ತೆಂಗು ಅಭಿವೃದ್ದಿ ಘಟಕ ಸ್ಥಾಪಿಸಲು ಡೀಸಿಗೆ ಮನವಿ
Team Udayavani, Jul 10, 2021, 10:31 PM IST
ತುರುವೇಕೆರೆ: ತಾಲೂಕಿನಲ್ಲಿ ತೆಂಗುಅಭಿವೃದ್ಧಿ ಘಟಕ ಸ್ಥಾಪಿಸಲುಜಿಲ್ಲಾಧಿಕಾರಿಗೆ 50 ಎಕರೆ ಜಮೀನನ್ನುದೊರಕಿಸಿಕೊಡುವಂತೆ ಮನವಿಮಾಡಲಾಗಿದೆ ಎಂದು ತೆಂಗು ಮತ್ತುನಾರು ಅಭಿವೃದ್ಧಿ ನಿಗಮ ನಿರ್ದೇಶಕ ಮಂಚೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಬಿಜೆಪಿ ನನ್ನನ್ನುಗುರುತಿಸಿ ಒಂದು ಮಹತ್ವದ ಹುದ್ದೆಯಅವಕಾಶವನ್ನು ನೀಡಿದೆ. ಈ ನಿರ್ದೇಶಕಸ್ಥಾನದ ಅವಕಾಶದ ಸದುಪಯೋಗದಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರಸರ್ಕಾರದ ತೆಂಗು ಮತ್ತು ನಾರುಅಭಿವೃದ್ಧಿ ನಿಗಮ ಹಾಗೂ ರಾಜ್ಯಸರ್ಕಾರದ ಸಣ್ಣ ಕೈಗಾಗಿಕಾವಲಯದಿಂದ ಸ್ಥಳೀಯ ತೆಂಗುಉತ್ಪನ್ನಗಳಿಗೆ ಮೌಲ್ಯವರ್ಧಿತಮಾರುಕಟ್ಟೆಯೊಂದಿಗೆ ನಿರುದ್ಯೋಗಿಯುವಕ-¿ ುುವ ತಿಯರಿಗೆಉದ್ಯೋಗ ಒದಗಿಸುವ ಸಂಕಲ್ಪಹೊಂದಲಾಗಿದೆ ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಡಿ ಜಿಲ್ಲೆಯನ್ನು ತೆಂಗುಉತ್ಪನ್ನಕ್ಕಾಗಿ ಗುರುತಿಸಲಾಗಿದ್ದು,ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯಬೆಳೆಯಾದ ತೆಂಗು ಅದರಉತ್ಪನ್ನಗಳಾದ ಸೋಗೆ ಕಡ್ಡಿ, ತೆಂಗಿನಮಟ್ಟೆ, ಚಿಪ್ಪು ಈ ಉತ್ಪನ್ನಗಳಿಂದಗೃಹೋಪಯೋಗಿ ಹಾಗೂ ಕೈಗಾರಿಕಉತ್ಪನ್ನ ಪದಾರ್ಥಗಳನ್ನು ಉತ್ಪಾದಿಸಲುಉದ್ದೇಶಿಸಲಾಗಿದೆ. ಸೂಕ್ಷ, ಸಣ್ಣ ಮತ್ತುಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆಕೇಂದ್ರ ಸರ್ಕಾರ ಹಲವು ಆರ್ಥಿಕನೆರವುವನ್ನು ನಿರುದ್ಯೋಗಿಯುವಕರಿಗೆಘೋಷಿಸಿದೆ ಎಂದರು.
ಶೇ.40ರಷ್ಟು ಹಾಗೂ ಶೇ. 90ರಷ್ಟುಸಬ್ಸಿಡಿ ಸಹಾಯಧನದೊಂದಿಗೆಸ್ಥಾಪಿಸಬಹುದಾದ ಹಲವುಕೈಗಾರಿಕೆಗಳಿವೆ. ಈ ಎಲ್ಲ ಸಂಗತಿಗಳನ್ನುಒಳಗೊಂಡಂತೆ ಆಗಸ್ಟ್ ತಿಂಗಳಲ್ಲಿಪ್ರಾತ್ಯಕ್ಷಿಕೆಯೊಂದಿಗೆ ಒಂದು ವಿಚಾರಸಂಕೀರ್ಣವನ್ನು ತಾಲೂಕಿನಲ್ಲಿಹಮ್ಮಿಕೊಂಡು ಸೂಕ್ತ ಮಾಹಿತಿ,ಮಾರ್ಗದರ್ಶನ ನೀಡಲುನಿರ್ಧರಿಸಿದ್ದೇನೆ. ತಾಲೂಕಿನ ಯುವಜನತೆ ಸ್ಥಳೀಯ ಉತ್ಪನ್ನಗಳನ್ನುಒಳಗೊಂಡಂತೆ ಸಣ್ಣ-ಸಣ್ಣ ಕೈಗಾರಿಕೆಘಟಕ ಸ್ಥಾಪಿಸಿ ಸ್ವಾವಲಂಬನೆಯಬದುಕು ಜೊತೆಗೆ ಆರ್ಥಿಕ ಸದೃಢತೆಗೆನೆರವಾಗಲಿದೆ ಎಂದರು. ಸಿದ್ಧಾರ್ಥ,ಪ್ರಭಣ್ಣ, ಅಶೋಕ್, ಜಯರಾಮ್,ಕರಿಯಪ್ಪ, ಕೃಷ್ಣಪ್ಪ, ಎಚ್.ಎಲ್.ಕೃಷ್ಣಮೂರ್ತಿ, ಚಂದ್ರಾಪುರರಾಮಚಂದ್ರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.