಕು. ಒಂದೊಂದು ಭಾಷೆಗಳಲ್ಲಿಯೂ ಭಿನ್ನ ಸಂಸ್ಕೃತಿ ಕಾಣುತ್ತೇವೆ. ಪ್ರವಾದಿ ಮಹಮದರ ಕಾಲದಲ್ಲಿ ಸ್ತ್ರೀಯರಿಗೆ ಹೆಚ್ಚು ಸಮಾನತೆ ಮತ್ತು ಗೌರವ ಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ತ್ರೀಯರಿಗೆ ಗೌರವಾದರಗಳು ಕಡಿಮೆಯಾಗುತ್ತಿರುವುದು ವಿಷಾದನೀಯ.

ಶಿವಶರಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕನಕದಾಸ, ಪುರಂದರದಾಸರಂತೆ ನಮ್ಮ ಸಂಸ್ಕೃತಿಯಲ್ಲಿ ಸಂತಶಿಶುನಾಳ ಷರೀಫ‌, ಕಬೀರಂತಹ ಮಹನೀಯರು ಅವರದ್ದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿರುವ ಪ್ರತಿಯೊಬ್ಬರು ಒಂದೆ ಆಗಿದ್ದು ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊದಸ್ತಗೀರ್‌ ಮಾತನಾಡಿ, ಭಾರತ ಭವ್ಯ ಸಂಸ್ಕೃತಿ ಮತ್ತು ಹಲವು ಪ್ರಾಂತ್ಯ ಹೊಂದಿದ್ದು, ವಿವಿಧ ಭಾಷೆ ಮಾತನಾಡುವವರಿದ್ದಾರೆ. ಮಾತೃಭಾಷೆಗೆ ಗೌರವ ಕೊಡುವ ಮೂಲಕ ಎಲ್ಲರಿಗೂ ಪರಿಚಯಿಸುವ ಕೆಲಸವಾದಾಗ ಮಾತೃಭಾಷೆ ಗಟ್ಟಿಯಾಗಲು ಸಾಧ್ಯ. ಇತರೆ ಭಾಷೆ ಕಲಿಯುವುದರಿಂದ ನಮ್ಮ ವ್ಯಕ್ತಿತ್ವ ಕಸನಗೊಳ್ಳುವುದಲ್ಲದೆ ಬಹುಮುಖೀ ಜ್ಞಾನ ಲಭ್ಯವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಎಂ.ರಾಜಣ್ಣ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಆಯೋಜಿಸಿದ್ದು, ಭಾಷೆ, ಧರ್ಮಗಳಲ್ಲಿ ಮೇಲು-ಕೀಳು ಬೇಡ. ಆಧುನಿಕ ಜೀವನಕ್ಕೆ ಎಲ್ಲಾ ಭಾಷೆಗಳು ಅವಶ್ಯಕವಿದ್ದು, ವಿದ್ಯಾರ್ಥಿಗಳು ಮಾತೃಭಾಷೆಗೆ ಸೀಮಿತವಾಗದೆ ಇತರೆ ಭಾಷೆ ಗೌರವಿಸುವ ಮೂಲಕ ಕಲಿಯುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ವಿಭಾಗದ ಮುಖ್ಯಸ್ಥೆ ಡಾ. ಕೆ.ಎಸ್‌.ಸುಧಾ, ಐಕ್ಯೂಎಸಿ ಸಂಯೋಜಕ ಪ್ರೊ.ಎಸ್‌.ಆರ್‌.ನಾಗಭೂಷಣ್‌, ಪ್ರೊ.ಸೈಯದ್‌ ಇಬ್ರಾಂ, ಡಾ.ಎನ್‌. ನರಸಿಂಹರಾಜು, ಪ್ರೊ.ಎನ್‌.ಮನೋಜ್‌ಕುಮಾರ್‌, ಪ್ರೊ.ಸವಿತಾ ಚಿಕ್ಕಣ್ಣನವರ್‌, ಡಾ.ಎಂ.ಜಿ.ಜ್ಯೋತಿ, ಪ್ರೊ.ಎಸ್‌.ಪಿ.ಯಶೋಧ, ಡಾ.ಜಿ. ಉಮೇಶ್‌, ಪ್ರೊ.ಜಗದೇವಪ್ಪ, ಡಾ. ಎಲ್‌.ಎಂ.ವೆಂಕಟೇಶ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.