![Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!](https://www.udayavani.com/wp-content/uploads/2024/12/Court-8-415x234.jpg)
ದುಶ್ಚಟ ಬಿಟ್ಟು ಉತ್ತಮ ಜೀವನ ನಡೆಸಿ: ಜಯಚಂದ್ರ
Team Udayavani, Jul 4, 2017, 9:43 AM IST
![tumukuru-3.jpg](https://www.udayavani.com/wp-content/uploads/2017/07/4/tumukuru-3.jpg)
ತುಮಕೂರು: ಸಮಾಜದಲ್ಲಿ ಇಂದು ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿರುವುದು ಗ್ರಾಮೀಣ ಪ್ರದೇಶದ ಬಡವರಷ್ಟೇ ಅಲ್ಲ, ನಗರ ಪ್ರದೇಶದಲ್ಲಿ ವಿದ್ಯಾವಂತರೂ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದನ್ನು ತಡೆಗಟ್ಟಲು ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸೋಮವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾದಕ ವಸ್ತು ವಿರೋಧಿ ಸಪ್ತಾಹ ಸಮಾರೋಪ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಪ್ರಾಣಿಗಳಿಗಿಂತ ಮನುಷ್ಯ ಬುದ್ಧಿವಂತ ದುಶ್ಚಟಗಳಿಂದ ಆಗುವ ಅನಾಹುತದ ಅರಿವು ಇರುತ್ತದೆ. ಕೆಲವರು ಇದರ ಅರಿವು ಇದ್ದರೂ ಇದರ
ದಾಸರಾಗಿರುತ್ತಾರೆ. ಇದನ್ನು ಬಿಡಲು ಮನಸ್ಸು ಮುಖ್ಯ ಎಂದ ಅವರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರು ಎಲ್ಲಾ ಜಿಲ್ಲೆಗಳಲ್ಲಿ ದುಶ್ಚಟಗಳಿಗೆ ಬಲಿಯಾದವರಿಗೆ ತರಬೇತಿ ನೀಡಿ ಬಿಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ರಾಮ ಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ.ಶ್ರೀವೀರೇಶಾ ನಂದ ಸರಸ್ವತಿ ಸ್ವಾಮೀಜಿ, ವಿಶ್ವದಲ್ಲಿ ಸುಮಾರು 700 ಕೋಟಿ ಜನಸಂಖ್ಯೆ ಇದ್ದು ಇವರಲ್ಲಿ 25 ಕೋಟಿ ಜನ ಮದ್ಯವ್ಯಸನಿಗಳಿದ್ದಾರೆ ಇದರಲ್ಲಿ ಯುವ ಜನತೆಯೇ ಹೆಚ್ಚು ಎಂದು ತಿಳಿಸಿದರು. ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ.
ರುದ್ರಪ್ಪ ಮಾತನಾಡಿ, ಜನರಿಗೆ ದುಶ್ಚಟಗಳಿಂದ ಆಗುವ ತೊಂದರೆಗಳ ಬಗ್ಗೆ ಮಂಡಳಿ ಹಲವಾರು ಕಾರ್ಯಕ್ರಮದ ಮೂಲಕ ಜಾಗೃತಿ ಉಂಟು ಮಾಡುತ್ತಿದ್ದೇವೆ ಎಂದರು.
ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ವಿ.ಪಾತರಾಜು, ಸಂಯಮ ಮಂಡಳಿಯ ಕಾರ್ಯ ಯೋಜನೆಗಳನ್ನು ತಿಳಿಸಿದರು. ಸಮಾರಂಭದಲ್ಲಿ ಕುಡಿತ ಚಟಕ್ಕೆ ವಿದಾಯ ಹೇಳಿ ಉತ್ತಮ ಜೀವನ ನಡೆಸುತ್ತಿರುವ ಪ್ರತಾಪ್ ತಮ್ಮ ಅನುಭವ ಹಂಚಿಕೊಂಡರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಜಿಪಂ ಸಿಇಒ ಕೆ.ಜಿ
ಶಾಂತಾರಾಮ್, ಎಸ್ಪಿ ಡಾ.ದಿವ್ಯಗೋಪಿನಾಥ್, ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ನರಸಿಂಹ ಮೂರ್ತಿ, ಮುನಿಯಪ್ಪ, ನಾಗರಾಜು, ತಿಮ್ಮಪ್ಪ ನಾಯಕ್, ಡಿಡಿಪಿಐ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಾಸಂತಿ ಉಪ್ಪಾರ್ ಮತ್ತಿತರರಿದ್ದರು.
ಜಾಥಾ: ಮದ್ಯಪಾನ ಸಂಯಮ ಮಂಡಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಾ.ಗುಬ್ಬಿ ವೀರಣ್ಣ
ಕಲಾಕ್ಷೇತ್ರದವರೆಗೆ ಆಶಾಕಾರ್ಯಕರ್ತೆಯರು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಈ ವೇಳೆ ಜಾಥಾಗೆ ಜಿಪಂ ಸಿಇಒ ಕೆ.ಜಿ.ಶಾಂತಾರಾಮ್ ಚಾಲನೆ ನೀಡಿದರು. ನಂತರ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಳ ವಿಷಾದನೀಯ ಗ್ರಾಮೀಣ ಪ್ರದೇಶದಲ್ಲಿ ಬಡತನದಿಂದ ಇರುವವರು ರೈತಾಪಿ ವರ್ಗ ದಿನವೂ ಕಷ್ಟ ಪಟ್ಟು ದುಡಿದು ದುಡಿದ ಹಣವನ್ನು ಉಳಿಸದೇ ಮದ್ಯವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇಂದು ಗ್ರಾಮೀಣ ಪ್ರದೇಶಗಳಿಗಿಂತಲೂ ಪಟ್ಟಣ ಮತ್ತು ನಗರ ಪ್ರದೇಶಗಳಿಲ್ಲಿ ಮದ್ಯ ಮತ್ತು ಮಾದಕ ಪರ್ದಾಥಗಳ ವ್ಯಸನಿಗಳು ಹೆಚ್ಚುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಟಾಪ್ ನ್ಯೂಸ್
![Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!](https://www.udayavani.com/wp-content/uploads/2024/12/Court-8-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ](https://www.udayavani.com/wp-content/uploads/2024/12/12-14-150x90.jpg)
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
![suicide (2)](https://www.udayavani.com/wp-content/uploads/2024/12/suicide-2-1-150x81.jpg)
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
![ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್](https://www.udayavani.com/wp-content/uploads/2024/12/drone-pratap1-150x104.jpg)
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
![4-pavagada](https://www.udayavani.com/wp-content/uploads/2024/12/4-pavagada-150x90.jpg)
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
![1-pavagada](https://www.udayavani.com/wp-content/uploads/2024/12/1-pavagada-150x90.jpg)
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
![Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!](https://www.udayavani.com/wp-content/uploads/2024/12/Court-8-150x84.jpg)
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
![Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ](https://www.udayavani.com/wp-content/uploads/2024/12/01444-150x90.jpg)
Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ
![14](https://www.udayavani.com/wp-content/uploads/2024/12/14-7-150x90.jpg)
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
![8](https://www.udayavani.com/wp-content/uploads/2024/12/8-23-150x80.jpg)
Udupi: ಅಂಬಲಪಾಡಿ ಓವರ್‌ಪಾಸ್ ಕಾಮಗಾರಿ ಆರಂಭ
![Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ](https://www.udayavani.com/wp-content/uploads/2024/12/Ambani1-150x84.jpg)
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.