ಆಕಸ್ಮಿಕ ಬೆಂಕಿಗೆ ಬಣವೆ,ತೊಗರಿ ಬೆಳೆ ನಾಶ; ಭೇಟಿ
Team Udayavani, Feb 2, 2021, 7:26 PM IST
ಶಿರಾ: ತಾಲೂಕಿನ ಗಿಡುಗನಹಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆ ಹಾಗೂ ತೊಗರಿ ಬೆಳೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು, ಸ್ಥಳಕ್ಕೆ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಭೇಟಿ ನೀಡಿ ಪರಿಶೀಲಿಸಿದರು.ರೈತರಾದ ರಂಗನಾಥಪ್ಪ, ಚಂದ್ರಪ್ಪ ಅವರ ಹುಲ್ಲಿನ ಬಣವೆಗಳು, ಲಕ್ಷ್ಮೀನಾರಾಯಣ ಮತ್ತು ನರಸಿಂಹಯ್ಯ ಎಂಬುವರ ತೊಗರಿ ಬೆಳೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದ್ದು, ಸಂತ್ರಸ್ತ ರೈತರಿಗೆ ಶಾಸಕರು ಸಾಂತ್ವನ ಹೇಳಿ, ಪರಿಹಾರದ ಭರವಸೆ ನೀಡಿದರು.
ಇದೇವೇಳೆ ಲಕ್ಕನ ಹಳ್ಳಿ ಪಕ್ಕದ ಹೊಸಕೋಟೆ ಗೊಲ್ಲರಹಟ್ಟಿಯಲ್ಲಿ ಚಂದ್ರಪ್ಪಗೆ ಸೇರಿದ ಮನೆ, ಬಣವೆ ಬೆಂಕಿಗೆ ಆಹುತಿ ಆಗಿದ್ದು, ಇಲ್ಲಿಗೂ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಭೇಟಿ ನೀಡಿ, ಸಂತ್ರಸ್ತರಿಗೆ ಒಂದು ಲೋಡ್ ಮೇವು, ಪಾತ್ರೆ, ಚಾಪೆ, ಬಿಂದಿಗೆ, ದಿನಬಳಕೆ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದರು.
ಇದನ್ನೂ ಓದಿ:ಸೌತ್ ವೆಸರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಕಿಡಿ
ಮುಖಂಡರಾದ ಮದಲೂರು ನರಸಿಂಹಮೂರ್ತಿ, ಲಕ್ಕನಹಳ್ಳಿ ಮಂಜುನಾಥ್, ಮಾಲಿಗೌಡ, ಪ್ರಕಾಶ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಕೃಷ್ಣಪ್ಪ, ನಾಗರಾಜು, ಶ್ರೀನಿವಾಸ್, ಬೆಳ್ಳಿಗೌಡ, ಶಾಸಕರ ಕಾರ್ಯದರ್ಶಿ ತಿಮ್ಮರಾಜು, ಕೋಟೆ ರವಿ, ಬಿಜೆಪಿ ಮುಖಂಡ ಗಿರಿಧರ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.