ರಂಗ ಕಲೆ ಕಣ್ಮರೆ: ಪ್ರೊ.ನಾಯಕ್‌ ವಿಷಾದ


Team Udayavani, Mar 28, 2019, 4:49 PM IST

tmk
ತುಮಕೂರು: ರಂಗ ಕಲೆ ನಶಿಸುವ ಹಾದಿಯತ್ತ ಮುಖ ಮಾಡಿದ್ದು, ಪ್ರತಿಯೊಬ್ಬರು ರಂಗ ಕಲೆ ಉಳಿಸಿ, ಬೆಳೆಸಬೇಕು ಎಂದು ತುಮಕೂರು ವಿಶ್ವವಿದ್ಯಾ ನಿಲಯದ ಕುಲಸಚಿವ ಪ್ರೊ.ಕೆ.ಎನ್‌. ಗಂಗಾನಾಯಕ್‌ ತಿಳಿಸಿದರು.
ನಗರದ ಸಾಹಿತ್ಯ ಪರಿಷತ್‌ ಭವನದಲ್ಲಿ ನಾಟಕ ಮನೆ ತುಮಕೂರು ವತಿಯಿಂದ ಹೇಮಾದ್ರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗುರುಶ್ರೀ ಕಾಲೇಜ್‌ ಆಫ್ ಕಾಮರ್ಸ್‌ ಅಂಡ್‌ ಸೋಷಿಯಲ್‌ ವರ್ಕ್‌, ರಾಜ್ಯ ಯುವ ಬರಹ ಗಾರರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಯುವಜನತೆ ಸಿನಿಮಾ ಗೀಳಿನಲ್ಲಿ ಸಿಲುಕಿ ಒದ್ದಾಡುತ್ತಿದ್ದು, ಇದರಿಂದ ಹೊರಬಂದು ಪಠ್ಯೇತರ ಚಟು ವಟಿಕೆಗಳಾದ ನಾಟಕ, ರಂಗಕಲೆ, ಮತ್ತಿತರೆ ಸಾಂಸ್ಕೃತಿಕ ಚಟುವಟಿಕೆ ಅಳವಡಿಸಿಕೊಳ್ಳಬೇಕಿದೆ ಎಂದು ನುಡಿದರು.
ಗ್ರೀಕ್‌ ಮೂಲ: ಕಲೆಗೆ ಮೂಲ ಗ್ರೀಕ್‌ ದೇಶ, ಸಾಹಿತ್ಯ, ರಂಗಕಲೆ, ನಾಟಕ ಹೀಗೆ ಬೇರೆ ಬೇರೆ ಕಲೆಗಳೂ ಸಹ ಗ್ರೀಕ್‌ನಲ್ಲೇ ಮೊದಲು ಹುಟ್ಟಿದ್ದು, ಅಲ್ಲಿಂದಲೇ ಮೊದಲು ಪ್ರಾರಂಭವಾಗಿದ್ದು, ಆದ್ದರಿಂದ ಗ್ರೀಕ್‌ ದೇಶವನ್ನು ನಾವೆಂದೂ ಮರೆಯ ಲಾಗುವುದಿಲ್ಲ ಎಂದರು.
ಯೋಚನಾ ಶಕ್ತಿ ಬದಲಿಸುವ ಸಾಮರ್ಥಯ: ಒಂದು ನಾಟಕ ಅಥವಾ ರಂಗ ಕಲೆಯು ಉತ್ತಮವಾದ ಸಾಮಾಜಿಕ ಸಂದೇಶಗಳನ್ನು ನೀಡುವುದರ ಜೊತೆಗೆ ಜನರನ್ನು ಒಂದು ಅದೃಶ್ಯವಾದ ಲೋಕಕ್ಕೆ ಕರೆ ದೊಯ್ಯುತ್ತದೆ. ಇಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ತಮ್ಮ ಬದುಕಿಗೆ ಹೋಲಿಸಿ ನೋಡುತ್ತಾರೆ. ಕೆಲವು ಪಾತ್ರಗಳನ್ನು ತಮ್ಮ ಬದುಕಿಗೆ ಅನ್ವಯಿಸಿ ಕೊಂಡು ಬಿಡುತ್ತಾರೆ. ಜನರ ಯೋಚನಾ ಶಕ್ತಿ ಬದಲಿಸುವ ಸಾಮರ್ಥಯ ನಾಟಕಗಳಿಗಿವೆ. ಆದ್ದರಿಂದ ಇದು ಕಲೆಯ ಒಂದು ಸಮರ್ಥ ಮಾಧ್ಯವಾಗಿದೆ ಎಂದರು.
