ಬಿಜೆಪಿ ಸೋಲಿಗೆ ಪ್ಯಾಕೇಜ್ ರಾಜಕೀಯ ಕಾರಣ
Team Udayavani, Jan 11, 2018, 5:55 PM IST
ಕೊರಟಗೆರೆ: ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ತುಮಕೂರು ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಪ್ಯಾಕೇಜ್ ರಾಜಕೀಯವೇ ಕಾರಣ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈಬಾರಿ ಪ್ಯಾಕೇಜ್ ರಾಜಕೀಯ ಮಾಡಲು ಬಿಡುವುದಿಲ್ಲ ಎಂದರು.
ಕೊರಟಗೆರೆ ಕ್ಷೇತ್ರ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಯುಡಿಯೂರಪ್ಪ ಅವರ ಸಮಾಲೋಚನೆಯ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ ಡಾ.ಜಿ.ಪರಮೇಶ್ವರ್ ಕ್ಷೇತ್ರಕ್ಕೆ 4 ಸಾವಿರ ಮನೆಗಳನ್ನು ತಂದು ಪ್ರತಿ ಗಾಪಂನಲ್ಲಿ ಮನೆಗಳನ್ನು ಗ್ರಾಪಂ ಸದಸ್ಯರಂತೆ ಅವರೇ ಮುಂದೆ ನಿಂತು ಹಂಚುತ್ತಿದ್ದಾರೆ ಎಂದು ಆಪಾದಿಸಿದರು.
ಗ್ರಾಮ ವಾಸ್ತವ್ಯ ನಾಟಕ: ಇತ್ತೀಚೆಗೆ ಮುಗ್ಗೂಂಡನಹಳ್ಳಿ ಗ್ರಾಮದ ದಲಿತ ಹನುಮಂತರಾಯಪ್ಪರ ಮನೆಯಲ್ಲಿ ಗ್ರಾಮ
ವಾಸ್ತವ್ಯ ಮಾಡಲು ಬೆಂಗಳೂರಿನಿಂದ ಹಾಸಿಗೆ, ತಟ್ಟೆ ಲೋಟ ಹಾಗೂ ಊಟ ತರಿಸಿ ನಾಟಕವಾಡಿದ್ದಾರೆ. ಈ ಎಲ್ಲಾ ನಾಟಕಗಳಿಗೆ ಸಂಸದ ಮುದ್ದ ಹನುಮೇಗೌಡ ನಿರ್ದೇಶಕರಾಗಿದ್ದಾರೆ ಎಂದರು.
ಜ.8 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಲ್ಯಾಪ್ ಟಾಪ್ ವಿತರಿಸಿದ್ದಾರೆ. ಈ ಕ್ಷೇತ್ರದಲ್ಲಿ ರಾಜಕೀಯಕ್ಕಾಗಿ ಸಣ್ಣ ಕೆಲಸಗಳನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಜನರು ಸರಿಯಾದ ಬುದ್ಧಿ ಕಲಿಸುತ್ತಾರೆ ಈ ಕ್ಷೇತ್ರದಲ್ಲಿ ಅಸಮರ್ಥ ಶಾಸಕ ಸುಧಾಕರಲಾಲ್ ಇರುವುದು ಜನರ ದೌರ್ಭಾಗ್ಯ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಎಸ್ .ಟಿ.ಮೋರ್ಚಾ ಅಧ್ಯಕ್ಷ ರಾಮಾಂಜನಪ್ಪ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಕಾರ್ಯದರ್ಶಿ ಪವನ್‌ಕುಮಾರ್, ಮುಖಂಡರುಗಳಾದ ತಿಮ್ಮಜ್ಜ, ವಿಜಯ್‌ಕುಮಾರ್ ಶಿವರುದ್ರಯ್ಯ, ಗಂಗಣ್ಣ, ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.