ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ


Team Udayavani, Mar 17, 2020, 3:00 AM IST

corona-niya

ಕುಣಿಗಲ್‌: ಕೊರೊನಾ ವೈರಸ್‌ ಯಾವ ಸಮಯದಲ್ಲಾದರೂ ತಾಲೂಕಿಗೆ ಪ್ರವೇಶಿಸುವ ಸಾಧ್ಯತೆ ಇದ್ದು, ರೋಗ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಂಡು, ಅಗತ್ಯವಿರುವ ಔಷ ಧಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಕೊರೊನಾ ವೈರಸ್‌ ತಡೆಗಟ್ಟುವ ಸಂಬಂಧ ನಡೆದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವೈರಸ್‌ ಸಂಬಂಧ ಮೊದಲು ಅಧಿಕಾರಿಗಳು ತಿಳಿದುಕೊಂಡರೇ, ನಾಗರಿಕರಿಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ದಿಸೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ಆತಂಕ ಮೂಡಿಸುವುದು ಸರಿಯಲ್ಲ: ರೋಗ ಹರಡದಂತೆ ತಡೆಯಲು ಕೇವಲ ವೈದ್ಯರಿಂದ ಮಾತ್ರ ಸಾಧ್ಯವಿಲ್ಲ. ವೈದ್ಯರೊಂದಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈ ಜೊಡಿಸಬೇಕು. ಜಾಗೃತಿ ಮೂಡಿಸುವಂತಹ ಸಮಯದಲ್ಲಿ ಆತಂಕ ಮೂಡಿಸುವಂತ ಕೆಲಸ ದೃಶ್ಯ ಮಾಧ್ಯಗಳು ಮಾಡುತ್ತಿವೆ ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಬ್ಬರಿಂದೊಬ್ಬರಿಗೆ ಹರಡುವ ವೈರಸ್‌: ಚೀನಾ ದೇಶದ ವುಹಾನ್‌ನಲ್ಲಿ ವೈರಸ್‌ ತಗಲಿದ ಪ್ರಾಣಿಗಳ ಹಸಿ ಮಾಂಸವನ್ನು ಅಲ್ಲಿನ ಜನರು ಸೇವನೆ ಮಾಡಿದ ಕಾರಣ ವೈರಸ್‌ ಮಾನವನಿಗೆ ಹಂಟಿಕೊಂಡು ಒಬ್ಬರಿಂದೊಬ್ಬರಿಗೆ ಹರಡುತ್ತಾ ಈಗ ವಿಶ್ವಾದ್ಯಂತ ಆತಂಕ ಸೃಷ್ಟಿಸಿದೆ, ವೈರಸ್‌ ತಗಲಿದ ವ್ಯಕ್ತಿ 9 ದಿನದ ಬಳಿಕ ಜ್ವರ, ನೆಗಡಿ, ಕೆಮ್ಮು, ತಲೆ ನೋವು, ನ್ಯುಮೋನಿಯಾ ಬೇಧಿ, ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವಿನ ಹಂಚಿಗೆ ತಲುಪುತ್ತಾನೆ ಎಂದು ಹೇಳಿದರು.

ವದಂತಿಗೆ ಕಿವಿಗೋಡಬೇಡಿ: ಆಯುರ್ವೇದಿಕ್‌, ನಾಟಿ ಔಷಧಯಿಂದ ಕೊರೊನಾ ಹೋಗಲಾಡಿಸಬಹುದು ಎಂದು ಕೆಲವರು ಹೇಳುತ್ತಾರೆ ಇದನ್ನು ನಂಬಿ ಮೋಸ ಹೊಗಬೇಡಿ, ಈವರೆಗೂ ಈ ಕಾಯಿಲೆ ಗುಣಪಡಿಸಲು ಯಾವುದೇ ಔಷಧ ಕಂಡು ಹಿಡಿದಿಲ್ಲ, ಸುಳ್ಳು ವದಂತಿಗೆ ಜನರು ಕಿವಿಗೊಡಬಾರದು ಎಂದು ಶಾಸಕರು ಮನವಿ ಮಾಡಿದರು.

ಎಲ್ಲರೂ ಎಚ್ಚರ ವಹಿಸಿ: ಉದ್ಯೋಗ, ಪ್ರವಾಸ ಸೇರಿದಂತೆ ಇತರೆ ವಿಷಯಗಳಿಗೆ ತಾಲೂಕಿನಿಂದ ದುಬೈ ಹಾಗೂ ಇತರೆ ದೇಶಗಳಿಗೆ ಹೋಗಿ ವಾಪಸ್‌Õ ಬರುವವರ ಹೆಸರುಗಳನ್ನು ಪಟ್ಟಿ ಮಾಡಿ ವೈರಸ್‌ ಸಂಬಂಧ ತಪಾಸಣೆಗೆ ಒಳಪಡಿಸಬೇಕೆಂದು ಆರೋಗ್ಯಾಧಿಕಾರಿಗೆ ಸೂಚಿಸಿದ ಶಾಸಕರು, ಅನಾವಶ್ಯಕವಾಗಿ ಬೆಂಗಳೂರಿಗೆ ಹೊಗುವುದನ್ನು ನಿಲ್ಲಿಸಿ ಎಂದು ಜನರಿಗೆ ಮನವಿ ಮಾಡಿದರು.

ಪ್ರಾಣಿ ಹಿಂಸೆ ನಿಷೇಧಿಸಿ: ಮಾಂಸ ಬೇಯಿಸಿ ತಿನ್ನುವುದರಿಂದ ಕೊರೊನಾ ಬರುವುದಿಲ್ಲ, ಆದರೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಹಲ್ಲಿನಿಂದ ಸಿಗಿದು ಹಸಿ ಮಾಂಸ ತಿನ್ನುವುದರಿಂದ ವೈರಸ್‌ ಬರುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ನಿಷೇಧಿಸಬೇಕೆಂದು ಡಾ.ರಂಗನಾಥ್‌ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಜಾತ್ರೆಗಳನ್ನು ಸರಳವಾಗಿ ಆಚರಣೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಜಾಗೃತಿ ಸಭೆ: ವೈರಸ್‌ ತಗಲಿ ಜನರಿಗೆ ಏನಾದರೂ ತೊಂದರೆ ಉಂಟಾದರೆ ಅದನ್ನು ಸಹಿಸಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ನೋವಿನಂದ ಹೇಳಿದ ಶಾಸಕರು ಈ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಒಗ್ಗೂಡಿ ಗ್ರಾಮಗಳಲ್ಲಿ ಸಭೆ ಸೇರಿಸಿ ಅಲ್ಲಿ ವೈರಸ್‌ ತಡೆಗಟ್ಟುವ ಸಂಬಂಧ ಜನ ಜಾಗೃತಿ ಮೂಡಿಸಬೇಕು. ಜತೆಗೆ ಪಟ್ಟಣದ 23 ವಾರ್ಡ್‌ ಸೇರಿದಂತೆ ಗ್ರಾಮಗಳ ಸ್ವತ್ಛತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿಸಿದರು.

ಶೇ.100 ರಲ್ಲಿ ಕೇವಲ ಶೇ.5 ರಷ್ಟು ಮಾತ್ರ ವೈರಸ್‌ನಿಂದ ಜನರು ಮೃತಪಟ್ಟಿದ್ದಾರೆ. 95 ಜನರು ರೋಗದಿಂದ ಮುಕ್ತರಾಗಿದ್ದಾರೆ ಇದನ್ನು ಜನರಿಗೆ ತಿಳಿ ಹೇಳಿ ಅವರಲ್ಲಿ ಧೈರ್ಯ ತುಂಬಬೇಕು ಎಂದು ಹೇಳಿದರು. ಸಭೆಯಲ್ಲಿ ತಾಪಂ ಇಒ ಶಿವರಾಜಯ್ಯ, ತಾಲೂಕು ಆರೋಗ್ಯಾಧಿಕಾರಿ ಜಗದೀಶ್‌, ಸಿಪಿಐ ನಿರಂಜನ್‌ಕುಮಾರ್‌, ಆಡಳಿತ ವೈದ್ಯಾಧಿಕಾರಿ ಗಣೇಶ್‌ಬಾಬು ಇತರರು ಇದ್ದರು.

ಕೋಳಿ ಅಂಗಡಿ ಬಂದ್‌ಗೆ ಸೂಚನೆ: ಮಾವಿನಕಟ್ಟೆ ಪಾಳ್ಯ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಈ ಹಿಂದೆ ನಾಯಿ ದಾಳಿ ನಡೆಸಿ ಬಾಲಕಿಯನ್ನು ಸಾಯಿಸಿರುವ ಬೆನ್ನಲೆ ಮತ್ತೆ ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ, ಇದಕ್ಕೆ ಕಾರಣವೇನು ಎಂದು ಶಾಸಕರು ಪಿಡಿಒ ಅವರನ್ನು ಪ್ರಶ್ನಿಸಿದರು,

ಪಟ್ಟಣದ ಕೋಳಿ ಅಂಗಡಿ ವ್ಯಾಪಾರಿಗಳು ಕೋಳಿ ತಾಜ್ಯವನ್ನು ದೊಡ್ಡಕೆರೆ ಏರಿ ಹಾಗೂ ಮಾವಿನಕಟ್ಟೆಪಾಳ್ಯದ ಹಾಸು ಪಾಸಿನಲ್ಲಿ ತಂದು ಹಾಕುತ್ತಿದ್ದಾರೆ. ಈ ತ್ಯಾಜ್ಯವನ್ನು ತಿನ್ನಲು ಬರುವ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿವೆ ಎಂದು ಪಿಡಿಒ ತಿಳಿಸಿದರು, ಇದರಿಂದ ಕೆಂಡಾಮಂಡಲರಾದ ಶಾಸಕರು ಕೂಡಲೇ ಅಂಗಡಿ ವ್ಯಾಪಾರಿಗಳ ಸಭೆ ಕರೆದು ತಿಳಿವಳಿಕೆ ಹೇಳಬೇಕು, ತಪ್ಪಿದಲ್ಲಿ ಅಂಗಡಿಗಳನ್ನು ಮೂಲಾಜಿಲ್ಲದೆ ಮುಚ್ಚಿಸುವಂತೆ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಸೂಚಿಸಿದರು.

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.