ಕಲಾ ಮಾಧ್ಯಮ: ನಮ್ಮ ಜಗತ್ತಿನಲ್ಲಿ ರಂಗಭೂಮಿ ಅಥವಾ ನಾಟಕಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದು ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ ಬೆಳೆದಿದೆ ಎಂದು ಹೇಳಿದರು.
ರಂಗ ಕಲೆಯೂ ಸಂಕೀರ್ಣವಾದುದು: ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ.ಲಕ್ಷ್ಮಣದಾಸ್‌ ಮಾತನಾಡಿ, ರಂಗ ಕಲೆಗೆ ಯಾವುದೇ ರೀತಿಯ ಭೇದ ಭಾವವಿಲ್ಲ, ಕಲೆಯ ಮುಂದೆ ಯಾರು ಮೇಲು ಕೀಳು ಅಲ್ಲ. ರಂಗ ಕಲೆಯೂ ಸಂಕೀರ್ಣವಾದುದು ಎಂದು ಹೇಳಿದರು.
ಬಹುದೊಡ್ಡ ಹೊಡೆತ ಬಿದ್ದಿದೆ: ಹಿಂದಿನ ನಾಟಕ ಕಲೆಗಳು ಪ್ರೇಕ್ಷಕನ ಕಲ್ಪನೆಯ ಶಕ್ತಿ ವೃದ್ಧಿಗೊಳಿಸುತ್ತಿತ್ತು, ಪ್ರತಿಯೊಂದು ದೃಶ್ಯದ ತನ್ನ ಕಲ್ಪನೆ ಮೂಲಕ ತನ್ನ ಮನಸಿನಲ್ಲಿ ಬಿಂಬಿಸಿಕೊಳ್ಳುತ್ತಿದ್ದ. ಆದರೆ, ಇಂದಿನ ನಾಟಕಗಳಲ್ಲಿ ನೈಜತೆ ತರುವ ನಿಟ್ಟಿನಲ್ಲಿ ಪ್ರೇಕ್ಷಕನ ಕಲ್ಪನ ಶಕ್ತಿಗೆ ಬಹುದೊಡ್ಡ ಹೊಡೆತ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವ ರಾಜಪ್ಪ ಆಪಿನಕಟ್ಟೆ ಮಾತನಾಡಿ, ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳು ಜನರಿಗೆ ಮನರಂಜನೆ ನೀಡುವುದರ ಜತೆಗೆ ನೈತಿಕ ಮೌಲ್ಯಗಳನ್ನು ತುಂಬುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಂಗಸಂಘಟಕ ನಾಟಕ ಮನೆ ಮಹಾಲಿಂಗು ತುಮಕೂರು ವಿ.ವಿ ಕನ್ನಡ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ, ಗುರುಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್‌.ಜಿ.ಬಸವ ರಾಜು, ಹೇಮಾದ್ರಿ ಎಜುಕೇಷನ್‌ ಡೆವಲೆಪ್‌ಮೆಂಟ್‌ ಸೊಸೈಟಿ ಕಾರ್ಯ ದರ್ಶಿ ವಿ.ಟಿ.ತಿಪ್ಪೇಸ್ವಾಮಿ, ಕಲಾವಿದ ಮಲ್ಲಿಕಾರ್ಜುನ ಕೆಂಕೆರೆ, ಹೇಮಾದ್ರಿ ಕಾಲೇಜಿನ ಪ್ರಾಂಶುಪಾಲ ಬಿ.