ಕುಡಿವ ನೀರಿಲ್ಲದೆ ಪರಿತಪಿಸುವ ತಿಮ್ಲಾಪುರ ಕೋಡಿ ಜನ
Team Udayavani, Nov 15, 2019, 5:06 PM IST
ಹುಳಿಯಾರು: ನಮ್ಮ ಬೀದಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿ ಮೋಟಾರ್ ಕೆಟ್ಟು 15 ದಿನವಾಗಿದೆ, ಈವರೆಗೂ ರಿಪೇರಿ ಮಾಡಿಸಿಲ್ಲ, 2-3 ಬಾರಿ ಕೆಟ್ಟು ಹೋಗಿದ್ದ ಮೋಟಾರ್ ಅನ್ನು ರಿಪೇರಿ ಮಾಡಿಸಿದ್ದೇವೆ. ಆದರೆ, ಈಗ, ಪಪಂಗೆ ಮನವಿ ಮಾಡಿದರೂ ರಿಪೇರಿ ಮಾಡಿಸುತ್ತಿಲ್ಲ, ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಕಾಡಿಬೇಡಿ ನೀರು ತರಬೇಕಿದೆ.
ಇದು ಹುಳಿಯಾರು ಪಪಂ ವ್ಯಾಪ್ತಿಯ ತಿಮ್ಲಾಪುರ ಕೋಡಿ ನಿವಾಸಿಗಳ ಅಳಲಾಗಿದೆ. ತಿಮ್ಲಾಪುರ ಕೋಡಿಯಲ್ಲಿನ ಕೈ ಪಂಪು ಹುಳಿಯಾರು ಪಟ್ಟಣಕ್ಕೆ ಹತ್ತಾರು ವರ್ಷಗಳ ಕಾಲ ಕುಡಿವ ನೀರು ಸರಬರಾಜು ಮಾಡಿತ್ತು. ಸರಿಯಾದ ಮಳೆಯಿಲ್ಲದೆ ಕೊಳವೆ ಬಾವಿಯ ಅಂತರ್ಜಲ ಕಡಿಮೆಯಾಯಿತು. ಹಾಗಾಗಿ 2-3 ವರ್ಷಗಳ ಹಿಂದೆ ಕೈ ಪಂಪು ತೆಗೆದು ಮೋಟರ್ ಬಿಟ್ಟು ಇರುವ ನೀರನ್ನು ಸಿಸ್ಟನ್ ಮೂಲಕ ಕೋಡಿ ನಿವಾಸಿಗಳಿಗೆ ನೀಡಲಾಗುತ್ತಿತ್ತು.
3-4 ಕಿ.ಮೀ.ದೂರ ಹೋಗಬೇಕಿದೆ: ಮುಂಜಾನೆ ತ್ರಿಫೇಸ್ ವಿದ್ಯುತ್ ಕೊಟ್ಟಾಗ ಅಕ್ಕಪಕ್ಕದ ಜಮೀನಿಗೆ ಹೋಗಿ ಅಲ್ಲಿನ ಮಾಲಿಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆಯಿದೆ. ಅವರೂ ಬಿಡದಿದ್ದರೆ 3-4 ಕಿ.ಮೀ.ದೂರಕ್ಕೆ ಹೋಗಿ ನೀರನ್ನು ತರಬೇಕಿದೆ. ಹಾಗಾಗಿ ದಿನಬೆಳಗಾದರೆ ಇಲ್ಲಿನ ಮಹಿಳೆಯರಿಗೆ ನೀರು ತರುವುದೇ ಗೋಳಾಗಿ ಪರಿಣಮಿಸಿದೆ. ಅಲ್ಲದೆ ಈ ಸ್ಥಳ ಪಟ್ಟಣ ಪ್ರದೇಶದಿಂದ 1 ಕಿ.ಮೀ. ದೂರವಿದ್ದು ಕೆರೆಯ ಕೋಡಿ ಬಳಿಯಿದೆ. ಇಲ್ಲಿನ ನಿವಾಸಿಗಳು ಆಸ್ಪತ್ರೆ, ಸಂತೆ, ಅಂಗಡಿ, ಶಾಲೆಗಳಿಗೆ ಬರಲು 1 ಕಿ.ಮೀ ನಡೆಯುವುದು ಅನಿವಾರ್ಯ. ವಿಧಿಯಿಲ್ಲದೆ ನಡೆದುಕೊಂಡೆ ಓಡಾಡುವ ಇಲ್ಲಿನ ಜನರಿಗೆ ಈ ರಸ್ತೆಯ ಇಕ್ಕೆಲಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಜಾಲಿ ಗಿಡಗಳು ತೊಡಕಾಗಿದ್ದು ತೆರವು ಮಾಡಿಸುವಂತೆ ಪಪಂ ಅಧಿಕಾರಿಗಳಿಗೆ ಹೇಳಿದರೂ ತೆರವು ಮಾಡಿಸಿಲ್ಲ
ಸ್ಪಂದಿಸದ ಅಧಿಕಾರಿಗಳು: ಇನ್ನು ಈ ರಸ್ತೆಯ ಕಂಬಳಿಗೆ ಬೀದಿ ದೀಪಗಳನ್ನು ಕಟ್ಟಿ ವರ್ಷಗಳೇ ಕಳೆದಿದೆ. ಹಾಗಾಗಿ ರಾತ್ರಿ ಸಂದರ್ಭದಲ್ಲಿ ಅಂಗೈಯಲ್ಲಿ ಜೀವ ಹಿಡಿದು ಓಡಾಡುತ್ತಿದ್ದಾರೆ. ಅಲ್ಲದೆ ಮನೆ ಗಳಿರುವ ಸ್ಥಳದಲ್ಲೂ ಬೀದಿ ದೀಪ ಕೆಟ್ಟಿದ್ದು ಬಡಾ ವಣೆಯ ಜನ ಕತ್ತಲೆಯಲ್ಲಿ ದಿನ ದೂಡುತ್ತಿದ್ದಾರೆ. ಪ್ರತಿ ನಿತ್ಯ ನೀರು, ಬೀದಿ ದೀಪ, ಜಾಲಿ ತೆರವಿಗೆ ಕೇಳಿಕೇಳಿ ಸಾಕಾಗಿ ಹೋಗಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಸ್ಪಂದಿಸದೆ ಮೌನಕ್ಕೆ ಶರಣಾಗಿದ್ದಾರೆ.
