ಸುಧಾಕರಲಾಲ್ ಸಚಿವ ಆಗೋದು ಖಚಿತ : JDS ಬೃಹತ್ ಸಮಾವೇಶ

ಮತ ಹಾಕಿದ್ರೆ ನಿಮ್ಮ ಮನೆ ಬಾಗಿಲಿಗೆ ಲಾಲ್ ಬರ್ತಾರೆ...

Team Udayavani, Apr 10, 2023, 8:14 PM IST

1-erqrq

ಕೊರಟಗೆರೆ: ”ಪರಮೇಶ್ವರ್‌ಗೆ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳೋಕೆ ಅಧಿಕಾರ ಬೇಕಿದೆ. ಸ್ನೇಹಜೀವಿ ಸುಧಾಕರಲಾಲ್‌ಗೆ ಜನಸೇವೆ ಮಾಡಲು ಅಧಿಕಾರ ಬೇಕಿದೆ. ಕೊರಟಗೆರೆ ಜನರೇ ಕಾಂಗ್ರೆಸ್-ಬಿಜೆಪಿಗೆ ಮತ ಹಾಕಿದರೆ ನಿಮ್ಮ ಕೆಲಸಕ್ಕೆ ಬೆಂಗಳೂರು ಮತ್ತು ತುಮಕೂರು ನಗರಕ್ಕೆ ಹೋಗ್ಬೇಕು. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ರೆ ನಿಮ್ಮ ಮನೆ ಬಾಗಿಲಿಗೆ ಲಾಲ್ ಬರ್ತಾರೆ ” ಎಂದು ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಡಿಮಡು ರಂಗಶಾಮಯ್ಯ ತಿಳಿಸಿದರು.

ಕೊರಟಗೆರೆ ಪಟ್ಟಣದ ಜಾಮೀಯಾ ಸಮುದಾಯ ಭವನದ ಆವರಣದಲ್ಲಿ ಜಾತ್ಯತೀತ ಜನತಾದಳ ಪಕ್ಷದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದ ವರ್ಗಗಳ ಜೆಡಿಎಸ್ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ ಹಿಂದುಳಿದ ವರ್ಗದ ಪರವಾಗಿ ಹೋರಾಟ ಮಾಡುವ ನಾಯಕ ನಮ್ಮ ದೇವೇಗೌಡರು ಮಾತ್ರ. ಪಂಚರತ್ನ ಯೋಜನೆಯು ಮಾಜಿ ಸಿಎಂ ಕುಮಾರಸ್ವಾಮಿಯ ಕರ್ನಾಟಕ ಸಮಗ್ರ ಅಭಿವೃದ್ದಿಯ ಕನಸು. ಕೊರಟಗೆರೆ ಕ್ಷೇತ್ರದ ಲಾಲ್ ೨೫ ವರ್ಷದ ಜನಸೇವೆಯೇ ಅವರ ಗೆಲುವಿಗೆ ಆಧಾರಸ್ತಂಭ. ಆರೋಗ್ಯ ಸೇವೆ ಪಡೆದಿರುವ 35 ಸಾವಿರ ಜನರೇ ಲಾಲ್‌ರನ್ನು ಮತ್ತೆ ಶಾಸಕರನ್ನಾಗಿ ಮಾಡ್ತಾರೇ. ಕುಮಾರಸ್ವಾಮಿ ಸಿಎಂ ಮತ್ತು ಸುಧಾಕರಲಾಲ್ ಸಚಿವ ಆಗೋದು ಖಚಿತ ಎಂದರು.

ಹಿಂದುಳಿದ ವರ್ಗದ ರಾಜ್ಯ ಕಾರ್ಯಧ್ಯಕ್ಷ ಮಹಾಲಿಂಗಪ್ಪ.ಹೆಚ್.ಕೆ ಮಾತನಾಡಿ ಕೊರಟಗೆರೆ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ. 2023ಕ್ಕೆ ಕೊರಟಗೆರೆ ಕ್ಷೇತ್ರದಿಂದ ಸುಧಾಕರಲಾಲ್ ಶಾಸಕ ಆಗೋದು ಖಚಿತ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಿದ್ದು ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ದೇವೇಗೌಡ.ಕಾಂಗ್ರೆಸ್ ಪಕ್ಷ ಜಾತಿ, ನೀತಿ ಮತ್ತು ಓಣಿಯನ್ನೇ ವಿಂಗಡಣೆ ಮಾಡಿ ರಾಜಕೀಯ ಮಾಡುತ್ತಿದೆ. ಕೊರಟಗೆರೆ ಕ್ಷೇತ್ರದ ಮತದಾರರು ಮನೆಯ ಮಗನಿಗೆ ಮತ ನೀಡಬೇಕಿದೆ ಎಂದು ಮನವಿ ಮಾಡಿದರು.

ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಹಿಂದುಳಿದ ಸಮಾಜಕ್ಕೆ ರಾಜಕೀಯ ಮೀಸಲಾತಿ ನೀಡಿದ್ದು ದೇವೇಗೌಡರು. ಧ್ವನಿ ಇಲ್ಲದ ಸಮಾಜಕ್ಕೆ ಶಕ್ತಿಯಾಗಿ ಆಸರೇ ನೀಡಿದವರು ನಮ್ಮ ಕುಮಾರಸ್ವಾಮಿ. ನನಗೇ ಅಧಿಕಾರ ಬೇಕಿರೋದು ಕುಮಾರಸ್ವಾಮಿ ಸಿಎಂ ಮಾಡಲು ಮತ್ತು ಕೊರಟಗೆರೆ ಕ್ಷೇತ್ರದ ಜನರ ಸೇವೆಗಾಗಿ ಮಾತ್ರ. ನನ್ನ ಬಳಿ ಹಣವಿಲ್ಲ ಅಂತಾರೇ ಆದರೇ ಜನರೇ ನನಗೇ ಹಣ ನೀಡಿ ಆರ್ಶಿವಾದ ಮಾಡಿದ್ದಾರೇ. ಜನರ ಋಣವನ್ನು ತೀರಿಸಲು ನನಗೇ ನಿಮ್ಮೇಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಕೊರಟಗೆರೆ ಕ್ಷೇತ್ರದಲ್ಲಿ 25 ವರ್ಷ ಸೋತ್ರು-ಗೆದ್ರು ಜನರ ಜೊತೆಗಿದ್ದು ಜನಸೇವೆ ಮಾಡಿದ್ದೀನಿ. ಮುಂದಿನ 30 ದಿನ ಮಾತ್ರ ನೀವು ನನ್ನ ಜೊತೆ ಇರಿ, ನಾನು 5 ವರ್ಷ ಮನೆ ಮಗನಾಗಿ ನಿಮ್ಮ ಸೇವೆ ಮಾಡ್ತೀನಿ.2023 ರ ವಿಧಾನಸಭಾ ಚುನಾವಣೆಗೆ ನಾನು ಎ.15 ರ 10 ಗಂಟೆಗೆ ನಾಮಪತ್ರ ಸಲ್ಲಿಸ್ತೀನಿ. ತಾವೆಲ್ಲರೂ ಆಗಮಿಸಿ ನನಗೆ ಬೆಂಬಲ ಮತ್ತು ಸಹಕಾರ ನೀಡಬೇಕಿದೆ ಎಂದರು.

400 ಕಾರ್ಯಕರ್ತರ ಸೇರ್ಪಡೆ..

ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ ಮಾಜಿ ತಾಪಂ ಸದಸ್ಯರಾದ ಸುಮರಾಜು, ಹನುಮಂತರಾಯಪ್ಪ, ಅಶ್ವತ್ಥನಾರಾಯಣ, ಮಾಜಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಹಾಲಿ ಗ್ರಾಪಂ ಸದಸ್ಯರು, ಮಾಜಿ ಸದಸ್ಯರು ಸೇರಿದಂತೆ 400ಕ್ಕೂ ಅಧಿಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರೇ ಹಿಂದುಳಿದ ವರ್ಗದ ಎಷ್ಟು ಜನರಿಗೆ ಟಿಕೆಟ್ ನೀಡಿದ್ದಿರಿ. ನಮ್ಮ ಜೆಡಿಎಸ್ ಪಕ್ಷ ಬಲಿಜ ಮತ್ತು ಕುರುಬ ಸಮಾಜಕ್ಕೆ ನೀಡಿದೆ. ಕುರುಬ ಸಮಾಜ ಪರಮೇಶ್ವರ್‌ಗೆ ಮತ ಹಾಕ್ತಾರೆ ಎಂಬ ನಂಬಿಕೆಯೇ ಸುಳ್ಳು. ಕೊರಟಗೆರೆ ಕ್ಷೇತ್ರದ ಮನೆಯ ಮಗನಾಗಿ ದುಡಿಯುವ ಸುಧಾಕರಲಾಲ್‌ಗೆ ಕುರುಬ ಸಮಾಜದ ಶೇ.75 ರಷ್ಟು ಜನ ಬೆಂಬಲ ನೀಡ್ತಾರೆ.
ಆರ್.ಸಿ.ಅಂಜಿನಪ್ಪ. ಜೆಡಿಎಸ್ ಜಿಲ್ಲಾಧ್ಯಕ್ಷ, ತುಮಕೂರು

ಸಮಾವೇಶದಲ್ಲಿ ಹಿಂದುಳಿದ ವರ್ಗದ ರಾಜ್ಯ ಕಾರ್ಯಾಧ್ಯಕ್ಷ ಪಾತಯ್ಯ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಕುಸುಮಾ, ಕೊರಟಗೆರೆ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಉಪಾಧ್ಯಕ್ಷ ಕಾಮರಾಜು, ವಕ್ತಾರ ಲಕ್ಷ್ಮಣ್, ಕಾರ್ಯದರ್ಶಿ ಲಕ್ಷ್ಮಣ್, ಹಿಂದುಳಿದ ವರ್ಗದ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಮಂಜುನಾಥ, ವೀರಕ್ಯಾತರಾಯ, ಹನುಮಂತರಾಜು, ಪ್ರಕಾಶ್, ಸತೀಶ್, ದೀಪೋ, ಶ್ರೀನಿವಾಸ್, ದೇವರಾಜು, ಸಾಕರಾಜು, ನಾಗೇಂದ್ರ, ನಟರಾಜು, ಪ್ರಕಾಶ್, ರಮೇಶ್, ಕೌಶಿಕ್, ಅಮರ, ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.