ಕೆ.ನಟರಾಜ್‌, ಗುರುಶ್ರೀ ಕಾಲೇಜಿನ ಪ್ರಾಂಶುಪಾಲ ಪ್ರೋ. ಟಿ. ಗಂಗಾಧರಯ್ಯ, ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಕೆ.ಎನ್‌.ಲಕ್ಷ್ಮೀ ರಂಗಯ್ಯ, ಹಿರಿಯ ರಂಗಭೂಮಿ ಕಲಾವಿದ ಚನ್ನಬಸಯ್ಯ ಗುಬ್ಬಿ, ರಂಗನಿರ್ದೇಶಕ ಮೆಳೇಹಳ್ಳಿ ದೇವರಾಜ್‌, ಲುಂಬಿನಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಡಾ.ಸಿ.ರಾಜಶೇಖರ್‌, ಝೆನ್‌ಟೀಮ್‌ನ ಉಗಮ
ಶ್ರೀನಿವಾಸ್‌, ನಾಟಕಮನೆ ಕಲಾವಿದ ಎನ್‌.ಆರ್‌. ಪ್ರಕಾಶ್‌ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಯುವಜನತೆ ಮತ್ತು ರಂಗಭೂಮಿ ಕುರಿತು ವಿಚಾರ ಸಂಕಿರಣ ನಡೆಯಿತು. ನಂತರ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಜನರ ಮನರಂಜನೆಗಾಗಿ ನಮ್ಮಲ್ಲಿ ಹಲವಾರು ಕಲಾಪ್ರಕಾರಗಳಿವೆ. ಒಂದಕ್ಕಿಂತ ಒಂದು ವಿಶೇಷವಾಗಿರುವ ಈ ಕಲೆಗಳು ಜನರಿಗೆ ಮನರಂಜನೆ ನೀಡುವ ಜೊತೆಗೆ ಅವರಲ್ಲಿರುವ ಸೃಜನಶೀಲತೆ ಅರಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇಂಥ ಕಲೆಗಳಲ್ಲಿ ನಾಟಕ ಅಥವಾ ರಂಗಭೂಮಿಯೂ ಒಂದು.
●ಪ್ರೊ.ಕೆ.ಎನ್‌.ಗಂಗಾನಾಯಕ್‌, ತುಮಕೂರು ವಿವಿ ಕುಲಸಚಿವ
ಸಾಹಿತ್ಯ, ರಂಗಕಲೆ, ನಾಟಕ ಹೀಗೆ ಬೇರೆ ಬೇರೆ ಕಲೆಗಳೂ ಸಹ ಗ್ರೀಕ್‌ನಲ್ಲೇ ಮೊದಲು ಹುಟ್ಟಿದ್ದು, ಅಲ್ಲಿಂದಲೇ ಮೊದಲು ಪ್ರಾರಂಭ
„ ಒಂದು ನಾಟಕ ಅಥವಾ ರಂಗ ಕಲೆ ಉತ್ತಮವಾದ ಸಾಮಾಜಿಕ ಸಂದೇಶ ನೀಡುವುದರ ಜೊತೆಗೆ ಜನರನ್ನು ಅದೃಶ್ಯ ಲೋಕಕ್ಕೆ ಕರೆದೊಯ್ಯುತ್ತದೆ
„ ರಂಗಭೂಮಿ ಹಳೆಯ ಕಲಾ ಪ್ರಕಾರವಾಗಿದ್ದರೂ ಈಗಿನ ಆಧುನಿಕ ಪ್ರಪಂಚದಲ್ಲೂ ಒಂದು ಸಮರ್ಥವಾದ ಕಲಾ ಮಾಧ್ಯಮವಾಗಿ¨

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.