ಸರ್ವೆ ಶುಲ್ಕ: ರೈತರ ಜೇಬಿಗೆ ಸರ್ಕಾರ ಕತ್ತರಿ
Team Udayavani, Feb 8, 2022, 1:43 PM IST
ಮಧುಗಿರಿ: ಸದಾ ಒಂದಿಲ್ಲೊಂದು ಬೆಲೆ ಏರಿಕೆಮಾಡುವ ಸರ್ಕಾರ ಈಗ ರೈತರ ಜೇಬಿಗೆ ಕತ್ತರಿಹಾಕುವ ಮೂಲಕ ಸರ್ವೆ ಶುಲ್ಕವನ್ನು 35 ರೂ.ಗಳಿಂದಗರಿಷ್ಠ 5 ಸಾವಿರಕ್ಕೆ ಮಿತಿಗೊಳಿಸಿ, ಅನ್ನದಾತರ ಆರ್ಥಿಕತೆಯನ್ನು ಕಸಿಯುತ್ತಿದೆ.
ರಾಜ್ಯಾದ್ಯಂತ ಲಕ್ಷಾಂತರ ರೈತರು ತಮ್ಮ ಜಮೀನುಗಳು ಹದ್ದುಬಸ್ತಿಗೆ ಶುಲ್ಕಕಟ್ಟಿ ಕಾಯುತ್ತಿವೆ. ಹಲವಾರು ಕಡೆ ತಾತ ಮುತ್ತಾತನ ಹೆಸರಿಂದ ಭೂಮಿಮಕ್ಕಳ ಹೆಸರಿಗೆ ಬದಲಾಗಿಲ್ಲ. ಇಂತಹ ಸಮಯದಲ್ಲಿಭಾಗ ಮಾಡಿಕೊಳ್ಳಲು ಸರ್ವೆ ಅಗತ್ಯ. ಇಂತಹಮುಖ್ಯವಾದ ಕಾರ್ಯಕ್ಕೆ 2 ಎಕರೆಗೆ 35 ರೂ.ಗಳಿಂದ350 ರೂ.ಗಳವರೆಗೂ ಇದ್ದ ಶುಲ್ಕವನ್ನು ಸರ್ಕಾರಏಕಾಏಕಿ 2 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೂ ಹೆಚ್ಚಿಸಿ, ರೈತರ ಬದುಕಿನ ಮೇಲೆ ಬರೆ ಎಳೆದಿದೆ.
ಪರಿಷ್ಕೃತ ನೂತನ ಶುಲ್ಕ ಜಾರಿ: ಫೆ.1ರಿಂದಲೇ ಈಪರಿಷ್ಕೃತ ನೂತನ ಶುಲ್ಕ ಜಾರಿಯಾಗಿದ್ದು, ಮುಂದೆರೈತರು ಸರ್ವೆ ಕಾರ್ಯಕ್ಕೆ ನೂತನ ದರದಂತೆಯೇಶುಲ್ಕ ಪಾವತಿಸಬೇಕಿದೆ. ಹಿಂದೆ 2 ಎಕರೆಯವರೆಗೂ35 ರೂ.ಗಳನ್ನು ಮಾತ್ರ ಪಾವತಿಸಬೇಕಿದ್ದು, ಬಾಜುದಾರರಿಗೆ ನೀಡುವ ನೋಟಿಸ್ ಶುಲ್ಕವಾಗಿ 25ರೂ.ಪಾಯಿ ಮಾತ್ರ ಪಡೆಯುತ್ತಿದ್ದರು.
