ತುಮಕೂರಲ್ಲಿ ಯುಎಲ್ಬಿ ಮೂಲಕ ತೆರಿಗೆ ಸಂಗ್ರಹ
ತೆರಿಗೆ ಸಂಗ್ರಹಣೆಗೆ ಹ್ಯಾಂಡ್ ಹೆಲ್ಡ್ಯಂತ್ರ ಬಳಕೆ • ರಾಜ್ಯದಲ್ಲೇ ಮೊದಲ ಬಾರಿಗೆ ಈ ಯಂತ್ರ ಉಪಯೋಗ
Team Udayavani, May 18, 2019, 5:01 PM IST
ತುಮಕೂರು ಮಹಾನಗರ ಪಾಲಿಕೆಯಲ್ಲಿ ಯುಎಲ್ಬಿ ಮೂಲಕ ವಿವಿಧ ತೆರಿಗೆಗಳನ್ನು ಸಂಗ್ರಹಿಸುತ್ತಿರುವುದು.
ತುಮಕೂರು: ಕಾಗದ ರಹಿತ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿ ಪೇಪರ್ ಲೆಸ್, ಬಜೆಟ್ ಮಂಡಿಸಿದ್ದ ಮೊದಲ ಮಹಾನಗರ ಪಾಲಿಕೆ ಎನ್ನುವ ಕೀರ್ತಿಗೆ ಪಾತ್ರವಾಗಿದ್ದ ತುಮಕೂರು ಮಹಾನಗರ ಪಾಲಿಕೆ, ಈಗ ಪಾಲಿಕೆ ವ್ಯಾಪ್ತಿಯ ವಿವಿಧ ತೆರಿಗೆಯನ್ನು ಯುಎಲ್ಬಿ ಬಿಲ್ ಮೂಲಕ ಸಂಗ್ರಹಿಸುವ ಮೊದಲ ಪ್ರಯತ್ನವನ್ನು ರಾಜ್ಯದಲ್ಲಿ ತುಮಕೂರು ಮಹಾನಗರ ಪಾಲಿಕೆ ಮುಂದಾಗಿದೆ.
ತುಮಕೂರು ಮಹಾನಗರ ಪಾಲಿಕೆಯು ಸಾರ್ವಜನಿಕರಿಂದ ಸುಗಮ ಹಾಗೂ ಚುರುಕು ತೆರಿಗೆ ಸಂಗ್ರಹಣೆಗೆ ಹ್ಯಾಂಡ್ ಹೆಲ್ಡ್ಯಂತ್ರ ಬಳಕೆಗೆ ಮುಂದಾಗಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಯಂತ್ರವನ್ನು ಉಪಯೋಗಿಸುತ್ತಿರುವ ಏಕೈಕ ನಗರ ಸ್ಥಳೀಯ ಸಂಸ್ಥೆಯಾಗಿದೆ. ನಗರದ ವಿವಿಧ ಕಡೆಗಳಲ್ಲಿ ಪಾಲಿಕೆಯ ಅಧಿಕಾರಿಗಳು ವಿವಿಧ ತೆರಿಗೆಗಳನ್ನು ಸಂಗ್ರಹಿಸಲು ವಿವಿಧ ಬಡಾವಣೆಗಳಲ್ಲಿ ಮನೆ ಬಾಗಿಲಿಗೆ ಹೋಗಿ ತೆರಿಗೆ ಸಂಗ್ರಹಿಸಲು ಮುಂದಾಗಿರುವುದು ತುಮಕೂರು ಮಹಾನಗರ ಪಾಲಿಕೆ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮನೆ ಬಾಗಿಲಲ್ಲಿ ತೆರಿಗೆ ಸಂಗ್ರಹ: ಆಸ್ತಿ ತೆರಿಗೆ, ನೀರಿನ ತೆರಿಗೆ, ಒಳಚರಂಡಿ ತೆರಿಗೆ ಸೇರಿದಂತೆ ಪಾಲಿಕೆಗೆ ಸಂದಾಯ ಮಾಡಬೇಕಿದ್ದ ವಿವಿಧ ತೆರಿಗೆಗಳನ್ನು ಟಿಸಿಸಿ ಕಂದಾಯ ವಸೂಲಿಗಾರರು ಮನೆ ಬಾಗಿಲುಗಳಿಗೆ ಹೋಗಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪಾಲಿಕೆಯು ತನ್ನ ವ್ಯಾಪ್ತಿಯ ನಾಗರಿಕರಿಂದ ಆಸ್ತಿ ತೆರಿಗೆ, ನೀರಿನ ಶುಲ್ಕ, ಯುಜಿಡಿ ಶುಲ್ಕ, ಉದ್ದಿಮೆ ಶುಲ್ಕಗಳನ್ನು ನಗದು, ಕ್ರೆಡಿಟ್, ಡೆಬಿಟ್ ಕಾರ್ಡ್, ಚೆಕ್ ಅಥವಾ ಡಿಡಿ ಮೂಲಕ ಸಂಗ್ರಹಿಸಲು ಈ ಹ್ಯಾಂಡ್ ಹೆಲ್ಡ್ ಯಂತ್ರವನ್ನು ಬಳಕೆ ಮಾಡುತ್ತಿದ್ದಾರೆ.
