ಹಕ್ಕಿ-ಪಿಕ್ಕಿ ಜನಾಂಗಕ್ಕೆ ಸ್ವಾಮೀಜಿ ನೆರವು
Team Udayavani, May 16, 2021, 7:06 PM IST
ತುಮಕೂರು: ಕೋವಿಡ್ 2ನೇ ಅಲೆ ಹಲವಾರುಜನರ ಬದುಕನ್ನು ಕಿತ್ತುಕೊಂಡಿದೆ. ಈಮಹಾಮಾರಿಯ ಹೊಡೆತಕ್ಕೆ ಪ್ರತಿದಿನ ದುಡಿಮೆಮಾಡಿ ಜೀವನ ಸಾಗಿಸುತ್ತಿದ್ದ ಹಕ್ಕಿ-ಪಿಕ್ಕಿ ಜನಾಂಗದಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಈ ಜನಾಂಗಕ್ಕೆಪಾವಗಡದ ಶ್ರೀ ರಾಮಕೃಷ್ಣ ಸೇವಾ ಆಶ್ರಮದಸ್ವಾಮಿ ಜಪಾನಂದಜೀ ನೆರವು ನೀಡುವ ಮೂಲಕಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ತುಮಕೂರು, ಚಿಕ್ಕನಾಯಕನಹಳ್ಳಿಮತ್ತಿತರ ಕಡೆಗಳಲ್ಲಿ ವಾಸವಿರುವ ಹಕ್ಕಿ-ಪಿಕ್ಕಿಜನಾಂಗದವರು ತೊಂದರೆಯಲ್ಲಿ ಇದ್ದಾರೆಎನ್ನುವುದನ್ನು ಅರಿತ ಸ್ವಾಮಿ ಜಪಾನಂದ ಜೀಪಾವಗಡದಿಂದ ತುಮಕೂರಿಗೆ ಬಂದು ಸಂಕಷ್ಟದಲ್ಲಿಇದ್ದ ಹಕ್ಕಿ-ಪಿಕ್ಕಿ ಜನಾಂಗಕ್ಕೆ ನೆರವಾಗಿದ್ದಾರೆ.ತುಮಕೂರು ತಾಲೂಕಿನ ಅಮಲಾಪುರ ಗ್ರಾಮದಕೇಂದ್ರೀಯ ವಿದ್ಯಾಲಯದ ಹತ್ತಿರ ಇರುವ 150ಹಕ್ಕಿ-ಪಿಕ್ಕಿ ಜನಾಂಗದ ವಾಸ ಸ್ಥಳಕ್ಕೆ ಭೇಟಿ ನೀಡಿಅವರಿಗೆ ಪಾತ್ರೆ ಹಾಗೂ ದಿನಸಿ ಸಾಮಗ್ರಿ ವಿತರಿಸಿದರು.ಪಾವಗಡದಿಂದ 75 ಕಿ.ಮೀ. ದೂರದಲ್ಲಿರುವ ಈಜನಾಂಗ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು,ಯಾವುದೇ ಮೂಲ ಸೌಕರ್ಯವಿಲ್ಲದೆ ಜೀವಿಸುತ್ತಿರುವಈ ಜನಾಂಗದ ಸ್ಥಿತಿಯನ್ನು ನೋಡಿ ಮರುಗಿದರು.
150 ಕುಟುಂಬಕ್ಕೆ ದಿನಸಿ ವಿತರಣೆ: ತಕ್ಷಣವೇ ತಮ್ಮವಿವೇಕ ಬ್ರಿಗೇಡ್ ತಂಡ ಹಾಗೂ ಪಾವಗಡದ ಸರ್ಕಾರಿಸಹಾಯಕ ಅಭಿಯೋಜಕ ವಿ.ಮಂಜುನಾಥ್‌ಅವರೊಂದಿಗೆ ಮುಂಜಾನೆಯೇ ಭೇಟಿ ನೀಡಿ ಅಲ್ಲಿವಾಸವಿರುವ 150 ಕುಟುಂಬಗಳಿಗೆ ಅಡುಗೆ ಪಾತ್ರೆಗಳಸೆಟ್, ಅಡುಗೆ ಎಣ್ಣೆ, 10 ಕೆ.ಜಿ. ಅಕ್ಕಿ, ತಲಾ 2ಕೆ.ಜಿಯಂತೆ ಬೇಳೆ, ರವೆ, ಸಕ್ಕರೆ, ಉಪ್ಪು, ಗೋಧಿ ಹಿಟ್ಟುಮತ್ತು 1 ಕೆ.ಜಿ. ಸಾಂಬಾರು ಪುಡಿ ನೀಡಿರುವುದಲ್ಲದೇಪ್ರತಿಯೊಬ್ಬರಿಗೂ ಮಾಸ್ಕ್, ಸೋಪು ವಿತರಿಸಿದರು.ಕೊರೊನಾದ ಎರಡನೇ ಅಲೆ ಇಂತಹ ಸಾವಿರಾರುಕುಟುಂಬಗಳನ್ನು ನಿರ್ಗತಿಕರನ್ನಾಗಿ ಮಾಡಿರುವವೇಳೆಯಲ್ಲಿ ಸ್ವಾಮೀಜಿ ನೆರವು ಪಡೆದು ಹಕ್ಕಿ-ಪಿಕ್ಕಿಜನಾಂಗ ಸಂತಸಗೊಂಡಿತು.
ಜನಾಂಗಕ್ಕೆ ಸಹಾಯಹಸ್ತ: ಈ ವೇಳೆ ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀಮಾತನಾಡಿ, ಜಿಲ್ಲೆಯಲ್ಲಿರುವಂತಹ ಇಂತಹ ನಿರ್ಗತಿಕಮತ್ತು ಅತ್ಯಂತ ಹಿಂದುಳಿದ ಹಕ್ಕಿ-ಪಿಕ್ಕಿ ಜನಾಂಗದಹಾಗೂ ಕಾಡುಮೇಡುಗಳನ್ನು ಸುತ್ತುತ್ತಾ ಬಾಚಣಿಗೆ,ಪಿನ್ನು ಇತ್ಯಾದಿಗಳನ್ನು ಊರಿಂದೂರಿಗೆ ಹೋಗಿಮಾರುತ್ತಾ ಜೀವನ ನಡೆಸುತ್ತಿರುವ ಇಂತಹವರಿಗೆಸಹಾಯಹಸ್ತ ನೀಡಿರುವುದು ಸಂತಸವಾಗಿದೆ.ಜಿಲ್ಲೆಯಲ್ಲಿಯೇ ಈ ಕಾರ್ಯಕ್ರಮ ಆರಂಭವಾಗಿದೆ.ಸುಧಾಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನಸಹಕಾರದೊಂದಿಗೆ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ.ಚಿಕ್ಕನಾಯಕನಹಳ್ಳಿಯಿಂದ ಹಿಡಿದುಪಾವಗಡದವರೆಗೆ ಇಂತಹ ಸಮುದಾಯಗಳನ್ನುಗುರುತಿಸಿದ್ದು ಅವರಿಗೆ ಸಹಾಯಹಸ್ತವನ್ನುನೀಡಲಾಗುತ್ತದೆ. ಜಿಲ್ಲೆಯಲ್ಲಿ ಈ ರೀತಿಯ 600ಕುಟುಂಬಗಳಿಗೆ ಸೇವೆ ಸಲ್ಲಿಸುವುದಾಗಿ ಎಂದರು.
ಚಿ.ನಿ.ಪುರುಷೋತ್ತಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.