ಮಾವಿನ ಬೆಳೆಯೂ ಇಲ್ಲ, ಬೆಲೆಯೂ ಇಲ್ಲ: ನಷ್ಟ ಭೀತಿ
Team Udayavani, May 13, 2019, 4:26 PM IST
ಚೇಳೂರು: ಈ ವರ್ಷ ಮಾವಿನ ಬೆಳೆಯೂ ಇಲ್ಲ, ಬಂದಂತಹ ಬೆಳೆಗೆ ಸರಿಯಾದ ಬೆಲೆಯೂ ಇಲ್ಲದೇ ಮಾವು ಬೆಳೆಗಾರರು ಹಾಗೂ ವರ್ತಕರು ಕಂಗೆಟ್ಟಿರುವುದು ಕಂಡುಬರುತ್ತಿದೆ.
ಗುಬ್ಬಿ ತಾಲೂಕಿನ ಚೇಳೂರು ರಾಜ್ಯದಲ್ಲಿಯೇ ಮಾವು ಮತ್ತು ಹಲಸಿಗೆ ಹೆಸರುವಾಸಿಯಾದ ಮಾರುಕಟ್ಟೆ. ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಣ್ಣುಗಳು ಈ ಮಾರುಕಟ್ಟೆಗೆ ಬರುತ್ತಿವೆ. ಕಳೆದ ವರ್ಷಉತ್ತಮ ಮಳೆಯಾಗಿ ಉತ್ತಮ ಬೆಳೆಯೂ ಬಂದಿತ್ತು. ಆದರೆ, ಈ ಬಾರಿ ಮಾವಿನ ಗಿಡದಲ್ಲಿ ಕಾಯಿ ಬಂದಾಗ ಸರಿಯಾದ ಸಮಯಕ್ಕೆ ಮಳೆಯಾಗದೇ ಫಲವತ್ತಾಗಿ ಬರ ಬೇಕಾಗಿದ್ದ ಮಾವಿನಕಾಯಿಗಳ ಇಳುವರಿ ಕಡಿಮೆಯಾಗಿ ಸಣ್ಣ ಗಾತ್ರದಲ್ಲಿಯೇ ನಿಂತುಕೊಂಡಿವೆ.
ಶೇ.25ಭಾಗ ಫಸಲು: ಕೆಲವು ಮರಗಳಲ್ಲಿ ಗಾಳಿಗೂ ಸಹ ಸಣ್ಣ ಗಾತ್ರದಲ್ಲೆಯೇ ಇದ್ದಾಗಲೇ ಮಾವಿನಕಾಯಿಗಳು ಬಿದ್ದಿವೆ. ಜೊತೆಗೆ ಇರುವ ಫಸಲು ಸಹ ಉತ್ತಮವಾಗಿ ಬಂದಿಲ್ಲ. ಅದು ಸಹ ಶೇ.25ಭಾಗದಷ್ಟು ಫಸಲು ಮಾತ್ರ ಈ ವರ್ಷ ಬಂದಿದೆ ಎಂದು ರೈತರು ಹಾಗೂ ವರ್ತಕರು ಹೇಳುತ್ತಿದ್ದಾರೆ.
ನಷ್ಟದ ಭೀತಿ: ಬಂದಂತಹ ಮಾವಿನಕಾಯಿಗಳನ್ನು ತೆಗೆದುಕೊಳ್ಳುಲು ಮಂಡಿ ವರ್ತಕರು ಯೋಚನೆ ಮಾಡುತ್ತಿದ್ದಾರೆ. ಇದಕ್ಕೆ ಸೂಕ್ತ ಬೆಲೆ ಸಿಗುತ್ತದೋ ಇಲ್ಲವೋಎಂಬ ಚಿಂತೆಯಾಗಿದೆ. ಉತ್ತಮ ಬೆಲೆ ಇಲ್ಲದಿದ್ದರೆ ರೈತರಷ್ಟೇ ನಮಗೂ ನಷ್ಟವಾಗಬಹುದು ಎಂಬ ಯೋಚನೆ ಮಾಡುವ ಪರಿಸ್ಥಿತಿ ವರ್ತಕರಿಗೆ ಎದುರಾಗಿದೆ.
ದಿನಕ್ಕೆ 5ರಿಂದ 10ಲೋಡ್ ರವಾನೆ: ಕಳೆದ ವರ್ಷ ಈ ವೇಳೆ ಪ್ರತಿದಿನ ಮಾರುಕಟ್ಟೆಯಿಂದ 30ಕ್ಕೂ ಹೆಚ್ಚು ಲೋಡ್ ಮಾವಿನಕಾಯಿ ಬೆಂಗಳೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಪೂನಾ, ದೆಹಲಿ, ಮಹಾರಾಷ್ಟ್ರದ ನಗರ ಪ್ರದೇಶಗಳಿಗೆ ಹಾಗೂ ಅನೇಕ ದೂರದೂರುಗಳಿಗೆ, ರಾಜ್ಯಗಳಿಗೆ ಇಲ್ಲಿಂದ ಹೋಗುತ್ತಿತ್ತು. ಆದರೆ, ಈ ವರ್ಷ ದಿನಕ್ಕೆ 5ರಿಂದ 10ಲೋಡ್ ಹಣ್ಣು ಹೋಗುವುದೇ ಕಷ್ಟವಾಗಿದೆ ಎಂದು ಇಲ್ಲಿನ ವರ್ತಕರು ಅಳಲು ತೋಡಿಕೊಂಡಿದ್ದಾರೆ.
ಈ ವರ್ಷ ತೋತಪುರಿ ಕೆ.ಜಿ.ಗೆ 8-12ರೂ., ಮಲಗೊಬಾ 20-30 ರೂ., ರಸಪುರಿ 15-20ರೂ., ಸೆಂಧೂರ 10-15 ರೂ., ಬೆನೀಷ್ 15-20ರೂ., ಬಾದಾಮಿ 20-30 ರೂ. ಬೆಲೆ ಪಡೆದುಕೊಂಡಿವೆ. ಇತರೆ ಜಾತಿಯ ಹಣ್ಣುಗಳಿಗೂ ಉತ್ತಮ ಬೆಲೆಯಿಲ್ಲ. ಇಂತಹ ಬೆಲೆಯಲ್ಲಿ ಮಾವಿನಕಾಯಿ ಕೀಳುವ ಕೂಲಿ ಯೂ ಸಿಗುವುದು ಕಷ್ಟವಾಗಿದೆ. ಸರಿಯಾದ ಬೆಳೆಯಿಲ್ಲದೇ ಕಂಗೆಟ್ಟ ಕೆಲವು ರೈತರು, ಮಾವಿನಗಿಡಗಳನ್ನೇ ತೆಗೆಯುವ ಯೋಚನೆ ಮಾಡುತ್ತಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಮಾವು ಅಭಿವೃದ್ಧಿ ಮಂಡಳಿ ಸೂಕ್ತ ಸಲಹೆ ಹಾಗೂ ಸಹಕಾರವನ್ನು ರೈತರಿಗೆ ನೀಡಬೇಕಾಗಿದೆ ಎಂದು ರೈತರ ಅಭಿಪ್ರಾಯವಾಗಿದೆ.
● ಸಿ.ಟಿ.ಮೋಹನ್‌ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.