ಆಸ್ತಿ ಛಾಯಾಚಿತ್ರ ಸೆರೆ ಹಿಡಿಯಬಹುದು: ಈ ಯಂತ್ರದ ಸಹಾಯದಿಂದ ವಿವಿಧ ತೆರಿಗೆ ಶುಲ್ಕಕ್ಕೆ ಸಂಬಂಧಿಸಿದ ಡಿಮ್ಯಾಂಡ್ ನೋಟ್ ಪ್ರಿಂಟ್ ಅನ್ನು ಸ್ಥಳದಲ್ಲಿಯೇ ಸಾರ್ವಜನಿಕರಿಗೆ ವಿತರಿಸುತ್ತಿದ್ದಾರೆ. ಸಾರ್ವಜನಿಕರು ಸದರಿ ಡಿಮ್ಯಾಂಡ್ ನೋಟ್ ಅನ್ನು ತುಲನೆ ಮಾಡಿ, ತಮ್ಮ ತೆರಿಗೆ ಶುಲ್ಕವನ್ನು ಪಾಲಿಕೆಯ ಕರವಸೂಲಿಗಾರರು, ಆರೋಗ್ಯ ನಿರೀಕ್ಷಕರ ಮೂಲಕ ಪಾವತಿಸಿ ರಸೀದಿ ಪಡೆಯುತ್ತಿದ್ದಾರೆ. ಅಲ್ಲದೆ, ಈ ಯಂತ್ರದ ಮೂಲಕ ಆಸ್ತಿಯ ಛಾಯಾಚಿತ್ರವನ್ನು ಸೆರೆ ಹಿಡಿಯಬಹುದಾಗಿದೆ ಹಾಗೂ ದುರ್ಬಳಕೆ ತಡೆಗಾಗಿ ಜಿಪಿಎಸ್ ಅಳವಡಿಲಾಗಿದೆ.
ಸ್ಥಳದಲ್ಲಿಯೇ ದಂಡ ವಿಧಿಸಬಹುದು: ಯಂತ್ರದ ಮೂಲಕ ತೆರಿಗೆ ಸಂಗ್ರಹಿಸಬಹುದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವ, ಹಾಕುವ ಹಾಗೂ ನಗರದ ಸೌಂದರ್ಯವನ್ನು ವಿರೂಪಗೊಳಿಸುವವರಿಗೆ ಸ್ಥಳ ದಲ್ಲಿಯೇ ದಂಡ ವಿಧಿಸುತ್ತಿದ್ದಾರೆ. ಆಸ್ತಿಯ ಉಪ ಯೋಗ ಮತ್ತು ನಲ್ಲಿ ಸಂಪರ್ಕದ ಬಳಕೆಯನ್ನು ವಸತಿ ಅಥವಾ ವಾಣಿಜ್ಯ ಬಳಕೆಯಾಗಿ ಸ್ಥಳದಲ್ಲಿಯೇ ಮಾರ್ಪಡಿಸಲು ಅವಕಾಶವಿದೆ.
ಇಂತಂಹ ಸಮಗ್ರ ಯಂತ್ರಗಳೊಂದಿಗೆ ತೆರಿಗೆ ಸಂಗ್ರಹ ಮಾಡುವ ಸಾಧನ ಭಾರತದಲ್ಲಿ ಇರಬಹುದು. ಆದರೆ, ಕರ್ನಾಟಕದಲ್ಲಿ ಈ ರೀತಿಯ ಸಾಧನವನ್ನು ಬಳಸಿ ಸ್ಥಳದಲ್ಲಿಯೇ ತೆರಿಗೆ ಸಂಗ್ರಹಿಸಿ, ಸಂಗ್ರಹಿಸಿದ ತೆರಿಗೆ ರಶೀದಿಯನ್ನು ನೀಡುವ ಸಾಧನ ವನ್ನು ತುಮಕೂರು ಮಹಾನಗರ ಪಾಲಿಕೆ ಬಳಕೆ ಮಾಡುತ್ತಿರುವುದು ಹೆಗ್ಗಳಿಕೆಗೆ ಗುರಿಯಾಗಿದೆ. ಇದರಲ್ಲಿ ಯಾವುದೇ ರೀತಿಯ ಹಣಕಾಸಿನ ತೊಂದರೆ ಯಾಗುತ್ತಿಲ್ಲ. ಸಾರ್ವಜನಿಕರಿಗೂ ಸಹ ಹೆಚ್ಚು ಸಹಕಾರಿಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.