15 ದಿನಗಳ ಹಿಂದೆಯೇ ಅಧಿಕಾರಿಗಳಿಗೆ ಮನವಿ: 2-3 ವರ್ಷ ಇಲ್ಲಿನ ನಿವಾಸಿಗಳು ನೀರಿನ ಸಮಸ್ಯೆ ಯಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ನಂತರ ಕೊಳವೆಬಾವಿಗೆ ಬಿಟ್ಟಿದ್ದ ಮೋಟರ್ ಕೆಡಲು ಆರಂಭವಾಯಿತು. ಗ್ರಾಪಂಗೆ ಎಷ್ಟು ಹೇಳಿದರೂ ಕೇಳದಿದ್ದಾಗ ಸ್ಥಳೀಯರೇ ಮನೆಗಿಷ್ಟು ಎಂದು ಹಣ ಹಾಕಿ ರಿಪೇರಿ ಮಾಡಿಸುತ್ತಿದ್ದರು. ಹೀಗೆ 3-4 ಬಾರಿ ರಿಪೇರಿ ಮಾಡಿಸಿದ್ದರು. ಆದರೆ ಈಗ ಪುನಃ ಮೋಟಾರ್ ಕೆಟ್ಟಿದೆ. ಹೀಗೆ ಪದೇ ಪದೆ ರಿಪೇರಿ ಮಾಡಿಸಿ ಸೋತಿರುವ ಸ್ಥಳೀಯರು ಪಟ್ಟಣ ಪಂಚಾಯ್ತಿಯವರೇ ಒಳ್ಳೆಯ ಕಡೆ ರಿಪೇರಿ ಮಾಡಿಸಲಿ ಅಥವಾ ಮೋಟಾರ್ ಬದ ಲಾಯಿಸಲೆಂದು ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಸಿ 15 ದಿನಗಳಾದರೂ ಯಾರೊಬ್ಬರೂ ಇತ್ತ ಗಮನ ಹರಿಸದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿ ನೀರಿಗೆ ಹಾಹಾಕಾರ ಆರಂಭವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಕೊಳವೆ ಬಾವಿ ಮೋಟರ್ ಅನ್ನು 2-3 ಬಾರಿ ಕೆಟ್ಟಾಗ ಸ್ಥಳೀಯರಿಂದ ಹಣ ಸಂಗ್ರಹಿಸಿ ರಿಪೇರಿ ಮಾಡಿಸಿದ್ದೇವೆ. ಒಮ್ಮೆ ಸ್ಟಾರ್ಟರ್ ಸಹ ಸುಟ್ಟು ಹೋಗಿತ್ತು. ಇಲ್ಲಿನ ಜನರೇ ಹಣ ಸಂಗ್ರಹಿಸಿ ತಂದಿದ್ದಾರೆ. ಹೀಗೆ ಪದೇ ಪದೇ ನಾವೇ ಮಾಡಿಸುತ್ತಿದ್ದು ಈ ಬಾರಿಯಾದರೂ ಪಪಂ ಮಾಡಿಸಲಿ ಎಂದರೆ ಇತ್ತ ತಿರುಗಿಯೂ ನೋಡದೆ ನಿರ್ಲಕ್ಷ್ಯ ವಹಿಸಿದ್ದಾರೆ. –ವರದಣ್ಣ, ತಿಮ್ಲಾಪುರ ಕೋಡಿ ನಿವಾಸಿ
-ಎಚ್.ಬಿ.ಕಿರಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Kadaba: ಇದ್ದೂ ಇಲ್ಲವಾದ 108 ಆ್ಯಂಬುಲೆನ್ಸ್ ಸೇವೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.