ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆ, ಬಾಲಕಿ ರಕ್ಷಣೆ
Team Udayavani, Jul 22, 2019, 5:15 PM IST
ಬದುಕು ಸಂಸ್ಥೆಯ ಸಿಬ್ಬಂದಿಯೊಂದಿಗೆ ತಾಯಿ ಮತ್ತು ಬಾಲಕಿ.
ತಿಪಟೂರು: ನಗರದ ಹಳೆಪಾಳ್ಯದಲ್ಲಿ 5-6 ತಿಂಗಳಿನಿಂದಲೂ ಭಿಕ್ಷಾಟನೆ ಮಾಡಿ ರಾತ್ರಿ ಶಾಲೆ ಅಥವಾ ದೇವಸ್ಥಾನಗಳಲ್ಲಿ ಮಲಗುತ್ತಿದ್ದ ಸುಮಾರು 35 ವರ್ಷದ ಮಹಿಳೆ ಮತ್ತು 8 ವರ್ಷದ ಹೆಣ್ಣು ಮಗುವನ್ನು ಬದುಕು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ರಕ್ಷಿಸಿದ್ದಾರೆ.
ಬದುಕು ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ನಿರ್ದೇಶಕ ಬಿ.ಎಸ್. ನಂದಕುಮಾರ್ ಮಾತನಾಡಿ ಶಾಲಾ ಶಿಕ್ಷಕಿಯೊಬ್ಬರ ದೂರಿನನ್ವಯ ಹಳೆಪಾಳ್ಯ ಶಾಲೆಯ ಬಳಿ ಮಹಿಳೆ ಮತ್ತು 8 ವರ್ಷದ ಬಾಲಕಿಯನ್ನು ರಕ್ಷಿಸಿದ್ದು, ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ತಾಯಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಹೇಳಿದರು.
ತಿಪಟೂರು ಬದುಕು ಸಾಂತ್ವನ ಕೇಂದ್ರದ ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕಿಯ ವಿಳಾಸ ಬೆಂಗಳೂರು ಎಂದು ಮತ್ತು ತಾಯಿ ಹಾಸನ ಜಿಲ್ಲೆಗೆ ಸೇರಿದವರೆಂದು ಇವರಿಗೆ ಯಾವುದೇ ಸಂಬಂಧಿಕರು ಇಲ್ಲ ಎಂದು ತಿಳಿಸಿರುತ್ತಾಳೆ. ಮಹಿಳೆ ಮದ್ಯವ್ಯಸನಿಯಾಗಿದ್ದೂ, 8 ವರ್ಷವಾದರೂ ಬಾಲಕಿಯನ್ನು ಶಾಲೆಗೆ ಸೇರಿಸಿಲ್ಲ ಎಂದು ಹೇಳಿದ್ದಾರೆ.
ಬದುಕು ಸಾಂತ್ವನ ಕೇಂದ್ರದ ಸಿಬ್ಬಂದಿ ಮಧು, ಚೈಲ್ಡ್ಲೈನ್ ಸಿಬ್ಬಂದಿ ಮೋಹನ್ ಕುಮಾರ್, ರವಿಶಂಕರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.