ಗ್ರಾಮೀಣ ರೈತರಿಗೆ ಬರೆ : 11 ಇ ಅರ್ಜಿ ಮತ್ತುಅಲಿನೇಷನ್ ಪೂರ್ವ 11 ಇ ನಕ್ಷೆಗೆ ಮತ್ತು ತತ್ಕಾಲ್‌ಪೋಡಿಗೆ 1200 ಇದ್ದು, ನಗರ ಪ್ರದೇಶದ ರೈತರಿಗೆ 2ಸಾವಿರ ರೂ. ನಿಗದಿಗೊಳಿಸಿದ್ದಾರೆ. ಆದರೆ, ಗ್ರಾಮೀಣಭಾಗದಲ್ಲಿನ ಎಕರೆ ಭೂಮಿಯ ಬೆಲೆಗೂ ನಗರಪ್ರದೇಶದ ಭೂಮಿಯ ಬೆಲೆಗೂ ಸಾವಿರ ಪಟ್ಟು ವ್ಯತ್ಯಾಸವಿದೆ. ನಗರ ಪ್ರದೇಶದ ಭೂಮಿಗೆ ಕೋಟಿ ಗಟ್ಟಲೆ ಬೆಲೆ ಸಿಗುತ್ತದೆ. ಅಂತವರಿಗೆ 2 ಎಕರೆಯವರೆಗೂ 2500 ಸಾವಿರದಿಂದ 5 ಸಾವಿರ ರೂ.ವರೆಗೂ ಶುಲ್ಕ ವಿಧಿಸಿದೆ. ಆದರೆ, ಗ್ರಾಮೀಣ ಭಾಗದ 1 ಎಕರೆಭೂಮಿಗೆ 3ರಿಂದ ಕನಿಷ್ಠ 5 ಲಕ್ಷ ರೂ., ಬೆಲೆಯಿದ್ದು, 2 ಸಾವಿರದಿಂದ 4 ಸಾವಿರ ರೂ.ವರೆಗೂ ಶುಲ್ಕವಿಧಿಸಿರುವುದು ಯಾವ ನ್ಯಾಯ ಎಂಬುದು ರೈತ ಮುಖಂಡರ ಪ್ರಶ್ನೆಯಾಗಿದೆ.
ಸರ್ವೆ ಶುಲ್ಕ ಕಡಿತಗೊಳಿಸಲು ಆಗ್ರಹ: ನಗರ ಪ್ರದೇಶದ ಭೂಮಿಯು ಹೆಚ್ಚಾಗಿ ಭೂ ಪರಿವರ್ತನೆಯಾಗಿ ನಿವೇಶನದ ರೂಪ ತಾಳುತ್ತಿದ್ದು, ಕೋಟಿಗಟ್ಟಲೆಆದಾಯ ಬರುತ್ತದೆ. ಆದರೆ, ಗ್ರಾಮೀಣ ಭಾಗದಭೂಮಿಯು ಹಲವೆಡೆ ಬಂಜರು ಭೂಮಿಯಾಗಿದ್ದು, ರೈತರ ಬೇಸಾಯದೊಂದಿಗೆ ಜೂಜಾಟ ಆಡುವ ಈಮಳೆಯಿಂದಲೂ ನಷ್ಟ ಹೊಂದುವ ಗ್ರಾಮೀಣರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪರದಾಡು ವಂತಹ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಸರ್ಕಾರ ಏಕಾಏಕಿ ಶೇ.1500 ಪಟ್ಟು ಶುಲ್ಕವನ್ನುಏರಿಸಿರುವುದು ಅನ್ಯಾಯ ಎಂದು ರೈತರುಅಸಮಧಾನ ವ್ಯಕ್ತಪಡಿಸಿದ್ದು, ಈ ನೂತನ ಪರಿಷ್ಕೃತದರವನ್ನು ಮತ್ತೂಮ್ಮೆ ಪರಿಶೀಲಿಸಿ ಸರ್ವೆ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಜಕ್ಕೂ ಈ ಶುಲ್ಕ ಏರಿಕೆಸರಿಯಲ್ಲ. ಇದು ಜನವಿರೋಧಿ ನೀತಿಯಾಗಿದೆ. ರೈತರ ಉಳಿವಿಗೆ ಕುಮಾರಸ್ವಾಮಿ ಸರ್ಕಾರದಲ್ಲಿಸಾಲಮನ್ನಾ ಆಗಿತ್ತು. ಆದರೆ, ಈಗಿನಸರ್ಕಾರ ಸದಾ ರೈತರ ಜೇಬಿಗೆ ಕತ್ತರಿ ಹಾಕುತ್ತಿರುವುದು ದುರಂತ. -ಎಂ.ವಿ.ವೀರಭದ್ರಯ್ಯ, ಶಾಸಕ
ಸರ್ಕಾರ ಸದಾ ಕಾಲ ರೈತರನ್ನು ಕಡೆಗಣಿಸುತ್ತಿದೆ. ಸರ್ವೆ ಕಾರ್ಯಕ್ಕೆ 35 ರೂ.ಗಳಿಂದ ಗರಿಷ್ಠ5 ಸಾವಿರ ರೂ.ವರೆಗೂ ಶುಲ್ಕ ಹೆಚ್ಚಿಸಿರುವುದು ರೈತ ವಿರೋಧಿ ನೀತಿ. ಈ ಶುಲ್ಕದ ಮಿತಿಯನ್ನು ಯಥಾಸ್ಥಿತಿಯಲ್ಲಿ ಪಡೆಯಬೇಕು. ಸಾಧ್ಯವಾದರೆ ಕನಿಷ್ಠ 500 ರೂ.ಗೆನಿಗದಿಗೊಳಿಸಬೇಕು. ಇಲ್ಲವಾದರೆ ರೈತರು ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. -ಆನಂದ ಪಟೇಲ್, ಜಿಲ್ಲಾ ರೈತಸಂಘದ ಅಧ್ಯಕ್ಷ, ತುಮಕೂರು
ಮಳೆಯಿಲ್ಲದೆ ಕಂಗಾಲಾಗಿದ್ದೇವೆ. ತಾತನ ಭೂಮಿ ಭಾಗ ಪಡೆಯಲುನ್ಯಾಯಾಲಯದಲ್ಲಿದ್ದು, 10 ವರ್ಷದಿಂದನೋವುಂಡಿದ್ದೇವೆ. ಸಾಲಮನ್ನಾಸಂಪೂರ್ಣ ವಾಗಲು ಬಿಡಲಿಲ್ಲ. ಈಗಸರ್ವೆ ಕೆಲಸಕ್ಕೆ ಇಷ್ಟು ಹಣ ಹೆಚ್ಚಿಸಿದರೆ ಹೇಗೆ. ನಮ್ಮ ಹೆಸರಿಗೆ ಪಹಣಿ ಬಂದರೆ ಮರುಜನ್ಮ ಪಡೆದಂತಾಗುತ್ತದೆ. ಇಂತಹ ಸಮಯದಲ್ಲಿ ಈ ಶುಲ್ಕ ಏರಿಸಿರುವುದು ಸರಿಯಲ್ಲ. -ಶ್ರೀನಿವಾಸ್, ರೈತ
ಇದು ಸರ್ಕಾರದ ಆದೇಶವಾಗಿದ್ದು, ಫೆ.1ರಿಂದಲೇ ಜಾರಿಯಾಗಿದೆ.ಹಿಂದಿನ ದಿನಾಂಕದಲ್ಲಿ ನೋಂದಣಿಯಾದಅರ್ಜಿಯನ್ನು ಹಳೆ ದರದಲ್ಲೇ ಸರ್ವೆಮಾಡಿ ಕೊಡಲಿದ್ದು, ಫೆ.1ರಿಂದ ಬಂದಅರ್ಜಿಗಳಿಗೆ ನೂತನ ದರಅನ್ವಯವಾಗಲಿದೆ. -ಏಕನಾಥ್, ಎಡಿಎಲ್‌ಆರ್, ಮಧುಗಿರಿ
-ಮಧುಗಿರಿ ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.